ಹಳೇ ಫ್ರಿಡ್ಜ್ ಖರೀದಿಸಿ ಮನೆಗೆ ತಂದಾಗ ಅದರಲ್ಲಿತ್ತು 96 ಲಕ್ಷ ರೂಪಾಯಿ!
ಭಾರತೀಯ ರೂಪಾಯಿ ಮೌಲ್ಯ ಸುಮಾರು 96 ಲಕ್ಷ ರೂ. ಈ ಹಿಂದೆ ರೆಫ್ರಿಜರೇಟರ್ ಬಳಸಿದ ವ್ಯಕ್ತಿ ಫ್ರಿಡ್ಜ್ ಕೆಳಗೆ ಅಷ್ಟೊಂದು ಹಣವನ್ನು ಟೇಪ್ ಮಾಡಿ ಇಟ್ಟಿದ್ದರು.
ಅದೃಷ್ಟ ಯಾವಾಗ ಯಾರನ್ನು ಹುಡುಕಿ ಬರುತ್ತೊ ಹೇಳಲಾಗುವುದಿಲ್ಲ. ಆದರೆ ಕೆಲವೊಂದು ಬಾರಿ ಅದೃಷ್ಟ ಫ್ರಿಜ್ ರೂಪದಲ್ಲೂ ಬರುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ದಕ್ಷಿಣ ಕೊರಿಯಾದ ಜೆಜು ದ್ವೀಪದ ವ್ಯಕ್ತಿಯೊಬ್ಬ ಫ್ರಿಡ್ಜ್ ಖರೀದಿಸಲು ಮುಂದಾಗಿದ್ದ. ಆರ್ಥಿಕವಾಗಿ ಹಿಂದುಳಿದ್ದರಿಂದ ಆತನಲ್ಲಿ ಹೊಸ ರೆಫ್ರಿಜರೇಟರ್ ಖರೀದಿಸುವಷ್ಟು ಹಣವಿರಲಿಲ್ಲ. ಹೀಗಾಗಿ ಸೆಕೆಂಡ್ ಹ್ಯಾಡ್ ಫ್ರಿಡ್ಜ್ ಮೊರೆ ಹೋಗಿದ್ದ. ಹೀಗೆ ಖರೀದಿಸಿ ತಂದ ಫ್ರಿಡ್ಜ್ ಅನ್ನು ನೋಡಿದಾಗ ಆತನ ಕಣ್ಣುಗಳು ಕೂಡ ತಂಪಾಗಿಬಿಟ್ಟಿದೆ.
ಹೌದು, ಆ ಹಳೆಯ ಫ್ರಿಡ್ಜ್ನಲ್ಲಿ ಬರೋಬ್ಬರಿ 1,30,000 ಡಾಲರ್ ಇತ್ತು. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 96 ಲಕ್ಷ ರೂ. ಈ ಹಿಂದೆ ರೆಫ್ರಿಜರೇಟರ್ ಬಳಸಿದ ವ್ಯಕ್ತಿ ಫ್ರಿಡ್ಜ್ ಕೆಳಗೆ ಅಷ್ಟೊಂದು ಹಣವನ್ನು ಟೇಪ್ ಮಾಡಿ ಇಟ್ಟಿದ್ದರು. ಫ್ರಿಡ್ಜ್ನ ತಳಭಾಗ ಸ್ವಚ್ಛಗೊಳಿಸುವಾಗ ಪ್ಲಾಸ್ಟಿಕ್ನಲ್ಲಿ ಸುತ್ತಿರುವ ಟೇಪ್ ಮಾಡಲಾಗಿರುವ 50,000 ಕೊರಿಯನ್ ವಾನ್‍ನ ನೋಟ್ ಬಂಡಲ್ ಕಾಣಿಸಿತು.
ಯಾರಿಗೆ ಹೊಸ ಫ್ರಿಡ್ಜ್ ಖರೀದಿಸಲು ಹಣವಿರಲಿಲ್ಲವೋ ಆತನಿಗೆ ಫ್ರಿಡ್ಜ್ನಲ್ಲೇ 1 ಲಕ್ಷ 30 ಸಾವಿರ ಡಾಲರ್ ಲಭಿಸಿತ್ತು. ಇದಾಗ್ಯೂ ಪರರ ಹಣವನ್ನು ಬಳಸುವುದು ಆ ಬಡಪಾಯಿಗೆ ಇಷ್ಟವಿರಲಿಲ್ಲ. ಹೀಗಾಗಿ ನೇರವಾಗಿ ಅಷ್ಟೊಂದು ಹಣವನ್ನು ಪೊಲೀಸರಿಗೆ ಒಪ್ಪಿಸಿದ. ಇದೀಗ ಪೊಲೀಸರು ಹಳೆಯ ಫ್ರಿಡ್ಜ್ ಮಾಲೀಕನ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಹಳೆಯ ಮಾಲೀಕ ಸಿಗದಿದ್ದರೆ, ಆ ಹಣ ಮತ್ತೆ ಈ ಅದೃಷ್ಟಶಾಲಿಯ ಕೈ ಸೇರಲಿದೆ.
ಏಕೆಂದರೆ ದಕ್ಷಿಣ ಕೊರಿಯಾದ ಲೋಸ್ಟ್ ಅಂಡ್ ಫೌಂಡ್ ಕಾಯ್ದೆ ಜಾರಿಯಲ್ಲಿದೆ. ಪೊಲೀಸರಿಗೆ ಒಪ್ಪಿಸಿದ ವಸ್ತುವಿನ ಮಾಲೀಕ ಸಿಗದಿದ್ದರೆ, ಆ ವಸ್ತು ಯಾರಿಗೆ ಸಿಕ್ಕಿರುತ್ತೊ ಅವರಿಗೆ ಒಪ್ಪಿಸಲಾಗುತ್ತದೆ. ಹೀಗಾಗಿ ಹಳೆಯ ಫ್ರಿಡ್ಜ್ ಮಾಲೀಕ ಸಿಗದಿದ್ದರೆ ಶೇ. 22 ರಷ್ಟು ತೆರಿಗೆ ಕಳೆದು ಉಳಿದ ಮೊತ್ತ ಫ್ರಿಡ್ಜ್ ಖರೀದಿಸಿದ ವ್ಯಕ್ತಿಗೆ ಸಿಗಲಿದೆ.
ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?
ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ
ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್ಗೆ ಅಫ್ಘಾನಿಸ್ತಾನ್ ತಂಡ ಅನುಮಾನ
(Man buys used refrigerator and finds Rs 96 lakh cash taped underneath)