T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?
Virat Kohli's Birthday: ಈ ವಿಶ್ವಕಪ್ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 33ನೇ ಹುಟ್ಟುಹಬ್ಬ ಆಚರಿಸಲಿರುವುದು ಮತ್ತೊಂದು ವಿಶೇಷ.
T20 World Cup: ಯುಎಇ-ಓಮಾನ್ ದೇಶಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ವೇಳಾಪಟ್ಟಿ (T20 World Cup Schedule) ಬಿಡುಗಡೆಯಾಗಿದೆ. ಅಕ್ಟೋಬರ್ 17 ರಂದು ಶುರುವಾಗಲಿರುವ ಚುಟುಕು ಕದನ ನವೆಂಬರ್ 14 ರಂದು ಅಂತ್ಯಗೊಳ್ಳಲಿದೆ. ಅಕ್ಟೋಬರ್ 17 ರಿಂದ ಮೊದಲ ಸುತ್ತಿನ ಪಂದ್ಯಗಳು ನಡೆಯಲಿದ್ದು, ಈ ಸುತ್ತಿನಲ್ಲಿ 8 ತಂಡಗಳು ಸೆಣಸಲಿದೆ. ಎರಡೂ ಗುಂಪುಗಳ ಅಗ್ರ 2 ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯಲಿದೆ. ಆ ಬಳಿಕ ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಾವಳಿ ಆರಂಭವಾಗಲಿದೆ. ಇನ್ನು ಟೀಮ್ ಇಂಡಿಯಾ (Team India) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ (Pakistan) ವಿರುದ್ದದ ಪಂದ್ಯದೊಂದಿಗೆ ಈ ಬಾರಿ ಟಿ20 ವಿಶ್ವಕಪ್ (T20 World Cup) ಅಭಿಯಾನ ಆರಂಭಿಸುತ್ತಿರುವುದು ವಿಶೇಷ. ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಮ್ ಇಂಡಿಯಾ ಗ್ರೂಪ್ 2 ನಲ್ಲಿದ್ದು, ಲೀಗ್ ಹಂತದಲ್ಲಿ ಒಟ್ಟು 5 ಪಂದ್ಯಗಳನ್ನು ಆಡಲಿದೆ. ಪಾಕ್ ವಿರುದ್ದ ಅಕ್ಟೋಬರ್ 24 ರಂದು ಮೊದಲ ಪಂದ್ಯವಾಡಿದರೆ, ಅಕ್ಟೋಬರ್ 31 ರಂದು ನ್ಯೂಜಿಲ್ಯಾಂಡ್, ನವೆಂಬರ್ 3 ರಂದು ಅಫ್ಘಾನಿಸ್ತಾನ, ನವೆಂಬರ್ 5 ಮತ್ತು 8 ರಂದು ಅರ್ಹತಾ ಸುತ್ತಿನಿಂದ ಸೂಪರ್ 12 ಗೆ (Super 12) ಆಯ್ಕೆಯಾದ ತಂಡಗಳ ಜೊತೆ ಆಡಲಿದೆ.
ಇನ್ನು ಈ ವಿಶ್ವಕಪ್ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 33ನೇ ಹುಟ್ಟುಹಬ್ಬ (Virat Kohli’s Birthday) ಆಚರಿಸಲಿರುವುದು ಮತ್ತೊಂದು ವಿಶೇಷ. ಅದರಲ್ಲೂ ಕೊಹ್ಲಿ ಹುಟ್ಟುಹಬ್ಬದ ದಿನ ಭಾರತಕ್ಕೆ ಮ್ಯಾಚ್ ಇರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಬೇಕಿದೆ. ಆದರೆ ಕೊಹ್ಲಿಯ ಹುಟ್ಟುಹಬ್ಬ ದಿನದಂದು ಕಣಕ್ಕಿಳಿಯುವ ಎದುರಾಳಿ ತಂಡ ಯಾವುದು ಎಂಬುದು ಇನ್ನೂ ಕನ್ಫರ್ಮ್ ಆಗಿಲ್ಲ.
ಏಕೆಂದರೆ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ತಂಡವು ನವೆಂಬರ್ 5 ರಂದು ಟೀಮ್ ಇಂಡಿಯಾ ವಿರುದ್ದ ಆಡಬೇಕಿದೆ. ಅದೇ ದಿನ ವಿರಾಟ್ ಕೊಹ್ಲಿ ತಮ್ಮ 33ನೇ ಹುಟ್ಟುಹಬ್ಬ ಕೂಡ ಆಚರಿಸಲಿದ್ದಾರೆ. ಅಂದರೆ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗ್ರೂಪ್ Bಯಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಟೀಮ್ ಇಂಡಿಯಾಗೆ (Team India) ಎದುರಾಳಿ ಆಗಿರಲಿದೆ. ಈ ಪಟ್ಟಿಯಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಒಮಾನ್ ತಂಡಗಳಿವೆ. ಇದರಲ್ಲಿ ಒಂದು ತಂಡ ಕೊಹ್ಲಿ ಬರ್ತ್ಡೇ ದಿನದಂದು ಟೀಮ್ ಇಂಡಿಯಾವನ್ನು ಎದುರಿಸಲಿದೆ.
ಒಟ್ಟಿನಲ್ಲಿ ಟಿ20 ವಿಶ್ವಕಪ್ಗೂ (T20 World Cup) ಮುನ್ನ ಟೀಮ್ ಇಂಡಿಯಾ ಆಟಗಾರರು ಯುಎಇನಲ್ಲಿ ಐಪಿಎಲ್ (IPL 2021) ಆಡುವುದರಿಂದ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಕೊಹ್ಲಿ ಪಡೆಯು ಮುಂಚೂಣಿಯಲ್ಲಿದೆ. ಹೀಗಾಗಿ ಯುಎಇನಲ್ಲಿ ವಿರಾಟ್ ಕೊಹ್ಲಿ ಚೊಚ್ಚಲ ಐಸಿಸಿ ಪ್ರಶಸ್ತಿಗೆ ಮುತ್ತಿಕ್ಕಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಗ್ರೂಪ್-1 ತಂಡಗಳು ಹೀಗಿವೆ: ಇಂಗ್ಲೆಂಡ್ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ಅರ್ಹತಾ ಸುತ್ತಿನ ಗ್ರೂಪ್ ಎ1 ತಂಡ ಅರ್ಹತಾ ಸುತ್ತಿನ ಗ್ರೂಪ್ ಬಿ2 ತಂಡ
ಗ್ರೂಪ್-2 ತಂಡಗಳು ಹೀಗಿವೆ: ಭಾರತ ಪಾಕಿಸ್ತಾನ ನ್ಯೂಜಿಲೆಂಡ್ ಅಪ್ಘಾನಿಸ್ತಾನ ಅರ್ಹತಾ ಸುತ್ತಿನ ಗ್ರೂಪ್ ಎ2 ತಂಡ ಅರ್ಹತಾ ಸುತ್ತಿನ ಗ್ರೂಪ್ ಬಿ1 ತಂಡ
ಅರ್ಹತಾ ಸುತ್ತಿನ ತಂಡಗಳು ಹೀಗಿವೆ: ಗ್ರೂಪ್ ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ ಗ್ರೂಪ್ ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಒಮಾನ್
(T20 World Cup: Which Team Will Play Against India On Virat Kohli’s Birthday)