Viral Video: ರಾಷ್ಟ್ರಗೀತೆ ಸಾಲನ್ನೇ ಮರೆತ ಸಂಸದ; ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ವೈರಲ್

ರಾಷ್ಟ್ರಗೀತೆ ಹಾಡುತ್ತಿರುವಾಗ ಸಾಲುಗಳನ್ನು ಮರೆತ ಸಮಾಜವಾದಿ ಪಕ್ಷದ ಸಂಸದ ಎಸ್​.ಟಿ. ಹಸನ್ ಕೆಲವು ಸಾಲುಗಳನ್ನು ಹಾರಿಸಿ ಸೀದಾ ಜಯಹೇ ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ಭಾರೀ ವೈರಲ್ ಆಗಿದೆ.

Viral Video: ರಾಷ್ಟ್ರಗೀತೆ ಸಾಲನ್ನೇ ಮರೆತ ಸಂಸದ; ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ವೈರಲ್
ಸಮಾಜವಾದಿ ಪಕ್ಷದ ಸಂಸದ ಹಸನ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 16, 2021 | 5:26 PM

ಮೊರಾದಾಬಾದ್: ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ (Independence Day) ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡುತ್ತಿರುವಾಗ ಸಾಲುಗಳನ್ನು ಮರೆತ ಸಮಾಜವಾದಿ ಪಕ್ಷದ ಸಂಸದ ಎಸ್​.ಟಿ. ಹಸನ್ ಕೆಲವು ಸಾಲುಗಳನ್ನು ಹಾರಿಸಿ ಸೀದಾ ಜಯಹೇ ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ಭಾರೀ ವೈರಲ್ ಆಗಿದೆ. 75ನೇ ಸ್ವಾತಂತ್ರ್ಯೋತ್ಸವದ ವೇಳೆ ಧ್ವಜಾರೋಹಣ ಮಾಡಿದ ಸಂಸದ ಎಸ್​.ಟಿ. ಹಸನ್ ರಾಷ್ಟ್ರಗೀತೆಯನ್ನು (National Anthem) ಮರೆತಿದ್ದಾರೆ. ಅವರ ಜೊತೆಗಿದ್ದವರು ಕೂಡ ಜನಗಣಮನ ಗೀತೆಯ ಸಾಲುಗಳನ್ನು ಮರೆತು ಕೊನೆ ಸಾಲಾದ ಜಯಹೇ ಜಯಹೇ ಹಾಡಿ ಮುಗಿಸಿದ್ದಾರೆ.

ರಾಷ್ಟ್ರಗೀತೆಯ ಮೊದಲಿನ ಕೆಲವು ಸಾಲುಗಳನ್ನು ಹಾಡಿದ ನಂತರ ತಡವರಿಸಿ ಸೀದಾ ಕೊನೆಯ ಸಾಲನ್ನು ಹಾಡಿದ ಸಂಸದ ಹಸನ್ ಅವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ರಾಷ್ಟ್ರಗೀತೆಯನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳದವರು ಎಂತಹ ಜನಪ್ರತಿನಿಧಿ? ಎಂದು ಸಾಕಷ್ಟು ನೆಟ್ಟಿಗರು ಟೀಕಿಸಿದ್ದಾರೆ.

ಈ ವಿಡಿಯೋವನ್ನು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಟ್ವೀಟ್ ಮಾಡಿಕೊಂಡಿದ್ದು, ಸಮಾಜವಾದಿ ಪಾರ್ಟಿ ಸಂಸದ ಹಾಗೂ ಕಾರ್ಯಕರ್ತರನ್ನು ಗೇಲಿ ಮಾಡಿದ್ದಾರೆ. ‘ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ಸೀದಾ ಜಯಹೇ ಜಯಹೇ ಹಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡಿದ್ದರು. ಆದರೆ, ನಿಮಗೆ ರಾಷ್ಟ್ರಗೀತೆ ಬರುವುದಿಲ್ಲ ಎಂದ ಮಾತ್ರಕ್ಕೆ ಬೇರೆಯವರಿಗೂ ಬರುವುದಿಲ್ಲ ಎಂದು ಅರ್ಥವಲ್ಲ, ನೀವು ಮಾಡಿದ ತಪ್ಪು ಎಲ್ಲರಿಗೂ ಗೊತ್ತಾಗಿದೆ. ವಾಹ್ ಸಮಾಜವಾದಿಗಳೇ ವಾಹ್!’ ಎಂದು ಸಂಬಿತ್ ಪಾತ್ರಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು

Shocking Video: ಅಡ್ಡ ಹಾಕಿದ ಪೊಲೀಸನ್ನೇ ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು ಚಾಲಕ; ಶಾಕಿಂಗ್ ವಿಡಿಯೋ ವೈರಲ್

(Viral Video Samajwadi Party MP Forgets National Anthem Quickly Moves on to Jai Hai on Independence Day)

Published On - 5:18 pm, Mon, 16 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ