Viral Video: ಮದುವೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ; ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್

ಮದುವೆಯಲ್ಲಿ ಡ್ಯಾನ್ಸ್ ಇಲ್ಲದಿದ್ದರೆ ಕಾರ್ಯಕ್ರಮ ಪರಿಪೂರ್ಣವಾಗುವುದಿಲ್ಲ. ಹೀಗೆ ವಿವಾಹದಲ್ಲಿ ವಧು-ವರ ಹೆಜ್ಜೆ ಹಾಕಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Video: ಮದುವೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ; ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್
ನವ ದಂಪತಿಗಳ ನೃತ್ಯ
Follow us
TV9 Web
| Updated By: sandhya thejappa

Updated on:Sep 28, 2021 | 12:50 PM

ವಿವಾಹ ಎನ್ನುವುದು ಜೀವನದ ಅತ್ಯದ್ಭುತ ಕ್ಷಣ. ಪ್ರತಿಯೊಬ್ಬರು ಮದುವೆಯ ಬಗ್ಗೆ ಕನಸಿನ ಮೂಟೆಯೇ ಹೊತ್ತಿರುತ್ತಾರೆ. ಹಾಕುವ ಬಟ್ಟೆಯಿಂದ ಹಿಡಿದು ಡೆಕೋರೇಷನ್, ಊಟ, ಮದುವೆ ವೇದಿಕೆ ಹೀಗೆ ಎಲ್ಲಾದರ ಬಗ್ಗೆ ಮೊದಲೇ ಯೋಚಿಸಿ ಸಿದ್ಧರಾಗಿರುತ್ತಾರೆ. ಜೀವನದ ಅಪರೂಪದ ಕ್ಷಣಗಳನ್ನು ಅದ್ದೂರಿಯಾಗಿ ಸಂಭ್ರಮಿಸಲು ಮದುವೆಯಲ್ಲಿ ಡ್ಯಾನ್ಸ್ ಕೂಡಾ ಮಾಡುತ್ತಾರೆ. ಮದುವೆ ವೇದಿಕೆಯಲ್ಲಿ ನವ ದಂಪತಿಗಳು ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ಅದನ್ನು ನಿಂತು ನೋಡುವವರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರೆ.

ಇನ್ನು ಮದುವೆಯಲ್ಲಿ ಡ್ಯಾನ್ಸ್ ಇಲ್ಲದಿದ್ದರೆ ಕಾರ್ಯಕ್ರಮ ಪರಿಪೂರ್ಣವಾಗುವುದಿಲ್ಲ. ಹೀಗೆ ವಿವಾಹದಲ್ಲಿ ವಧು-ವರ ಹೆಜ್ಜೆ ಹಾಕಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪರಸ್ಪರ ಕೈಗಳನ್ನು ಹಿಡಿದು ನವ ದಂಪತಿ ಡ್ಯಾನ್ಸ್ ಮಾಡುವ ವೇದಿಕೆಯ ವರೆಗೆ ಓಡುತ್ತಾರೆ. ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಂತೆ ವಧು ವರನ ಬೆನ್ನಿನ ಮೇಲೆ ಜಿಗಿಯುತ್ತಾಳೆ. ಈ ವೇಳೆ ಇಬ್ಬರು ಕೆಳಗೆ ಬೀಳುತ್ತಾರೆ.

ಡ್ಯಾನ್ಸ್ ಮಾಡುವ ವೇಳೆ ನವ ದಂಪತಿ ಕೆಳಗೆ ಬಿದ್ದರು ಸ್ವಲ್ಪವೂ ಮುಜುಗರ ಪಡದೆ ಅದೇ ತಕ್ಷಣ ಮೇಲೆ ಎದ್ದು ಉತ್ಸಾಹದಿಂದ ಇಬ್ಬರು ಕುಣಿಯುತ್ತಾರೆ. ಬೇಗನೆ ಎದ್ದು ಅದೇ ಉತ್ಸಾಹದಿಂದ ಮತ್ತೆ ನೃತ್ಯ ಮಾಡಿದ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಆದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 2.5 ಲಕ್ಷ ಜನ ವೀಕ್ಷಿಸಿದ್ದಾರೆ. 56,000 ಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಅಲ್ಲದೇ ಹಲವರು ಕಾಮೆಂಟ್ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ

Viral News: ‘ಬಟರ್ ಚಿಕನ್ ಗೋಲ್ಗಪ್ಪಾ’ ಹೊಸ ಹೆಸರು ಕೇಳಿ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

Viral Video: ಆರ್ಡರ್ ಫುಡ್ ಹೊತ್ತೊಯ್ಯುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಜಗಳ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

(New Couple fell down from the stage in wedding event this Video viral on social media)

Published On - 12:46 pm, Tue, 28 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ