AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆಯ ಬೆನ್ನೇರಿ ಕುಳಿತು ಹಣ್ಣುಗಳನ್ನು ಸವಿಯುತ್ತಿರುವ ಮರಿ ಮಂಗನ ವಿಡಿಯೋ ವೈರಲ್; 12 ಮಿಲಿಯನ್ ವೀಕ್ಷಣೆ ಪಡೆದ ದೃಶ್ಯವಿದು

Viral Video: ದೂರದಿಂದ ಓಡಿ ಬರುತ್ತಿದ್ದ ಮೇಕೆಯನ್ನು ನೋಡಿದಾಕ್ಷಣ ಕುತ್ತಿಗೆಗೆ ಭಾರವಾದ ವಸ್ತುವೊಂದು ಜೋತು ಬಿದ್ದಂತೆ ಅನಿಸುತ್ತದೆ. ಆದರೆ ಮೇಕೆ ಹತ್ತಿರಕ್ಕೆ ಬಂದಂತೆಯೇ ಮಂಗನ ಮರಿ ಕುತ್ತಿಗೆ ಹಿಡಿದು ನೇತಾಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.

ಮೇಕೆಯ ಬೆನ್ನೇರಿ ಕುಳಿತು ಹಣ್ಣುಗಳನ್ನು ಸವಿಯುತ್ತಿರುವ ಮರಿ ಮಂಗನ ವಿಡಿಯೋ ವೈರಲ್; 12 ಮಿಲಿಯನ್ ವೀಕ್ಷಣೆ ಪಡೆದ ದೃಶ್ಯವಿದು
ಮೇಕೆಯ ಬೆನ್ನೇರಿ ಕುಳಿತು ಹಣ್ಣುಗಳನ್ನು ಸವಿಯುತ್ತಿರುವ ಮರಿ ಮಂಗನ ವಿಡಿಯೋ ವೈರಲ್
TV9 Web
| Edited By: |

Updated on: Sep 29, 2021 | 12:21 PM

Share

ಮೇಕೆಯ ಬೆನ್ನೇರಿ ಕುಳಿತ ಮರಿ ಮಂಗನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಿನಲ್ಲಿ ಓರ್ವ ವ್ಯಕ್ತಿಯು ಹಣ್ಣುಗಳನ್ನು ಹಿಡಿದು ಮೇಕೆಯನ್ನು ಕರೆಯುತ್ತಾನೆ. ಮೇಕೆಯ ಜತೆಗೆ ಆಪ್ತ ಸ್ನೇಹಿತ, ಮಂಗನ ಮರಿ ಕೂಡಾ ಬಂದಿದೆ. ಮೇಕೆ ಹಣ್ಣುಗಳನ್ನು ತಿನ್ನುತ್ತಿದ್ದಂತೆಯೇ ಮಂಗನ ಮರಿ ಕೂಡಾ ಮೇಕೆಯ ಮೈಮೇಲೆ ಕುಳಿತು ಹಣ್ಣುಗಳನ್ನು ಸವಿಯುತ್ತಿದೆ. ಇವರಿಬ್ಬದ ಗೆಳೆತನದ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಮೊದಲಿಗೆ ಒಂದು ಹಣ್ಣನ್ನು ತಿನ್ನಲು ಯೋಚಿಸುತ್ತಿದ್ದ ಮಂಗನ ಮರಿ ನಂತರ ಒಂದಾದ ಮೇಲೊಂದು ಹಣ್ಣನ್ನು ತಿನ್ನುತ್ತಿದೆ. ಹಣ್ಣನ್ನು ತಿನ್ನಲು ಸುಲಭವಾಗುವಂತೆ ಮೇಕೆಯ ಬೆನ್ನಿನ ಮೇಲೆ ಏರಿ ಕುಳಿತಿದೆ. ವ್ಯಕ್ತಿಯ ಕೈಗಳಲ್ಲಿದ್ದ ಬೆರ್ರಿ ಹಣ್ಣಗಳನ್ನು ಸವಿಯುತ್ತಿದೆ. ಎರಡು ಪುಟ್ಟ ಪ್ರಾಣಿಗಳ ನಡುವಿನ ಅದ್ಭುತ ಸೌಹಾರ್ದತೆಯನ್ನು ತೋರಿಸುವ ವಿಡಿಯೋ ಇದಾಗಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಮೊದಲಿಗೆ ಹಂಚಿಕೊಳ್ಳಲಾಗಿದ್ದು, ಬಳಿಕ ಇನ್ನಿತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಇಲ್ಲಿಯವರೆಗೆ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ದೂರದಿಂದ ಓಡಿ ಬರುತ್ತಿದ್ದ ಮೇಕೆಯನ್ನು ನೋಡಿದಾಕ್ಷಣ ಕುತ್ತಿಗೆಗೆ ಭಾರವಾದ ವಸ್ತುವೊಂದು ಜೋತು ಬಿದ್ದಂತೆ ಅನಿಸುತ್ತದೆ. ಆದರೆ ಮೇಕೆ ಹತ್ತಿರಕ್ಕೆ ಬಂದಂತೆಯೇ ಮಂಗನ ಮರಿ ಕುತ್ತಿಗೆ ಹಿಡಿದು ನೇತಾಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಕೆಲವರು ವಿಡಿಯೋ ಮುದ್ದಾಗಿದೆ ಎಂದು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಹೆಚ್ಚಿನವರು ವಿಡಿಯೋ ಇಷ್ಟಪಟ್ಟಿದ್ದು, ವಿಡಿಯೋ ಹಂಚಿಕೊಂಡಿರುವವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ

(An adorable video viral of a baby monkey and goat friendship This is a 12 million views)