Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್

Viral News: ಉಬರ್ ಈಟ್ಸ್ ಡೆಲಿವರಿ ಬಾಯ್ ತಾನು ಗ್ರಾಹಕರಿಗೆ ನೀಡಬೇಕಾಗಿದ್ದ ಆಹಾರವನ್ನು ತಾನೇ ತಿಂದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 17, 2021 | 6:05 PM

ಇಂದಿನ ಆಧುನಿಕ ಕಾಲದಲ್ಲಿ ಫುಡ್ ಡೆಲಿವರಿ ಎಂಬುದು ಸಾಮಾನ್ಯವಾಗಿದೆ. ಹೋಟೆಲ್, ರೆಸ್ಟೋರೆಂಟ್​ಗೆ ಹೋಗುತ್ತಿದ್ದವರು ಈಗ ಮನೆ ಬಾಗಿಲಿಗೆ ಊಟ, ತಿಂಡಿಗಳನ್ನು ತರಿಸುವುದು ಅಭ್ಯಾಸವಾಗಿದೆ. ಕೊರೊನಾ ಆರ್ಭಟದ ಬಳಿಕ ಜನರು ಹೊರಗೆ ಹೋಗುವುದು ಕಡಿಮೆಯಾಗಿರುವುದರಿಂದ ಎಲ್ಲವನ್ನೂ ಆನ್​ಲೈನ್ ಡೆಲಿವರಿ ಮಾಡಲಾಗುತ್ತಿದೆ. ಆನ್​ಲೈನ್ ಡೆಲಿವರಿಯಲ್ಲಿ ಒಳ್ಳೆಯದು ಏನಿರುತ್ತದೋ ಅದೇರೀತಿ ಕೆಟ್ಟ ಅಂಶಗಳೂ ಇರುತ್ತವೆ. ಈ ಹಿಂದೆ ಕೂಡ ಜೊಮ್ಯಾಟೋ, ಸ್ವಿಗ್ಗಿ ಮುಂತಾದ ಫುಡ್ ಡೆಲಿವರಿ ಆ್ಯಪ್​ಗಳ ಸಿಬ್ಬಂದಿ ಡೆಲಿವರಿ ನೀಡುವಾಗ ಎಡವಟ್ಟಾದ ಹಲವು ಪ್ರಸಂಗಗಳು ನಡೆದಿದ್ದವು. ಅದೇರೀತಿ ಉಬರ್ ಈಟ್ಸ್ ಡೆಲಿವರಿ ಬಾಯ್ ತಾನು ಗ್ರಾಹಕರಿಗೆ ನೀಡಬೇಕಾಗಿದ್ದ ಆಹಾರವನ್ನು ತಾನೇ ತಿಂದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋವನ್ನು ಗಾರ್ಡನ್ ಸ್ಟೇಟ್ ಮಿಕ್ಸ್ ಯೂಟ್ಯೂಬ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು 1.8 ಲಕ್ಷ ಜನರು ನೋಡಿದ್ದಾರೆ. ರಸ್ತೆಯ ಪಕ್ಕದಲ್ಲಿ ತನ್ನ ವಾಹನವನ್ನು ನಿಲ್ಲಿಸಿ ಫುಟ್​ಪಾ್ ಬದಿ ಕುಳಿತಿರುವ ಡೆಲಿವರಿ ಬಾಯ್ ತಾನು ಡೆಲಿವರಿ ನೀಡಬೇಕಾದ ಆಹಾರವನ್ನೇ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ಡೆಲಿವರಿ ಪ್ಯಾಕೆಟ್​ನಲ್ಲಿರುವ ಆಹಾರದ ಸ್ವಲ್ಪ ಭಾಗವನ್ನು ತೆಗೆದು ತನ್ನ ಟಿಫಿಕ=ನ್ ಬಾಕ್ಸ್​ಗೆ ಹಾಕಿಕೊಳ್ಳುವ ಡೆಲಿವರಿ ಬಾಯ್ ನಂತರ ಆ ಪ್ಯಾಕೆಟ್ ಅನ್ನು ಹಾಗೇ ಸೀಲ್ ಮಾಡಿ ವಾಪಾಸ್​ ಬ್ಯಾಗ್​ನಲ್ಲಿಟ್ಟುಕೊಳ್ಳುತ್ತಾನೆ.

ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಆನ್​ಲೈನ್ ಡೆಲಿವರಿಯವರು ಹೀಗೆ ಮೋಸ ಮಾಡಿದರೆ ಮಾಡಿದರೆ ನಾವು ಹೇಗೆ ನಂಬಿ ಆರ್ಡರ್ ಮಾಡುವುದು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral Video: ರಾಷ್ಟ್ರಗೀತೆ ಸಾಲನ್ನೇ ಮರೆತ ಸಂಸದ; ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ವೈರಲ್

Viral Video: 22 ಅಡಿ ಉದ್ದದ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಹೋದ ವ್ಯಕ್ತಿ; ಮೈ ಜುಂ ಎನಿಸುವ ವಿಡಿಯೋ ಇಲ್ಲಿದೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ