AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​

Shocking video: ಯುವತಿ ವಾಹನವನ್ನು ತನ್ನ ತಲೆ ಕೂದಲುಗಳಲ್ಲಿ ಕಟ್ಟಿ ಎಳೆದು ತರುತ್ತಿರುವ ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದೆ. ವಿಡಿಯೋ ನೋಡಿ..

Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​
ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ!
TV9 Web
| Updated By: shruti hegde|

Updated on:Oct 12, 2021 | 11:52 AM

Share

ವಾಹನಕ್ಕೆ ತನ್ನ ಕೂದಲನ್ನು ಕಟ್ಟಿ ಪೆಟ್ರೋಲ್ ಬಂಕ್​ಗೆ ವ್ಯಾನ್ಅನ್ನು ಎಳೆದು ತಂದ ಯುವತಿಯ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಿಡಿಯೋ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿದೆ. ವ್ಯಾನ್​ನಲ್ಲಿ ಇಂಧನ ಖಾಲಿ ಆದ್ದರಿಂದ ಯುವತಿ ವಾಹನವನ್ನು ತನ್ನ ಕೂದಲುಗಳಿಂದ ಎಳೆದು ತಂದಿದ್ದಾಳೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನಿರಂತರವಾಗಿ ಇಂಧನ ದರ ಏರುತ್ತಲೇ ಇರುವುದರಿಂದ ಮುಂದೊಂದು ದಿನ ಇದು ವಾಸ್ತವವಾಗಬಹುದು ಎಂದು ಓರ್ವರು ತಮಾಷೆ ಮಾಡಿದ್ದಾರೆ. ಯುವತಿ ಯಾವ ಶಾಂಪೂ ಉಪಯೋಗಿಸುತ್ತಾಳೆ ಎಂದು ಮತ್ತೋರ್ವರು ಪ್ರಶ್ನೆ ಮಾಡಿದ್ದಾರೆ. ಇವರ ಈ ಸಾಹಸ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಅಕ್ಟೋಬರ್ 4ರಂದು ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. 34 ವರ್ಷದ ಯುವತಿ ತನ್ನ ವ್ಯಾನ್ಅನ್ನು ತಲೆ ಕೂದಲುಗಳಲ್ಲಿ ಕಟ್ಟಿ ರಸ್ತೆಯಲ್ಲಿ ಎಳೆದು ತರುತ್ತಿರುವ ದೃಶ್ಯ ಸೆರೆಯಾಗಿದೆ. ರಸ್ತೆಯುದ್ದಕ್ಕೂ ವಾಹನವನ್ನು ಎಳೆದು ತಂದು ಪೆಟ್ರೋಲ್ ಬಂಕ್​ವರೆಗೆ ತಂದಿರುವ ಮಾಹಿತಿ ವರದಿಗಳಿಂದ ಲಭ್ಯವಾಗಿದೆ.

ಕೂದಲುಗಳಿಂದ ವಾಹನವನ್ನು ಎಳೆದು ತರುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕೆಲವು ಬಾರಿ ವಾಹನ ಕೈಕೊಟ್ಟಾಗ ಇಂಥಹ ಮಾರ್ಗಗಳನ್ನು ಬಳಸುವ ಕಲೆ ನನ್ನದು ಎಂದು ಅವರು ಹೇಳಿದ್ದಾರೆ. ನೋಡಲು ಬೆರಗಾಗುವಂತೆ ಮಾಡುವ ಈ ದೃಶ್ಯ ಕೆಲವು ಬಾರಿ ಅಪಾಯವನ್ನೂ ತಂದೊಡ್ಡಬಹುದು. 34 ವರ್ಷದ ಅನಸ್ತಾಸಿಯಾ ಪ್ರತಿ ದಿನ ಎರಡು ಬಾಟಲಿ ಕಂಡೀಷನರ್ ಬಳಸುವ ಮೂಲಕ ತಮ್ಮ ಕೂದಲಿನ ಆರೈಕೆ ಮಾಡುತ್ತಾರೆ. ತನ್ನ ಕೂದಲಿನ ಆರೈಕೆಗೆ ಆಕೆ ಹೆಚ್ಚು ಕಾಳಜಿ ಮಾಡುತ್ತಾಳೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Shocking News: ಯುವತಿ ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ತು ಮನುಷ್ಯನ ಬೆರಳು; ಬೆಚ್ಚಿಬೀಳಿಸಿದ ಘಟನೆಯ ತನಿಖೆ ಶುರು

Shocking News: ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಉಗುರು ಮತ್ತು ಕಬ್ಬಿಣದ ತುಂಡುಗಳನ್ನು ಹೊರತೆಗೆದ ವೈದ್ಯರು!

Published On - 11:40 am, Tue, 12 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ