Video: ಏಣಿ ಮೇಲೆ ನಡೆದು ಬಂದು ಕಾರು ಹತ್ತಿದ ವ್ಯಕ್ತಿ; ಕಾರಲ್ಲೇ ಏಣಿ ಇಟ್ಟು ಪ್ರಯಾಣ! ವಿಡಿಯೋ ನೋಡಿ
Viral Video: ತನ್ನದೇ ಕಾರಿನ ಕಡೆಗೆ ನಡೆದುಕೊಂಡು ಹೋಗದೆ, ಏಣಿ ಮೂಲಕ ಹೋಗುತ್ತಿದ್ದಾನೆ. ಆತನಿಗೆ ನೀರಿಗೆ ಬಿದ್ದರೆ, ಹೆಚ್ಚು ಕಡಿಮೆ ಆದರೆ ಎಂಬ ಯಾವ ಭಯವೂ ಇಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.
ಹೊಸ ಹೊಸ ಆವಿಷ್ಕಾರಗಳು ಕಷ್ಟದ, ಸಮಸ್ಯೆಯ ಸಂದರ್ಭದಲ್ಲಿ ಉಂಟಾಗುವುದು. ವಿಶೇಷ ಆಲೋಚನೆಗಳು ಅವಸರದಲ್ಲಿ ಹೊಳೆಯುವುದು ಸಾಮಾನ್ಯ. ಕೆಲಸ ಸುಲಭ ಆಗಲೇಬೇಕು, ಸುಲಲಿತವಾಗಿ ಸಾಗಲೇಬೇಕು ಎಂದಾಗ ಇಂಥದ್ದೆಲ್ಲ ನೆನಪಾಗುತ್ತದೆ. ಯಾವುದೇ ಕೆಲಸವನ್ನೂ ಜುಗಾಡ್ ಮಾಡಿ ಮುಂದುವರಿಸುವುದು ಕಷ್ಟವೇನಲ್ಲ. ಜುಗಾಡ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನೂರಾರು ಪೋಸ್ಟ್ಗಳನ್ನು ನೀವು ನೋಡಿರಬಹುದು. ಈಗ ಇಷ್ಟೆಲ್ಲಾ ಮಾತನಾಡುತ್ತಿದ್ದೇವೆ ಅಂತಾದರೆ ಜುಗಾಡ್ ಬಗ್ಗೆ ಹೊಸ ವಿಡಿಯೋ ತಂದಿದ್ದೇವೆ ಎಂದು ನೀವು ಅರ್ಥ ಮಾಡಿಕೊಂಡಿರಬೇಕಲ್ಲಾ?
ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬಾತ ನೀರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಕಾರಿನ ಬಳಿಗೆ ಬರುತ್ತಿದ್ದಾನೆ. ಆದರೆ, ಅವನು ಒದ್ದೆಯಾಗುತ್ತಿಲ್ಲ. ಸ್ವಲ್ಪವೂ ನೀರು ತಾಗದಂತೆ, ಒದ್ದೆಯಾಗದಂತೆ ಅವನು ನಡೆದುಕೊಂಡು ಬರುವ ವಿಡಿಯೋ ಈಗ ವೈರಲ್ ಆಗಿದೆ. ತನ್ನದೇ ಕಾರಿನ ಕಡೆಗೆ ನಡೆದುಕೊಂಡು ಹೋಗದೆ, ಏಣಿ ಮೂಲಕ ಹೋಗುತ್ತಿದ್ದಾನೆ. ಆತನಿಗೆ ನೀರಿಗೆ ಬಿದ್ದರೆ, ಹೆಚ್ಚು ಕಡಿಮೆ ಆದರೆ ಎಂಬ ಯಾವ ಭಯವೂ ಇಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ವ್ಯಕ್ತಿ ಕಾರಿನ ಕಡೆಗೆ ಬಂದಾಗ, ನಿಧಾನವಾಗಿ ಕಾರಿನ ಬಾಗಿಲು ತೆಗೆದು ಒಳಗೆ ಇಳಿಯುತ್ತಾನೆ. ಆರಾಮವಾಗಿ ಕಾರಿಗೆ ಇಳಿದು ಮುಂದೆ ಏಣಿಯನ್ನು ಏನು ಮಾಡುತ್ತಾನೆ ಗೊತ್ತೇ? ಅದನ್ನು ಮಡಚಿ ಕಾರಿನ ಟಾಪ್ನ ಮೇಲೆ ಇಡುತ್ತಾನೆ. ಹಗ್ಗದ ಸಹಾಯದಿಂದ ಆ ಏಣಿಯನ್ನು ಕಾರ್ನ ಮೇಲೆ ಇಟ್ಟು ಅದನ್ನು ಕಟ್ಟಿಬಿಡುತ್ತಾನೆ. ಈ ಸರ್ಕಸ್ಗೆ ನೋಡುಗರೆಲ್ಲಾ ಸೂಪರ್ ರಿಯಾಕ್ಷನ್ ಕೊಟ್ಟಿದ್ದಾರೆ.
ಈ ವಿಡಿಯೋ ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಲ್ಪಟ್ಟಿದೆ. ಈ ವಿಡಿಯೋಗೆ ಸಾವಿರಾರು ಲೈಕ್ ಹಾಗೂ ಕಮೆಂಟ್ಗಳು ಕೂಡ ಬಂದಿದೆ. ಸೋಷಿಯಲ್ ಮೀಡಿಯಾದ ಬಹಳಷ್ಟು ಪೇಜ್ಗಳಲ್ಲಿ ಕೂಡ ವಿಡಿಯೋ ಸದ್ದು ಮಾಡಿದೆ. ಹೀಗೆ ಮಾಡಲು ನಾನು ಕೂಡ ಒಮ್ಮೆ ಪ್ರಯತ್ನಿಸಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಲವರು ಜೋರಾಗಿ ನಗುವ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ
ಇದನ್ನೂ ಓದಿ: ಈ ಅವತಾರದಲ್ಲಿ ಬಂದು ಅಭಿಮಾನಿಗಳಿಗೆ ರಶ್ಮಿಕಾ ಹೇಳಿದ್ದೇನು; ಹೊಸ ಫೋಟೋ ವೈರಲ್
Published On - 6:05 pm, Sat, 16 October 21