Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್​; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು

TV9 Digital Desk

| Edited By: shruti hegde

Updated on:Oct 13, 2021 | 11:44 AM

ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ದೈಹಿಕವಾಗಿ ಸದೃಢರಾಗಲು ಮಾನಸಿಕ ಸ್ಥಿತಿ ಸುಧಾರಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ಈ ಪ್ರಯತ್ನದಲ್ಲಿ, ರೋಗಿಗಳನ್ನು ರಂಜಿಸಲು ಸುಮಧುರ ಕಂಠದಿಂದ ನರ್ಸ್​ ಹಾಡು ಹೇಳುತ್ತಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡುವಾಗ ಬರೆಯಲಾಗಿದೆ.

Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್​; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು
ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್

ರೋಗಿಗಳ ಆರೋಗ್ಯ ಸುಧಾರಣೆಯಾಗಲು ಅವರು ಮಾನಸಿಕವಾಗಿ ಸದೃಢರಾಗಬೇಕು. ಮನಸ್ಥಿತಿ ಬದಲಾದರೆ ಯಾವ ರೋಗವೂ ಬಹುಬೇಗ ನಿವಾರಣೆಯಾಗುತ್ತದೆ ಎಂಬ ಗುರಿಯೊಂದಿಗೆ ಆಸ್ಪತ್ರೆಯಲ್ಲಿ ನರ್ಸ್ ಹಾಡು ಹೇಳುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ. ಮೆಥೋಡಿಸ್ಟ್ ಆಸ್ಪತ್ರೆಯಲ್ಲಿ ನರ್ಸ್ ಹಾಡು ಹೇಳುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ದೃಶ್ಯ ಒಂದು ಕ್ಷಣ ಎಲ್ಲರನ್ನು ಭಾವುಕರನ್ನಾಗಿ ಮಾಡಿದೆ.

ರೋಗಿಯನ್ನು ಭಾವನಾತ್ಮಕವಾಗಿ ಗುಣಪಡಿಸುವ ಗುರಿಯೊಂದಿಗೆ ನರ್ಸ್ ಹಾಡು ಹೇಳುತ್ತಿದ್ದಾರೆ. ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ದೈಹಿಕವಾಗಿ ಸದೃಢರಾಗಲು ಮಾನಸಿಕ ಸ್ಥಿತಿ ಸುಧಾರಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ಈ ಪ್ರಯತ್ನದಲ್ಲಿ, ರೋಗಿಗಳನ್ನು ರಂಜಿಸಲು ಸುಮಧುರ ಕಂಠದಿಂದ ನರ್ಸ್​ ಹಾಡು ಹೇಳುತ್ತಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡುವಾಗ ಬರೆಯಲಾಗಿದೆ.

View this post on Instagram

A post shared by Methodist Healthcare SA, TX (@methodisthealthcaresa)

ಇದು ರೋಗಿಗಳು ಹೆಚ್ಚು ಭಯಗೊಳ್ಳುತ್ತಾರೆ. ಹಾಗಾಗಿ ಮೊದಲಿಗೆ ಅವರು ಮಾನಸಿಕವಾಗಿ ಸದೃಢರಾಗಬೇಕು. ಅವರಿಗೆ ಧೈರ್ಯ ಹೇಳಬೇಕು ಅವರು ಭಯದಿಂದ ಹೊರಬರಬೇಕು. ನಾನು ರೋಗಿಗಳನ್ನು ಅಪ್ಪಿಕೊಳ್ಳುತ್ತೇನೆ ಮತ್ತು ಸಂತೈಸುತ್ತೇನೆ. ಅವರಿಗಾಗಿ ಪಾರ್ಥಿಸುತ್ತೇನೆ ಆಗ ಸಂಪೂರ್ಣವಾಗಿ ಪಿಪಿಇ ಕಿಟ್ ಧರಿಸಿರುತ್ತೇನೆ. ಒಂದು ವರ್ಷದಿಂದ ನರ್ಸ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಂಡಾಗಿನಿಂದ 3,600ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ತುಂಬಾ ಸುಂದರವಾಗಿದೆ ಎಂದು ಓರ್ವರು ಅಭಿಪ್ರಾಯ ತಿಳಿಸಿದ್ದಾರೆ. ಇದು ಭರವಸೆ ತುಂಬುವ ವಿಡಿಯೋ ಎಂದು ಮತ್ತೋರ್ವರು ಹೇಳಿದ್ದಾರೆ. ದೃಶ್ಯ ನೋಡಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿತು, ಧನ್ಯವಾದಗಳು ಎಂದು ಕೆಲವರು ಹೇಳಿದ್ದಾರೆ. ಹೃದಯಸ್ಪರ್ಶಿ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು ನಾನಾ ಅಭಿಪ್ರಾಯಗಳು ಕೇಳಿ ಬಂದಿವೆ.

ಇದನ್ನೂ ಓದಿ:

Viral Video: ಹೋಮ್​ವರ್ಕ್​ ಮಾಡಲು ಬಾಲಕನಿಗೆ ಸಹಾಯ ಮಾಡುತ್ತಿರುವ ಶ್ವಾನ; ಸ್ನೇಹಿತರಿಬ್ಬರ ಕ್ಯೂಟ್ ವಿಡಿಯೋ ವೈರಲ್

Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada