ಮರಿ ಆನೆಗಳ ಮುದ್ದಾಟ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಎಷ್ಟೇ ಒತ್ತಡಗಳಿದ್ದರೂ ಮಗುವಂತೆ ಆಟವಾಡುವ ಆನೆ ಮರಿಗಳ ಮುದ್ದಾಟವನ್ನು ನೋಡಿದರೆ ಸಾಕು ಆ ಕ್ಷಣ ಎಲ್ಲವನ್ನೂ ಮರೆಸುತ್ತೆ.
ಆನೆಯ ದೇಹದ ಗಾತ್ರ ದೊಡ್ಡದಾಗಿದ್ದರೂ, ನೋಡಲು ತುಂಬಾ ಸುಂದರವಾಗಿದೆ ಅಂತ ಅನಿಸುತ್ತೆ. ದೇವರೆಂದು ಪೂಜಿಸುವ ಆನೆಗಳನ್ನು ನೋಡಿದರೆ ಸಾಕ್ಷಾತ್ ದೇವರೆ ಧರೆಗಿಳಿದು ಬಂದಂತೆ ಕಾಣುತ್ತೆ. ಮುದ್ದು ಮುದ್ದಾಗಿರುವ ಆನೆಗಳನ್ನು ಕಂಡರೆ ಎಲ್ಲರಿಗೂ ಇಷ್ಟ. ಇನ್ನು ಆನೆ ಮರಿಗಳ ಮುದ್ದಾಟ ನೋಡುವುದೇ ಒಂದು ರೀತಿ ಚೆಂದ. ಎಷ್ಟೇ ಒತ್ತಡಗಳಿದ್ದರೂ ಮಗುವಂತೆ ಆಟವಾಡುವ ಆನೆ ಮರಿಗಳ ಮುದ್ದಾಟವನ್ನು ನೋಡಿದರೆ ಸಾಕು ಆ ಕ್ಷಣ ಎಲ್ಲವನ್ನೂ ಮರೆಸುತ್ತೆ. ಉದ್ಯಾನವೊಂದರಲ್ಲಿ ಆಗ ತಾನೇ ಜನಿಸಿದ ಮರಿ ಆನೆಗಳ ಆಟ ನೋಡಿ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಒಂದು ಮರಿ ಆನೆ ತನ್ನ ಚಿಕ್ಕ ಸೊಂಡಿಲಿನಿಂದ ಇನ್ನೊಂದು ಮರಿ ಆನೆಗೆ ಕಾಟ ಕೊಡುತ್ತೆ. ಜೊತೆಗೆ ಮುದ್ದು ಮಾಡುತ್ತೆ. ಇವುಗಳ ಆಟವನ್ನು ನೋಡಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಸದ್ಯ ಆನೆ ಮರಿಗಳ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಪ್ರಾಣಿ ಪ್ರಿಯರಿಗೆ ಸಂತಸ ತಂದಿದೆ.
