ಕಾಬೂಲ್ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದ ರಾಯಭಾರಿ ಕಚೇರಿ ಸಿಬ್ಬಂದಿಯ ಮುಖದಲ್ಲಿ ನಿರಾಳ ಭಾವ!
ಆದರೆ ತಾಲಿಬಾನಿಗಳು 20 ವರ್ಷಗಳಾದ ಮೇಲೆ ಅಧಿಕಾರಕ್ಕೆ ಬಂದ ನಂತರ ಅಲ್ಲಿ ಸೃಷ್ಟಿಯಾಗಿರುವ ಅರಾಜಕತೆ, ಹಾಹಾಕಾರದ ನಡುವೆ ಭಾರತೀಯರನ್ನು ವಾಪಸ್ಸು ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ.
ಅಫಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿನ ಭಾರತದ ರಾಯಭಾರಿ ಕಚೇರಿಯ ಎಲ್ಲ ಸಿಬ್ಬಂದಿ ವರ್ಗವನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಭಾರತೀಯ ವಾಯುಸೇನೆಯ ವಿಶೇಶ ವಿಮಾನವೊಂದು ರಾಯಭಾರಿ ಕಚೇರಿ ಸಿಬ್ಬಂದಿ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯನ್ನು ಇಂದು ಸ್ವದೇಶಕ್ಕೆ ಕರೆತಂದಿತು. ವಿಮಾನ ಹತ್ತಿ ಕುಳಿತ ನಂತರ ಭಾರತೀಯರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ನಿರಾಳತೆಯನ್ನು ಒಮ್ಮೆ ನೋಡಿ. ಒಂದು ನಿರ್ದಿಷ್ಟ ಅಪಾಯದಿಂದ ಪಾರಾಗಿ ಸ್ವದೇಶಕ್ಕೆ ಮರಳುವ ಮತ್ತು ಕುಟುಂಬದ ಸದಸ್ಯರೊಂದಿಗೆ ಬೆರೆಯುವ ಸಂಭ್ರಮದ ಕುರುಹು ಅವರ ಮುಖದಲ್ಲಿ ಕಾಣುತ್ತಿದೆ.
ಆದರೆ ತಾಲಿಬಾನಿಗಳು 20 ವರ್ಷಗಳಾದ ಮೇಲೆ ಅಧಿಕಾರಕ್ಕೆ ಬಂದ ನಂತರ ಅಲ್ಲಿ ಸೃಷ್ಟಿಯಾಗಿರುವ ಅರಾಜಕತೆ, ಹಾಹಾಕಾರದ ನಡುವೆ ಭಾರತೀಯರನ್ನು ವಾಪಸ್ಸು ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ.
ಸಿಬ್ಬಂದಿಯನ್ನು ಹೊತ್ತ ವಿಮಾನ ಮಂಗಳವಾರ ಗುಜರಾತಿನ ಜಾಮ್ನಗರದಲ್ಲಿ ಬಂದಿಳಿದ ಬಳಿಕ ಅಫಘಾನಿಸ್ತಾನದಲ್ಲಿ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಐ ಎ ಎಫ್ಗೆ ಧನ್ಯವಾದಗಳನ್ನು ಸಲ್ಲಿಸಿದರು.
ಅಫಘಾನಿಸ್ತಾನದಲ್ಲಿ ಪ್ರಸ್ತುತ ಸ್ಥಿತಿ ಅಸ್ಥಿರವಾಗಿದೆ ಎಂದು ಹೇಳಿದ ಟಂಡನ್ ಅವರು ಇನ್ನೂ ಕೆಲ ಭಾರತೀಯರು ಅಲ್ಲೇ ಉಳಿದುಬಿಟ್ಟಿದ್ದಾರೆ. ಅವರನ್ನು ವಾಪಸ್ಸು ಕರೆತರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಮಾನಗಳ ಮೇಲೆ ಭಾರತ ಸತತವಾಗಿ ನಿಗಾ ಇಟ್ಟಿದೆ ಎಂದು ಟಂಡನ್ ಹೇಳಿದರು.
‘ಈ ಕಾರಣದಿಂದಾಗೇ ಕಾಬೂಲ್ ವಿಮಾನ ನಿಲ್ದಾಣ ಕಾರ್ಯಶೀಲ ಆಗಿರುವವರೆಗೆ ಏರ್ ಇಂಡಿಯಾ ಕಾಬೂಲ್ ನಗರಕ್ಕೆ ತನ್ನ ಕಮರ್ಷಿಯಲ್ ಫ್ಲೈಟ್ಗಳ ಸೇವೆಯನ್ನು ಜಾರಿಯಲ್ಲಿಡಲಿದೆ,’ ಎಂದು ಟಂಡನ್ ಹೇಳಿದರು.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆ ಪಡೆದು ಮತ್ತೆ ಒಂದಾದ 3 ವರ್ಷದ ಸ್ನೇಹಿತರು; ಮನಕಲಕುವ ವಿಡಿಯೊ ನೋಡಿ