ಕ್ಯಾನ್ಸರ್ ಚಿಕಿತ್ಸೆ ಪಡೆದು ಮತ್ತೆ ಒಂದಾದ 3 ವರ್ಷದ ಸ್ನೇಹಿತರು; ಮನಕಲಕುವ ವಿಡಿಯೊ ನೋಡಿ
ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಕೊಂಡ ಮಕ್ಕಳಿಬ್ಬರು ಆಪ್ತ ಗೆಳಯರಾದರು. ಇಬ್ಬರೂ ಸಹ ಚಿಕಿತ್ಸೆಯಿಂದ ಗೆದ್ದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಮತ್ತೆ ಒಂದಾದ ಸ್ನೇಹಿತರ ವಿಡಿಯೋ ಮನಸ್ಸಿಗೆ ಖುಷಿ ನೀಡುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ಸುದ್ದಿಗಳು ಮನಕಲಕುವಂತಿರುತ್ತವೆ. ಅಂಥಹುದೇ ವಿಡಿಯೋ ಇದೀಗ ವೈರಲ್ ಆಗಿದೆ. ಕ್ಯಾನ್ಸರ್ ತಗುಲಿದ್ದ 3 ವರ್ಷದ ಯುವಕನ ಆಸೆ ಆತನ ಸ್ನೇಹಿತೆಯನ್ನು ಭೇಟಿ ಮಾಡುವುದಾಗಿತ್ತು.. ಚಿಕಿತ್ಸೆಗಳನ್ನೆಲ್ಲಾ ಮುಗಿಸಿದ ಬಳಿಕ ಮೊದಲು ಸ್ನೇಹಿತೆಯನ್ನು ಭೇಟಿ ಮಾಡಿ ಸಂತಸ ಹೊರಹಾಕಿದ್ದಾನೆ. ಇವರ ಸ್ನೇಹದ ವಿಡಿಯೋ ಹ್ರದಯ ಗೆಲ್ಲುತ್ತದೆ. ವಿಡಿಯೋ ಇದೆ ನೀವೂ ನೋಡಿ.
ಪೇಸನ್ ಆಲ್ಟಿಸ್ ಮತ್ತು ಮ್ಯಾಕ್ ಪೋರ್ಟ್ ಎಂಬ ಇಬ್ಬರು ಸ್ನೇಹಿತರು 3 ವರ್ಷ ವಯಸ್ಸಿನವರು. ಇಬರಿಬ್ಬರ ಸ್ನೇಹ ಚಿಗುರಿದ್ದು ಫೀನಿಕ್ಸ್ ಮಕ್ಕಳ ಆಸ್ಪತ್ರೆಯಲ್ಲಿ. ಕ್ಯಾನ್ಸರ್ ಚಿತ್ಸೆಗಾಗಿ ಆಸ್ಪತ್ರೆಗೆ ಸೇರಿಕೊಂಡ ಮಕ್ಕಳಿಬ್ಬರು ಆಪ್ತ ಗೆಳಯರಾದರು. ಇಬ್ಬರೂ ಸಹ ಚಿಕಿತ್ಸೆಯಿಂದ ಗೆದ್ದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಮತ್ತೆ ಒಂದಾದ ಸ್ನೇಹಿತರ ವಿಡಿಯೋ ಮನಸ್ಸಿಗೆ ಖುಷಿ ನೀಡುತ್ತದೆ.
ಈ ಪುಟ್ಟ ಮಕ್ಕಳ ವಿಡಿಯೋ ಖಂಡಿತವಾಗಿಯೂ ಜೀವನದಲ್ಲಿ ಭರವಸೆಯ ಕಿರಣವನ್ನು ತುಂಬುತ್ತದೆ. ಎಲ್ಲ ಜನರಿಗೆ ಸ್ಪೂರ್ತಿ ತುಂಬುವ ವಿಡಿಯೋ ಇದಾಗಿದ್ದು, ಆತ್ಮಸ್ಥೈರ್ಯ ತುಂಬುವ ವಿಡಿಯೋ ಇದಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೃದಯಸ್ಪರ್ಶಿ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಪೇಸನ್ ಮತ್ತು ಮ್ಯಾಕ್ ಫಾರೆವೆರ್ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಇಬ್ಬರು ಪುಟ್ಟ ಮಕ್ಕಳು ತಮ್ಮ ಸ್ನೇಹವನ್ನು ಹೂಗುಚ್ಛ ನೀಡಿ ಸಂಭ್ರಮಿಸುವುದನ್ನು ಕಾಣಬಹುದು. ಇಬ್ಬರೂ ಸೇರಿ ಕೈ ಹಿಡಿದು ಖುಷಿಯಿಂದ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ.
View this post on Instagram
ನಮ್ಮ ಮಕ್ಕಳು ಸ್ನೇಹಿತರಾಗುವುದನ್ನು ನೋಡಲು ತುಂಬಾ ಖುಷಿ ಇದೆ ಎಂದು ಮ್ಯಾಕ್ ತಾಯಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತುಂಬಾ ಮುದ್ದಾದ ವಿಡಿಯೋವಿದು.. ಎಂದು ಇನ್ಸ್ಟಾಗ್ರಾಂ ಬಳಕೆದಾದರು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ನೋಡಿದಾಕ್ಷಣ ಕಣ್ತುಂಬಿ ಬಂತು ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 166 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಟ್ವಿಟರ್ನಲ್ಲಯೂ ಸಹ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
Viral Video: ಅಮ್ಮನಿಗೆ ಮಗನಿಂದ ಸರ್ಪ್ರೈಸ್ ಕಾರ್ ಗಿಫ್ಟ್; ಹೋ.. ಅಂದ ಅಮ್ಮನ ಪ್ರತಿಕ್ರಿಯೆಗೆ ಮಗ ಕಂಗಾಲು
Viral Video: ಅಸಹಾಯಕ ವೃದ್ಧೆಗೆ ತಿಂಡಿ ತಿನ್ನಿಸಿದ ಪೊಲೀಸ್; ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ
(Three year old friends meet after cancer treatment video viral)