ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್​ ಹೀರೋ’ ಮಾತು

ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್​ ಹೀರೋ’ ಮಾತು

TV9 Web
| Updated By: ಮದನ್​ ಕುಮಾರ್​

Updated on: Aug 17, 2021 | 4:39 PM

Kichcha Sudeep: ‘ಈಗತಾನೇ ಸುದೀಪ್​ ಒಂದು ಕಥೆ ಹೇಳಿದರು. ಅದರ ಕಾನ್ಸೆಪ್ಟ್​ ಚೆನ್ನಾಗಿದೆ. ಸುದೀಪ್​ ಅವರೇ ನಿರ್ದೇಶನ ಮಾಡಿದರೆ ನಾನು ನಟಿಸುತ್ತೇನೆ. ಅದೇ ಉತ್ತಮ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಕಿಚ್ಚ ಸುದೀಪ್ (Kichcha Sudeep)​ ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಈಗ ಅವರು ಶಿವರಾಜ್​ಕುಮಾರ್​ (Shivarajkumar) ನಟನೆಯ ಒಂದು ಚಿತ್ರಕ್ಕೆ ನಿರ್ದೇಶನ ಮಾಡುವ ಬಗ್ಗೆ ಮಾತು ಕೇಳಿಬಂದಿದೆ. ಹ್ಯಾಟ್ರಿಕ್​ ಹೀರೋ ಅಭಿನಯದ ‘ನೀ ಸಿಗೋವರೆಗೂ’ (Nee Sigovaregu) ಸಿನಿಮಾಗೆ ಮಂಗಳವಾರ (ಆ.17) ಮುಹೂರ್ತ ನೆರವೇರಿತು. ಈ ವೇಳೆ ಸುದ್ದಿಗೋಷ್ಠಿಯ ವೇದಿಕೆಯಲ್ಲೇ ಶಿವರಾಜ್​ಕುಮಾರ್​ ಅವರು ಹೊಸ ವಿಚಾರ ಬಿಚ್ಚಿಟ್ಟರು.

‘ಈಗತಾನೇ ಸುದೀಪ್​ ಒಂದು ಕಥೆ ಹೇಳಿದರು. ಅದರ ಕಾನ್ಸೆಪ್ಟ್​ ಚೆನ್ನಾಗಿದೆ. ಇಷ್ಟೆಲ್ಲ ಆಫರ್​ಗಳು ಬರುತ್ತಿರುವಾಗ ನಾನು ಸಿನಿಮಾ ಮಾಡದೇ ಇರಲು ಸಾಧ್ಯವೇ? ಆ ಕಥೆಯನ್ನು ಸುದೀಪ್​ ಅವರೇ ನಿರ್ದೇಶನ ಮಾಡಿದರೆ ನಾನು ನಟಿಸುತ್ತೇನೆ. ಅದೇ ಉತ್ತಮ. ಹಾಗಾಗಿ ಸಾರ್ವಜನಿಕವಾಗಿ ಈ ಮಾತು ಹೇಳುತ್ತಿದ್ದೇನೆ’ ಎಂದಿದ್ದಾರೆ ಶಿವಣ್ಣ. ಈ ಸುದ್ದಿ ಕೇಳಿ ಸುದೀಪ್​ ಮತ್ತು ಶಿವರಾಜ್​ಕುಮಾರ್ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ:

ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ

Nee Sigovaregu: ಶಿವಣ್ಣನ ಹೊಸ ಚಿತ್ರ ‘ನೀ ಸಿಗೋವರೆಗೂ’ ಮುಹೂರ್ತ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ