ಬಿಸ್ಕೆಟ್ ಮತ್ತು ಬೇಕರಿ ಉತ್ಪನ್ನಗಳನ್ನು ಬಳಸಿ ತೆಯ್ಯಂ ಕಲಾಕೃತಿ ರಚಿಸಿದ ಕೇರಳದ ಕಲಾಕಾರ

TV9 Digital Desk

| Edited By: shruti hegde

Updated on:Oct 13, 2021 | 11:05 AM

Viral News: ಕೇರಳದ ಕಲಾಕಾರ ಡಾವಿಂಚಿ ಸುರೇಶ್ ಬೇಕರಿ ಉತ್ಪನ್ನಗಳನ್ನು ಮತ್ತು ವಿವಿಧ ಬಣ್ಣದ ಬಿಸ್ಕೆಟ್​ಗಳನ್ನು ಬಳಸಿ ತೆಯ್ಯಂ ಕಲಾಕೃತಿಯನ್ನು ರಚಿಸಿದ್ದಾರೆ.

ಬಿಸ್ಕೆಟ್ ಮತ್ತು ಬೇಕರಿ ಉತ್ಪನ್ನಗಳನ್ನು ಬಳಸಿ ತೆಯ್ಯಂ ಕಲಾಕೃತಿ ರಚಿಸಿದ ಕೇರಳದ ಕಲಾಕಾರ
ಬಿಸ್ಕೆಟ್​ ಮತ್ತು ಬೇಕರಿ ಉತ್ಪನ್ನಗಳನ್ನು ಬಳಸಿ ರಚಿಸಿದ ತೆಯ್ಯಂ ಕಲಾಕೃತಿ

Follow us on

ಕೇರಳದ ಕಲಾ ಪ್ರಕಾರವಾದ ತೆಯ್ಯಂ ಕಲಾಕೃತಿಯನ್ನು ಕಲಾಕಾರ ವಿವಿಧ ಬಣ್ಣದ ಬಿಸ್ಕೆಟ್​ ಬಳಸಿ ರಚಿಸಿದ್ದಾರೆ. ಈ ಕಲಾಕೃತಿಯಲ್ಲಿ ಕೇವಲ ಬಿಸ್ಕೆಟ್ ಮಾತ್ರವಲ್ಲೇ ಬೇಕರಿ ಉತ್ಪನ್ನಗಳನ್ನು ಬಳಸಲಾಗಿದೆ. ಸುಮಾರು 15 ಗಂಟೆಗಳ ಸಮಯ ತೆಗೆದುಕೊಂಡು 24 ಅಡಿ ಉದ್ದದ ಚಿತ್ರವನ್ನು ಕಲಾಕಾರ ಡಾವಿಂಚಿ ಸುರೇಶ್ ರಚಿಸಿದ್ದಾರೆ. ಕಲಾಕಾರನ ಕೈಚಳಕಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದ ಕಣ್ಣೂರಿನ ಬೇಕರಿ ಅಂಗಡಿಯೊಂದರಲ್ಲಿ ತೆಯ್ಯಂ ಕಲಾಕೃತಿಯನ್ನು ರಚಿಸಲಾಗಿದೆ. ಹಲವು ಟೇಬಲ್​ಗಳನ್ನು ಜೋಡಿಸಿ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನಿಟ್ಟು, ಬಳಿಕ ವಿವಿಧ ಬಿಸ್ಕೆಟ್​ ಮತ್ತು ಬೇಕರಿ ಉತ್ಪನ್ನಗಳನ್ನು ಬಳಸಿ ರಚಿಸಲಾಗಿದೆ.

ಈ ಕಲಾಕೃತಿ ಸುಮಾರು 24 ಅಡಿ ಉದ್ದವಿದೆ. ಈ ಚಿತ್ರವನ್ನು ರಚಿಸಲು ಸುಮಾರು 15 ಗಂಟೆಗಳ ಸಮಯ ಹಿಡಿಯಿತು. ಕಲಾಕೃತಿಯನ್ನು ಸಂಪೂರ್ಣಗೊಳಿಸಲು ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದರು. ಅವರ ಬೆಂಬಲದಿಂದ ಕೆಲಸ ಸುಲಭವಾಯಿತು ಎಂದು ಕಲಾಕಾರ ಸುರೇಶ್ ಹೇಳಿದ್ದಾರೆ. ಈ ಕುರಿತಂತೆ ಇಂಡಿಯಾ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ಬೇಕರಿ ಬಾಣಸಿಗ ಮಹಮ್ಮದ್ ರಶೀದ್ ಬೇಕ್ ಸ್ಟೋರಿ – ಬೇಕರಿ ಎಂಬ ಹೊಸ ಯೋಜನೆಯನ್ನು ಯೋಚಿಸಿ, ಈ ಚಿತ್ರವನ್ನು ರಚಿಸುವಂತೆ ಕಲಾಕಾರ ಸುರೇಶ್ ಬಳಿ ಕೇಳಿಕೊಂಡರು. ಬಳಿಕ ಎಲ್ಲರೂ ಸೇರಿ ಬೇಕರಿ ಅಂಗಡಿಯ ಹಾಲ್​ನಲ್ಲಿ ಟೇಬಲ್ ಮೇಲೆ ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಾರೆ. ತೆಯ್ಯಂ ಕಲಾಕೃತಿಯನ್ನು ಚಿತ್ರಿಸಲು ಬಿಸ್ಕೆಟ್​ಗಳನ್ನು ಮತ್ತು ಬೇಕರಿ ಉತ್ಪನ್ನಗಳನ್ನು ಬಳಸಲಾಗಿದೆ ಎಂದು ಮಹಮ್ಮದ್ ರಶೀದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು

Viral News: ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕನ ಕೈಯಿಂದ 1 ಲಕ್ಷ ರೂ. ಕಿತ್ತೆಸೆದ ಮಂಗ! ನೋಟುಗಳೆಲ್ಲಾ ರಸ್ತೆ ಪಾಲು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada