Viral Video: ಸಿಟ್ಟಿನಲ್ಲಿ ಸರ್ಕಾರಿ ಬಸ್ಸಿಗೆ ಗುದ್ದಿದ ಆನೆ! ಗ್ಲಾಸ್ ಪುಡಿ ಪುಡಿ; ವಿಡಿಯೋ ನೋಡಿ
ಆನೆ ರಸ್ತೆಗೆ ಬರುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ಹಿಂದಕ್ಕೆ ಚಲಿಸಿದನು. ಅದನ್ನು ಗಮನಿಸಿದ ಆನೆ ಸಿಟ್ಟಿನಲ್ಲಿ ಬಸ್ಸಿನ ಗಾಜಿಗೆ ಗುದ್ದಿದೆ.
ಸರ್ಕಾರಿ ಬಸ್ ಮೇಲೆ ದೈತ್ಯಾಕಾರದ ಆನೆಯೊಂದು ದಾಳಿ ನಡೆಸಿದ ಘಟನೆ ತಮಿಳುನಾಡಿನ ನೀಲಗಿರಿಯಲ್ಲಿ ನಡೆದಿದೆ. ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಸರ್ಕಾರಿ ಬಸ್ಸನ್ನು ದೈತ್ಯ ಆನೆಯೊಂದು ಅಡ್ಡ ಹಾಕಿ ಬಸ್ ಎದುರಿಗಿನ ಗಾಜನ್ನು ಒಡೆದಿದೆ. ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರು ಈ ಭಯಾನಕ ದೃಶ್ಯವನ್ನುಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸಿಟ್ಟಿನಲ್ಲಿದ್ದ ಆನೆ ಗಾಜನ್ನು ಒಡೆಯುತ್ತಿರುವ ಭಯಾನಕ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.
ಆನೆ ರಸ್ತೆಗೆ ಬರುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ಹಿಂದಕ್ಕೆ ಚಲಿಸಿದನು. ಅದನ್ನು ಗಮನಿಸಿದ ಆನೆ ಸಿಟ್ಟಿನಲ್ಲಿ ಬಸ್ಸಿನ ಗಾಜಿಗೆ ಗುದ್ದಿದೆ. ಇದರ ಪರಿಣಾಮ ಬಸ್ಸಿನ ಗಾಜು ಒಡೆದು ಹೋಗಿದೆ. ಕೆಲವು ಸೆಕೆಂಡುಗಳ ಬಳಿಕ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ.
Huge respect for the driver of this Government bus in Nilgiris who kept his cool even under the terrifying hits on the bus from an agitated tusker.He helped passengers move back safely, in an incident today morning. Thats why they say a cool mind works wonders VC- by a friend pic.twitter.com/SGb3yqUWqK
— Supriya Sahu IAS (@supriyasahuias) September 25, 2021
ಚಾಲಕ ಆನೆಯ ಗಮನ ಬಸ್ ಮೇಲಿರುವಂತೆ ಎಚ್ಚರವಹಿಸಿದರು ಮತ್ತು ಪ್ರಯಾಣಿಕರೆಲ್ಲ ವಾಹನದಿಂದ ಇಳಿಯಲು ಸಹಾಯ ಮಾಡಿದ್ದಾರೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದು, ಧೃತಿಗೆಡದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಕ್ಕೆ ಚಾಲಕನಿಗೆ ಧನ್ಯವಾದ ತಿಳಿಸಿದ್ದಾರೆ.
ಸೆಪ್ಟೆಂಬರ್ 25ರಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದೃಶ್ಯ 70,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಭಯಾನಕ ಸನ್ನಿವೇಶವನ್ನು ತಾಳ್ಮೆಯಿಂದ ನಿಭಾಯಿಸಿದ ಬಸ್ ಚಾಲಕನಿಗೆ ಮೆಚ್ಚುಗೆ ವ್ಯಕ್ತವಾಗಿದೆ.
Can anyone suggest what one should do in situations like these? Wait till the tusker moves away or honk or try to reverse?
— Bipin_K (@BipinChandranK) September 25, 2021
ಇದನ್ನೂ ಓದಿ:
Viral Video: ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಚಾಲಕರು; ವಿಡಿಯೋ ನೋಡಿ
ಮರಿ ಆನೆಗಳ ಮುದ್ದಾಟ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
(Angry elephant shatters bus windshield in tamilnadu shocking video goes viral)
Published On - 3:34 pm, Tue, 28 September 21