Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?

Shocking News: ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ!

Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?
ಜೆರುಸಲೇಂನಲ್ಲಿ ಪತ್ತೆಯಾಗಿರುವ ಪ್ರಾಚೀನ ಟಾಯ್ಲೆಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 06, 2021 | 7:43 PM

ಮನೆ ಕಟ್ಟುವಾಗ ಹಾಲ್, ಬೆಡ್​ ರೂಂ, ಅಡುಗೆ ಮನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೋ ಬಾತ್​ರೂಂಗೂ ಅಷ್ಟೇ ಆದ್ಯತೆ ನೀಡುವ ಕಾಲವಿದು. ಐಷಾರಾಮಿಯಾಗಿ ಕಟ್ಟುವ ಬಾತ್ ರೂಂ ಕೂಡ ಪ್ರತಿಷ್ಠೆಯ ಸಂಕೇತ ಎಂದು ಭಾವಿಸುವವರಿದ್ದಾರೆ. ವಿಶಾಲವಾದ ಬಾತ್ ರೂಂನಲ್ಲಿ ಶವರ್, ಆಧುನಿಕವಾದ ಕಮೋಡ್, ಬಾತ್ ಟಬ್, ಸಿಂಕ್ ಮತ್ತಿತರ ಎಲ್ಲ ಸೌಲಭ್ಯಗಳೂ ಇರಬೇಕೆಂದು ಬಯಸುವವರಿದ್ದಾರೆ. ಆದರೆ, ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ!

ಇಸ್ರೇಲ್​ನ ಹಳೆಯ ನಗರವೊಂದರಲ್ಲಿ 2,700 ವರ್ಷಗಳ ಹಿಂದಿನ ಕಲ್ಲಿನ ಅಪರೂಪದ ಟಾಯ್ಲೆಟ್ ಪತ್ತೆಯಾಗಿದೆ. ಕುಳಿತುಕೊಳ್ಳಲು ಆರಾಮದಾಯಕವಾಗುವ ರೀತಿಯಲ್ಲಿ ಕಲ್ಲನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿ ಪುರಾತನ ಪ್ರಾಧಿಕಾರವು ನಯವಾದ, ಕೆತ್ತಿದ ಸುಣ್ಣದ ಕಲ್ಲಿನ ಶೌಚಾಲಯ ಪತ್ತೆಯಾಗಿರುವುದಾಗಿ ತಿಳಿಸಿದೆ. ವಿಶಾಲವಾದ ಮಹಲಿನಲ್ಲಿ ಈ ಟಾಯ್ಲೆಟ್ ಪತ್ತೆಯಾಗಿದೆ.

ಆರಾಮದಾಯಕ ಕುಳಿತುಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಟಾಯ್ಲೆಟ್​ನ ಕಲ್ಲಿನ ಕೆಳಗೆ ಆಳವಾದ ಸೆಪ್ಟಿಕ್ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ಪುರಾತನ ಕಾಲದಲ್ಲಿ ಈ ರೀತಿಯ ಖಾಸಗಿ ಟಾಯ್ಲೆಟ್ ನಿರ್ಮಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಆಗೆಲ್ಲ ಬಯಲು ಶೌಚಾಲಯ ಇರುತ್ತಿತ್ತು ಅಥವಾ ಸಾರ್ವಜನಿಕ ಶೌಚಾಲಯ ಇರುತ್ತಿತ್ತು. ಇತ್ತೀಚೆಗೆ ಅಟ್ಯಾಚ್ಡ್ ಬಾತ್ ರೂಂ ನಿರ್ಮಿಸುವ ಟ್ರೆಂಡ್ ಶುರುವಾಗಿದೆ. ಪ್ರಾಚೀನ ಕಾಲದಲ್ಲಿ ಕೆಲವೇ ಕೆಲವು ಟಾಯ್ಲೆಟ್​ಗಳು ಪತ್ತೆಯಾಗಿವೆ. ಆದರೆ, ಇಷ್ಟು ಪುರಾತನವಾದ ಟಾಯ್ಲೆಟ್ ಪತ್ತೆಯಾಗಿರಲಿಲ್ಲ.

ಶ್ರೀಮಂತರು ಮಾತ್ರ ಆಗ ಟಾಯ್ಲೆಟ್​ಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು. ಈ ಟಾಯ್ಲೆಟ್ ಕಟ್ಟಿಸಿದವರು ಕೂಡ ಶ್ರೀಮಂತರಾಗಿರಬಹುದು. ಅಲ್ಲದೆ, ಈ ಶೌಚಾಲಯವನ್ನು ಬೆಡ್ ರೂಂ ಮತ್ತು ರೀಡಿಂಗ್ ಟೇಬಲ್ ಬಳಿಯಲ್ಲಿಯೇ ನಿರ್ಮಿಸಲಾಗಿತ್ತು. ಒಟ್ಟಾರೆ ಈ ಟಾಯ್ಲೆಟ್ ಈ ಭಾರೀ ಸುದ್ದಿಯಲ್ಲಿದೆ.

ಇದನ್ನೂ ಓದಿ: Viral News: ವರನ ಎದುರೇ ಮದುವೆಯ ಫೋಟೋಸ್ ಡಿಲೀಟ್ ಮಾಡಿದ ಫೋಟೋಗ್ರಾಫರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Published On - 7:42 pm, Wed, 6 October 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್