Viral Video: ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ; ವಿಡಿಯೋ ನೋಡಿ

TV9 Digital Desk

| Edited By: shruti hegde

Updated on:Oct 13, 2021 | 8:53 AM

ಆನಂದ್ ಮಹೀಂದ್ರಾ ಇದೀಗ ಚುರುಕಾದ ಶ್ವಾನದ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ.

Viral Video: ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ; ವಿಡಿಯೋ ನೋಡಿ
ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ಅವರು ಸಾಮಾನ್ಯವಾಗಿ ಟ್ವಿಟರ್​ನಲ್ಲಿ ಅದೆಷ್ಟೋ ತಮಾಷೆಯ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ತನ್ನ ಹಿಂಬಾಲಕರಿಗೆ ಮನರಂಜನೆ ನೀಡುವಲ್ಲಿ ಸಕ್ರಿಯರಾಗಿರುತ್ತಾರೆ. ಅದರ ಜತೆ ಜತೆಗೆ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಟಿಪ್ಸ್​ಗಳನ್ನೂ ಸಹ ನೀಡುತ್ತಾರೆ. ಅವರು ಹಂಚಿಕೊಳ್ಳುವ ಕೆಲವು ವಿಡಿಯೋಗಳು ತಮಾಷೆಯ ಜತೆಗೆ ಕೆಲವು ಸೂಕ್ಷ್ಮ ವಿಷಯಗಳನ್ನು ತೆರೆದಿಡುತ್ತವೆ.

ಕೆಲವರು ವಾರಗಳ ಹಿಂದಷ್ಟೇ ದೋಸೆ ಬಾಣಸಿಗನ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈತ ಎಷ್ಟು ವೇಗವಾಗಿ ದೋಸೆ ಮಾಡುತ್ತಾನೆ ಎಂದರೆ, ರೋಬೋಟ್​ಗಿಂತಲೂ ಪಾಸ್ಟ್! ಎಂದು ಅವರು ಹೇಳಿದ್ದರು. ಆತನ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ದರು. ಇದೀಗ ಚುರುಕಾದ ಶ್ವಾನದ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಕೇವಲ ಹಾಸ್ಯಕ್ಕಾಗಿ ಈ ವಿಡಿಯೋ ಹಂಚಿಕೊಂಡಿಲ್ಲ. ಶ್ವಾನದ ಚಟುವಟಿಕೆಯನ್ನು ವ್ಯವಹಾರ ಕಲಿಕೆಯಲ್ಲಿ ಹೋಲಿಸಿ ಯುವ ಉದ್ಯಮಿಗಳಿಗೆ ಸಲಹೆಯನ್ನು ನೀಡಿದ್ದಾರೆ. ಸಣ್ಣ ವಿಡಿಯೋ ಕ್ಲಿಪ್​ನಲ್ಲಿ ಗಾಜಿಲ್ಲದ ಬಾಗಿಲಿನ ಹಿಂದೆ ಶ್ವಾನ ನಿಂತಿದೆ. ಆದರೆ ಗಾಜು ಮುಂದಿದೆ ಎಂಬ ಯೋಚನೆಯಲ್ಲಿ ಶ್ವಾನ ನಿಂತಿದೆ. ಆದರೆ ಪರೀಕ್ಷಿಸಿಲು ತನ್ನ ಕಾಲುಗಳನ್ನು ಹಲವಾರು ಬಾರಿ ಹೊರಹಾಕುತ್ತದೆ.

ಶ್ವಾನದ ಪಕ್ಕದಲ್ಲಿರುವ ಮನುಷ್ಯ ಬಾಗಿಲನ್ನು ತೆಗೆಯುವವರೆಗೆ ಶ್ವಾನ ನಿಲ್ಲುವುದಿಲ್ಲ.

ವಿಡಿಯೋ ಶೀರ್ಷಿಕೆಯಲ್ಲಿ ಆನಂದ್ ಮಹೀಂದ್ರಾ ಹೀಗೆ ಬರೆದಿದ್ದಾರೆ. ನಮ್ಮ ಅಭ್ಯಾಸವನ್ನು ವಿವರಿಸಲು ಇದಕ್ಕಿಂತ ಉತ್ತಮವಾದ ಮಾರ್ಗವಿಲ್ಲ. ಸಮಸ್ಯೆಯಿಂದ ಹೇಗೆ ಮುಕ್ತರಾಗುವುದು ಎಂಬುದನ್ನು ವ್ಯವಹಾರದಲ್ಲಿ ಮೊದಲು ಯೋಚಿಸಬೇಕು ಅದೇ ಉತ್ತಮ ಕೌಶಲ್ಯ ಎಂದು ಬರೆದಿದ್ದಾರೆ.

ಅವರ ಅಭಿಪ್ರಾಯವನ್ನು ಮೆಚ್ಚಿದ ನೆಟ್ಟಿಗರು, ಜನರು ವಿವಿಧ ಕ್ಷೇತ್ರಗಳಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ವಿಡಿಯೋ ಪ್ರತಿಬಿಂಬಿಸುತ್ತದೆ ಎಂದು ಓರ್ವರು ಹೇಳಿದ್ದಾರೆ. ವ್ಯವಹಾರದಲ್ಲಿ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಎಲ್ಲಾ ವೃತ್ತಿಪರರಿಗೆ ಇದು ಸಲಹೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ರಸ್ತೆಗಿಳಿದ ಭಾರತೀಯನ ಚಿನ್ನದ ಕಾರಿನ ವಿಡಿಯೋ ವೈರಲ್; ಕನ್​ಫ್ಯೂಸ್ ಆದ ಆನಂದ್ ಮಹೀಂದ್ರಾ

ಟ್ವೀಟ್​ ಮೂಲಕ ಆಸ್ಟ್ರೇಲಿಯನ್ನರ ಕೆನ್ನೆಗೆ ನಯವಾಗಿಯೇ ಬಾರಿಸಿದ ಆನಂದ್ ಮಹೀಂದ್ರಾ! ಏನದು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada