Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್​ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!

Trending Video: ಮೊದಲ ಬಾರಿಗೆ ವಿಮಾನ ಹತ್ತಿದ ಪುಟ್ಟ ಹುಡುಗಿಯೊಬ್ಬಳು ಆ ವಿಮಾನದಲ್ಲಿ ತನ್ನ ಅಪ್ಪನೇ ಪೈಲಟ್ ಎಂದು ಗೊತ್ತಾಗುತ್ತಿದ್ದಂತೆ ಖುಷಿಯಿಂದ ಸಂಭ್ರಮಿಸಿದ್ದಾಳೆ.

Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್​ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!
ಅಪ್ಪನನ್ನು ಪೈಲಟ್ ಡ್ರೆಸ್​ನಲ್ಲಿ ನೋಡಿ ಖುಷಿಯಾದ ಬಾಲಕಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 12, 2021 | 8:38 PM

ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಅಮ್ಮನಿಗಿಂತಲೂ ಅಪ್ಪನೆಂದರೆ ಅಚ್ಚುಮೆಚ್ಚು. ಅಪ್ಪಂದಿರಿಗೂ ಅಷ್ಟೆ ಮಗನಿಗಿಂತ ಮಗಳೆಂದರೆ ಒಂದು ಮುಷ್ಠಿ ಜಾಸ್ತಿಯೇ ಪ್ರೀತಿ. ಮೊದಲ ಬಾರಿಗೆ ವಿಮಾನ ಹತ್ತಿದ ಪುಟ್ಟ ಹುಡುಗಿಯೊಬ್ಬಳು ಆ ವಿಮಾನದಲ್ಲಿ ತನ್ನ ಅಪ್ಪನೇ ಪೈಲಟ್ ಎಂದು ಗೊತ್ತಾಗುತ್ತಿದ್ದಂತೆ ಖುಷಿಯಿಂದ ಸಂಭ್ರಮಿಸಿದ್ದಾಳೆ. ಕೈಯಲ್ಲಿ ವಿಮಾನದ ಟಿಕೆಟ್ ಹಿಡಿದು, ಸೀಟ್ ಮೇಲೆ ಹತ್ತಿ ನಿಂತು ಪೈಲಟ್ ಡ್ರೆಸ್​ನಲ್ಲಿದ್ದ ಅಪ್ಪನನ್ನು ಕರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಮೊದಲ ಬಾರಿಗೆ ವಿಮಾನ ಹತ್ತಿದ್ದ ಆ ಹುಡುಗಿಗೆ ಅದರ ಖುಷಿ ಒಂದೆಡೆಯಾದರೆ ವಿಮಾನದೊಳಗೆ ಬಂದ ಕೂಡಲೆ ಪೈಲಟ್ ಸೀಟಿನಿಂದ ಎದ್ದು ಹೊರಗೆ ಬಂದ ಅಪ್ಪನನ್ನು ನೋಡಿ ಆದ ಖುಷಿ ಇನ್ನೊಂದೆಡೆ. ದೆಹಲಿಯ ಗೋ ಏರ್ ವಿಮಾನದಲ್ಲಿ ಅಪ್ಪ-ಮಗಳ ಈ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಮುದ್ದಾದ ಈ ವಿಡಿಯೋ ನೋಡಿದವರು ಆ ಪುಟ್ಟ ಹುಡುಗಿಯ ಖುಷಿ ಕಂಡು ತಾವೂ ಖುಷಿಯಾಗಿದ್ದಾರೆ.

ಶನಾಯ ಎಂಬ ಪುಟ್ಟ ಹುಡುಗಿ ‘ಪಪ್ಪಾ’ ಎಂದು ಜೋರಾಗಿ ಅಪ್ಪನನ್ನು ಕರೆಯುತ್ತಿರುವ ವಿಡಿಯೋ ಇಲ್ಲಿದೆ. ಮಗಳಿಗೆ ಸರ್​ಪ್ರೈಸ್ ಕೊಡಲೆಂದೇ ಅಪ್ಪ ಪೈಲಟ್ ಸೀಟಿನಿಂದ ಹೊರಗೆ ಬಂದು ನಿಂತಿದ್ದರು. ಬೇರೆ ಪ್ರಯಾಣಿಕರು ತಮ್ಮ ಸೀಟಿನತ್ತ ಹೋಗುತ್ತಿರುವಾಗ ಆ ಹುಡುಗಿಯ ಅಪ್ಪ ತನ್ನ ಮಗಳತ್ತ ದೂರದಿಂದಲೇ ಕೈ ಬೀಸಿ, ಸ್ಮೈಲ್ ಮಾಡಿದ್ದಾರೆ.

ಈ ವಿಡಿಯೋಗೆ ಇನ್​ಸ್ಟಾಗ್ರಾಂನಲ್ಲಿ 1.4 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. 12 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನೀವಿನ್ನೂ ಈ ವಿಡಿಯೋ ನೋಡದಿದ್ದರೆ ನೋಡಿಬಿಡಿ.

ಇದನ್ನೂ ಓದಿ: Viral Video: ನವರಾತ್ರಿ ದಿನವೇ 2 ತಲೆ, 3 ಕಣ್ಣುಗಳಿರುವ ಕರು ಜನನ; ದುರ್ಗೆಯ ಅವತಾರವೆಂದು ಪೂಜಿಸಿದ ಜನರು!

Viral Video: ಮನುಷ್ಯರಂತೇ ಕುಳಿತು ಬಟ್ಟೆ ಒಗೆಯುವ ಈ ಚಿಂಪಾಜಿಯ ವಿಡಿಯೋವನ್ನೊಮ್ಮೆ ನೀವು ನೋಡಲೇಬೇಕು!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ