Viral News: ಅಕ್ಕನ ಸಮಾಧಿ ಬಿಟ್ಟು ಕದಲದ ಬೆಕ್ಕು; ಮನ ಕಲಕುವ ವಿಡಿಯೋ ವೈರಲ್

Viral Photo: ಗುಜರಾತ್​ನ ವಲಸದ್​ನಲ್ಲಿ ಕೋಕೋ ಎಂಬ ಪರ್ಷಿಯನ್ ಬೆಕ್ಕೊಂದು ಸಾವನ್ನಪ್ಪಿತ್ತು. ಆದರೆ, ಅದರ ತಂಗಿ ಲಿಯೋ ತನ್ನ ಅಕ್ಕನ ಸಮಾಧಿಯನ್ನು ಬಿಟ್ಟು ಕದಲಲೇ ಇಲ್ಲ. ಇದನ್ನು ನೋಡಿದ ಕುಟುಂಬಸ್ಥರು ಕೂಡ ಅಚ್ಚರಿ ಪಟ್ಟಿದ್ದಾರೆ.

Viral News: ಅಕ್ಕನ ಸಮಾಧಿ ಬಿಟ್ಟು ಕದಲದ ಬೆಕ್ಕು; ಮನ ಕಲಕುವ ವಿಡಿಯೋ ವೈರಲ್
ಸಮಾಧಿ ಪಕ್ಕ ಮಲಗಿರುವ ಬೆಕ್ಕು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 29, 2021 | 7:22 PM

ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಭಾವನೆಗಳಿರುತ್ತವೆ. ನಾಯಿ, ಬೆಕ್ಕುಗಳು ತಮ್ಮ ಮಾಲೀಕರು, ತಮ್ಮ ಜೊತೆಗಿರುವವರ ಜೊತೆಗೆ ಬಹಳ ಆತ್ಮೀಯ ಸಂಬಂಧವನ್ನು ಹೊಂದಿರುತ್ತವೆ. ತನ್ನ ಜೊತೆಗೇ ಹುಟ್ಟಿ ಬೆಳೆದ ಮತ್ತೊಂದು ಬೆಕ್ಕಿನ ಸಾವಿನಿಂದ ತೀವ್ರವಾಗಿ ನೊಂದ ಬೆಕ್ಕು ತನ್ನ ಅಕ್ಕನ ಸಮಾಧಿಯ ಪಕ್ಕದಲ್ಲೇ ದಿನವಿಡೀ ಕುಳಿತು ಮೂಕವೇದನೆ ಅನುಭವಿಸಿರುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಗುಜರಾತ್​ನ ವಲಸದ್​ನಲ್ಲಿ ಕೋಕೋ ಎಂಬ ಪರ್ಷಿಯನ್ ಬೆಕ್ಕೊಂದು ಸಾವನ್ನಪ್ಪಿತ್ತು. ಆದರೆ, ಅದರ ತಂಗಿ ಲಿಯೋ ತನ್ನ ಅಕ್ಕನ ಸಮಾಧಿಯನ್ನು ಬಿಟ್ಟು ಕದಲಲೇ ಇಲ್ಲ. ಇದನ್ನು ನೋಡಿದ ಕುಟುಂಬಸ್ಥರು ಕೂಡ ಅಚ್ಚರಿ ಪಟ್ಟಿದ್ದಾರೆ. ಬೆಕ್ಕಿನ ಬಾಂಧವ್ಯ ಕಂಡು ತಾವೂ ಕಣ್ಣೀರು ಹಾಕಿದ್ದಾರೆ.

ಕೋಕೋ ಸಾವನ್ನಪ್ಪಿದ ಬಳಿಕ ಮನೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ಅದನ್ನು ಮಣ್ಣು ಮಾಡಲಾಗಿತ್ತು. ದಿನವಿಡೀ ಅದೇ ಜಾಗದಲ್ಲಿ ಕುಳಿತಿರುತ್ತಿದ್ದ ಮೃತ ಬೆಕ್ಕಿನ ತಂಗಿ ಲಿಯೋ ಆ ನೋವಿನಿಂದ ಇನ್ನೂ ಹೊರಬಂದಿಲ್ಲ. ರಾತ್ರಿಯೂ ಅದೇ ಜಾಗದಲ್ಲಿ ಮಲಗುತ್ತಿದ್ದು, ಹಾಲು ಕುಡಿಯದೆ, ತಿಂಡಿಯನ್ನೂ ತಿನ್ನದೆ ಮಂಕಾಗಿ ಅಕ್ಕನ ಸಮಾಧಿ ಬಳಿ ಕುಳಿತುಕೊಳ್ಳುತ್ತಿದ್ದ ಲಿಯೋನ ವಿಡಿಯೋ ನೋಡಿದರೆ ಮನ ಕಲಕದೆ ಇರದು.

ಲಿಯೋ- ಕೋಕೋ

ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಕೋ ಕಳೆದ ವಾರ ಸಾವನ್ನಪ್ಪಿತ್ತು. ಅಂದಿನಿಂದ ಲಿಯೋ ಅಕ್ಕನ ಸಮಾಧಿ ಬಳಿಯೇ ದಿನದ ಬಹುತೇಕ ಸಮಯವನ್ನು ಕಳೆಯುತ್ತಿದೆ. ಈ ದೃಶ್ಯವನ್ನು ನೋಡಲು ಹಲವು ದಿನಗಳಿಂದ ಸಾಕಷ್ಟು ಜನರು ಬರುತ್ತಿದ್ದಾರೆ. ಈ ಆಘಾತದಿಂದ ಹೊರಗೆ ಬರಲು ಆ ಮನೆಯವರು ಲಿಯೋ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.

4 ವರ್ಷಗಳ ಹಿಂದೆ ಲಿಯೋ ಮತ್ತು ಕೋಕೋ ಎಂಬ ಪರ್ಷಿಯನ್ ಬೆಕ್ಕನ್ನು ಮುನ್ನಾವರ್ ಮನೆಗೆ ತಂದಿದ್ದರು. ಒಂದೇ ತಾಯಿಯ ಮಕ್ಕಳಾಗಿದ್ದ ಇವರಿಬ್ಬರು ಒಟ್ಟಿಗೇ ಆಡಿಕೊಂಡಿದ್ದರು. ಆದರೆ, ಒಂದು ದಿನ ಮನೆಯ ಹೊರಗೆ ಆಟವಾಡುತ್ತಿದ್ದ ಕೋಕೋ ನಾಪತ್ತೆಯಾಗಿದ್ದಳು. ಆ ಬೆಕ್ಕನ್ನು ಯಾರೋ ಕದ್ದುಕೊಂಡು ಹೋಗಿದ್ದರು. ಆದರೆ, ಅದಾದ 6 ತಿಂಗಳ ಬಳಿಕ ಕೋಕೋ ಬೇರೊಬ್ಬರ ಮನೆಯಲ್ಲಿರುವುದನ್ನು ನೋಡಿ ಪಕ್ಕದ ಬೀದಿಯವರು ಮುನ್ನಾವರ್​ಗೆ ವಿಷಯ ತಿಳಿಸಿದ್ದರು. ಕೋಕೋ ಮನೆಯಿಂದ ನಾಪತ್ತೆಯಾದಾಗಿನಿಂದ ಲಿಯೋ ಒಂಟಿಯಾಗಿತ್ತು. ಕೊನೆಗೆ ಪೊಲೀಸರಿಗೆ ದೂರು ನೀಡಿ ಮುನ್ನಾವರ್ ಕೋಕೋವನ್ನು ಮನೆಗೆ ವಾಪಾಸ್ ಕರೆದುಕೊಂಡು ಬಂದಿದ್ದರು.

ಅದಾದ ಬಳಿಕ ಕೋಕೋ ಆರೋಗ್ಯ ಹದಗೆಟ್ಟಿತ್ತು. ಪರ್ಷಿಯನ್ ಬೆಕ್ಕಾದ್ದರಿಂದ ಆ ಮನೆಯಲ್ಲಿ ಸರಿಯಾದ ಕಾಳಜಿ ವಹಿಸದಿದ್ದರಿಂದ ಕೋಕೋ ಬಹಳ ವೀಕ್ ಆಗಿದ್ದಳು. ಕೋಕೋ ಮನೆಗೆ ವಾಪಾಸ್ ಬಂದ ಮೇಲೆ ಗೆಲುವಾಗಿದ್ದ ಲಿಯೋ ಮತ್ತೆ ಈಗ ಒಂಟಿಯಾಗಿದ್ದಾಳೆ. ತನ್ನ ಅಕ್ಕನನ್ನು ಮಣ್ಣು ಮಾಡಿದ ಜಾಗದಲ್ಲೇ ಇಡೀ ದಿನ ಕುಳಿತಿರುತ್ತಾಳೆ.

ಇದನ್ನೂ ಓದಿ: Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!

Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್

Published On - 7:20 pm, Wed, 29 September 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ