ಜನ ಭ್ರಾಂತು ಹಿಡಿದವರಂತೆ ಕಾಬೂಲ್ ವಿಮಾನ ನಿಲ್ದಾಣದ ಕಡೆ ಓಡುತ್ತಿರುವ ದೃಶ್ಯಗಳನ್ನು ಉಪಗ್ರಹಗಳು ಸೆರೆಹಿಡಿದಿವೆ

ಜನ ಭ್ರಾಂತು ಹಿಡಿದವರಂತೆ ಕಾಬೂಲ್ ವಿಮಾನ ನಿಲ್ದಾಣದ ಕಡೆ ಓಡುತ್ತಿರುವ ದೃಶ್ಯಗಳನ್ನು ಉಪಗ್ರಹಗಳು ಸೆರೆಹಿಡಿದಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2021 | 6:24 PM

ಚಿತ್ರದಲ್ಲಿ ಜನ ಓಡುತ್ತಿರರುವುದು ಮತ್ತು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿರುವುದು ಕಾಣುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ನಿಂತುಬಿಟ್ಟಿವೆ. ವಿಮಾನ ನಿಲ್ದಾಣದಲ್ಲಿನ ಸ್ಥಿತಿ ಅಭೂತಪೂರ್ವವಾಗಿದೆ. ಭಾರಿ ಜನಸ್ತೋಮವನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗಿಲ್ಲ.

ಕಳೆದೆರಡು ದಿನಗಳಿಂದ ಅಫಘಾನಿಸ್ತಾನದಲ್ಲಿ ನಡೆಯುತ್ತಿರುವುದನ್ನು ಇಡೀ ವಿಶ್ವ ಬೆಕ್ಕಸಬೆರಗಾಗಿ ನೋಡುತ್ತಿದೆ. ತಾಲಿಬಾನಿಗಳು ಸರ್ಕಾರವನ್ನು ವಶಪಡಿಸಿಕೊಂಡ ನಂತರ ತಮಗಿನ್ನು ಉಳಿಗಾಲವಿಲ್ಲ ಅಂತ ಭಾವಿಸಿದ ಆಫ್ಘನ್ನರು ಬೇರೆ ದೇಶಗಳಿಗೆ ಓಡಿ ಹೋಗುವ ಉದ್ದೇಶದಿಂದ ಕಾಬೂಲ್ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೆಡೆ ಭ್ರಾಂತು ಹಿಡಿದವರಂತೆ ಧಾವಿಸಿದರು. ಇಲ್ಲಿಂದ ತಪ್ಪಿಸಿಕೊಂಡರೆ ಸಾಕು, ಮುಂದೆ ಹೇಗಾದರೂ ಬದುಕಬಹುದು ಅನ್ನೋದು ಮಾತ್ರ ಅವರ ಮನಸ್ಸಿನಲ್ಲಿತ್ತು. ಜನ ಏರ್ಫೋರ್ಟ್ಗೆ ಓಡುತ್ತಿರುವುದನ್ನು ಉಪಗ್ರಹಗಳು ಸೆರೆಹಿಡಿದು ಕಳಿಸಿವೆ. ಮ್ಯಾಕ್ಸಾರ್ ಟೆಕ್ನಾಲಜೀಸ್ ಹೆಸರಿನ ಬಾಹ್ಯಾಕಾಶ ಸಂಸ್ಥೆಯೊಂದು ಈ ಚಿತ್ರಗಳನ್ನು ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

ಚಿತ್ರದಲ್ಲಿ ಜನ ಓಡುತ್ತಿರರುವುದು ಮತ್ತು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿರುವುದು ಕಾಣುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ನಿಂತುಬಿಟ್ಟಿವೆ. ವಿಮಾನ ನಿಲ್ದಾಣದಲ್ಲಿನ ಸ್ಥಿತಿ ಅಭೂತಪೂರ್ವವಾಗಿದೆ.
ಭಾರಿ ಜನಸ್ತೋಮವನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಅವರು ನಿಸ್ಸಹಾಯಕರಾಗಿ ಜೀವಭಯದಿಂದ ಓಡಿಬರುತ್ತಿರುವ ಜನರನ್ನು ನೋಡುತ್ತಿದ್ದಾರೆ. ಜನರ ಮುಖಗಳಲ್ಲಿ ಗಾಬರಿ, ಆತಂಕ ಮತ್ತು ಇನ್ನಿಲ್ಲದ ಹೆದರಿಕೆ ಮನೆ ಮಾಡಿರುವುದನ್ನು ನಾವು ಬೇರೆ ಬೇರೆ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.

ವಿಮಾನ ನಿಲ್ದಾಣದ ಎಲ್ಲ ವಿಭಾಗಗಳಲ್ಲಿ ಜನಜಂಗುಳಿ. ಜನ ಅಲ್ಲಿಗೆ ಓಡಿ ಬರುವುದು ನಿಲ್ಲುವ ಲಕ್ಷಣ ಕಾಣದಿದ್ದಾಗ ಏರ್ಪೋರ್ಟ್ ಅನ್ನು ಎಲ್ಲ ಕಡೆಯಿಂದ ಮುಚ್ಚಲಾಗಿದೆ. ಸೋಮವಾರ ಮಧ್ಯಾಹ್ನದಿಂದ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಜನ ನಿಸ್ಸಹಾಯಕರಾಗಿ ಮುಂದೇನಾಗಲಿದೆಯೋ ಎಂಬ ಭೀತಿಯಲ್ಲೇ ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ:  ‘ವಿಶ್ವವೇ ವಿಫಲವಾಗಿದೆ’ ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್