ಹೈದರಾಬಾದ್​ನಲ್ಲಿ ಪತ್ತೆಯಾದ ಗರಿಗರಿ ನೋಟುಗಳ ಕಪಾಟು; 142 ಕೋಟಿ ಮೌಲ್ಯದ ಹಣ! ಫೋಟೋ ನೋಡಿ

Viral News: ಬರೋಬ್ಬರಿ 142 ಕೋಟಿ ಮೌಲ್ಯದ ಹಣ ಕಪಾಟಿನಲ್ಲಿ ತುಂಬಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ಹೈದರಾಬಾದ್​ನಲ್ಲಿ ಪತ್ತೆಯಾದ ಗರಿಗರಿ ನೋಟುಗಳ ಕಪಾಟು; 142 ಕೋಟಿ ಮೌಲ್ಯದ ಹಣ! ಫೋಟೋ ನೋಡಿ
ಹೈದರಾಬಾದ್​ನಲ್ಲಿ ಪತ್ತೆಯಾದ ಗರಿಗರಿ ನೋಟುಗಳ ಕಪಾಟು

ಬರೋಬ್ಬರಿ 142 ಕೋಟಿ ಮೌಲ್ಯದ ನೋಟುಗಳು ಕಪಾಟಿನಲ್ಲಿ ತುಂಬಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.  ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಹೈದರಾಬಾದ್​ನ ಔಷಧೀಯ ಕಂಪನಿಯ ರೇಡ್​ ಬಳಿಕ ಸಿಕ್ಕ ಹಣ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಕಪಾಟಿನಲ್ಲಿ ತುಂಬಿ ತುಳುಕುತ್ತಿದ್ದ ಬರೋಬ್ಬರಿ 142 ಕೋಟಿ ಮೌಲ್ಯದ ಹಣವನ್ನು ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಔಷಧಿ ತಯಾರಿಕೆ ಕಂಪನಿಯ ಮೇಲೆ ಐಟಿ ರೇಡ್ ನಡೆದಿದ್ದು ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತ ಹೇಳಿಕೆಯ ಪ್ರಕಾರ, ಐಟಿ ರೇಡ್​ನಲ್ಲಿ ಹಣವನ್ನು ಔಷಧೀಯ ಬಾಕ್ಸ್​ಗಳಲ್ಲಿ , ಕಪಾಟಿನಲ್ಲಿ ತುಂಬಿಟ್ಟಿರುವುದು ತಿಳಿದು ಬಂದಿದೆ.

ಟ್ಟಿಟರ್ ಬಳಕೆದಾದರು ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಹೈದರಾಬಾದ್​ನ ಔಷಧೀಯ ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್​ನಿಂದ ಇದು ಬಹಿರಂಗವಾಗಿದೆ. ಈ ಫೋಟೋ ನೋಡಿದ ತಕ್ಷಣ ಲಾಕರ್​ನಲ್ಲಿ ಬಟ್ಟೆಗಳನ್ನು ಇಟ್ಟುಕೊಂಡಿರಬೇಕು ಎಂದು ಅಂದಕೊಂಡೆ! ಎಂಬ ಶೀರ್ಷಿಕೆ ನೀಡುವ ಮೂಲಕ ಫೋಟೋ ಹರಿಬಿಟ್ಟಿದ್ದಾರೆ.

ಏತನ್ಮಧ್ಯೆ, ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಕೆಲವು ಬಳಕೆದಾರರು ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು ಹಾಸ್ಯ ಮಾಡಿದ್ದಾರೆ. ಇಲಾಖೆಯ ಔಷಧೀಯ ತಯಾರಿಕಾ ಕಂಪನಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Viral News: ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕನ ಕೈಯಿಂದ 1 ಲಕ್ಷ ರೂ. ಕಿತ್ತೆಸೆದ ಮಂಗ! ನೋಟುಗಳೆಲ್ಲಾ ರಸ್ತೆ ಪಾಲು

Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?

Read Full Article

Click on your DTH Provider to Add TV9 Kannada