Viral Video: ನವರಾತ್ರಿ ದಿನವೇ 2 ತಲೆ, 3 ಕಣ್ಣುಗಳಿರುವ ಕರು ಜನನ; ದುರ್ಗೆಯ ಅವತಾರವೆಂದು ಪೂಜಿಸಿದ ಜನರು!
Trending News: ಒರಿಸ್ಸಾದ ನಬ್ರಂಗ್ಪುರದಲ್ಲಿ ಎರಡು ತಲೆ, ಮೂರು ಕಣ್ಣುಗಳು ಇರುವ ಕರುವೊಂದು ಜನಿಸಿದೆ. ನವರಾತ್ರಿ ಸಂದರ್ಭದಲ್ಲೇ ಜನಿಸಿದ ಈ ಕರುವನ್ನು ದುರ್ಗಾ ದೇವಿಯ ಅವತಾರ ಎಂದು ಪೂಜಿಸಲಾಗುತ್ತಿದೆ.
ನಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳನ್ನು ನಮಗೆ ನಂಬಲು ಕಷ್ಟವಾಗುತ್ತದೆ. ಈ ರೀತಿಯ ವಿಸ್ಮಯಗಳನ್ನು ನಂಬಲು ಕಷ್ಟವಾದರೂ ನಂಬಲೇಬೇಕು. ಒರಿಸ್ಸಾದ ನಬ್ರಂಗ್ಪುರದಲ್ಲಿ ಎರಡು ತಲೆ, ಮೂರು ಕಣ್ಣುಗಳು ಇರುವ ಕರುವೊಂದು ಜನಿಸಿದೆ. ನವರಾತ್ರಿ ಸಂದರ್ಭದಲ್ಲೇ ಜನಿಸಿದ ಈ ಕರುವನ್ನು ದುರ್ಗಾ ದೇವಿಯ ಅವತಾರ ಎಂದು ಪೂಜಿಸಲಾಗುತ್ತಿದೆ. ಈ ವಿಶಿಷ್ಠವಾದ ಕರುವನ್ನು ನೋಡಲು ವಿವಿಧ ಕಡೆಗಳಿಂದ ಜನರು ಆಗಮಿಸುತ್ತಿದ್ದಾರೆ.
ನಬ್ರಂಗ್ಪುರದ ಧನಿರಾಂ ಎಂಬ ರೈತನ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪದ ಮತ್ತು ವಿಶೇಷವಾದ ಕರು ಹುಟ್ಟಿದೆ. ಎರಡು ತಲೆ, ಮೂರು ಕಣ್ಣುಗಳಿರುವ ಈ ಕರುವನ್ನು ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಕರು ಆರೋಗ್ಯದಿಂದಿದ್ದು, ದುರ್ಗಾ ಮಾತೆಯ ಪ್ರತಿರೂಪ ಎಂದು ಹಲವರು ಬಂದು ಪೂಜೆ ಸಲ್ಲಿಸಿದ್ದಾರೆ.
People in the locality of Bijapara village have begun worshipping a two headed calf as #Durga Avatar After it was born with two heads and three eyes on the occasion of #Navratri to a farmer in Odisha’s Nabrangpur District. #DurgaPuja @aajtak @IndiaToday pic.twitter.com/tz9i9mpJ0O
— Suffian सूफ़ियान سفیان (@iamsuffian) October 12, 2021
ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದರು. ಈ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಎರಡು ತಲೆಯ ಈ ಕರು ಎಲ್ಲರ ಗಮನ ಸೆಳೆಯುತ್ತಿದೆ. ಮುಕ್ಕಣ್ಣನಂತಿರುವ ಈ ಕರುವಿಗೆ ಎರಡು ತಲೆಗಳಿರುವುದರಿಂದ ಹಾಲು ಕುಡಿಯಲು ಕಷ್ಟವಾಗುತ್ತಿದೆ. ಹಸುವಿನ ಕೆಚ್ಚಲಿನಿಂದ ಕರುವಿಗೆ ಹಾಲು ಕುಡಿಯುವುದು ಕಷ್ಟವಾದ್ದರಿಂದ ಹೊರಗಿನಿಂದ ಪ್ಯಾಕೆಟ್ ಹಾಲನ್ನು ಖರೀದಿಸಿ ನೀಡಲಾಗುತ್ತಿದೆ.
ಇದನ್ನೂ ಓದಿ: Viral News: ಅಕ್ಕನ ಸಮಾಧಿ ಬಿಟ್ಟು ಕದಲದ ಬೆಕ್ಕು; ಮನ ಕಲಕುವ ವಿಡಿಯೋ ವೈರಲ್
Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?
Published On - 7:31 pm, Tue, 12 October 21