Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ

Viral Videos: ಅಂತರ್ಜಾಲದಲ್ಲಿ ಸಾಕು ಪ್ರಾಣಿಗಳ ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತವೆ. ಇತ್ತೀಚೆಗೆ ಅಂತರ್ಜಾಲದಲ್ಲಿ ಈ ಎರಡು ಶ್ವಾನಗಳ ಚಾಣಾಕ್ಷತೆ ಸಾಕಷ್ಟು ಸುದ್ದಿಯಾಗಿದೆ. ವಿಡಿಯೋ ನೋಡಿ.

Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾಗಿರುವ ಚಿತ್ರ
Follow us
TV9 Web
| Updated By: shivaprasad.hs

Updated on:Oct 16, 2021 | 3:23 PM

ನಾಯಿಗಳು ಬಹಳ ಬುದ್ಧಿವಂತ ಪ್ರಾಣಿಗಳು. ಮನೆಯಲ್ಲಿ ಸಾಕಿರುವ ಶ್ವಾನಗಳೂ ಕೂಡ ತಮ್ಮ ತುಂಟತನದಿಂದ ಎಲ್ಲರ ಗಮನ ಸೆಳೆಯುತ್ತವೆ. ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ವಿಡಿಯೋಗಳು ಪ್ರಾಣಿಪ್ರಿಯರಿಗೆ ಬಹಳ ಪ್ರಿಯವಾಗುತ್ತವೆ. ಮುದ್ದುಮುದ್ದಾಗಿ ತಮಗೆ ಬೇಕಾದ ವಸ್ತುಗಳನ್ನು ಕದ್ದ ಎರಡು ಶ್ವಾನದ ವಿಡಿಯೋಗಳು ಇಲ್ಲಿವೆ. ಒಂದರಲ್ಲಿ ಶ್ವಾನವೊಂದು ತನ್ನ ಸೋದರ ಶ್ವಾನದ ಬಳಿಯಲ್ಲಿದ್ದ ಮೂಳೆಯ ತುಂಡೊಂದನ್ನು ಹೇಗೆ ಲಪಟಾಯಿಸುತ್ತದೆ ಎಂದು ನೀವು ನೋಡಬಹುದು. ಆ ನಾಯಿಯ ಬುದ್ಧಿವಂತಿಕೆ, ಕಳ್ಳತನ ಮಾಡುವಾಗ ಸ್ವಲ್ಪವೂ ಗೊತ್ತಾಗದಂತೆ ಕುಳಿತ ಭಂಗಿ, ನಿಧಾನವಾಗಿ ಕದಿಯುವುದು, ಕದ್ದ ನಂತರ ಅದನ್ನು ಒಯ್ಯುವಾಗ ತೋರಿದ ಜಾಗ್ರತೆ, ನಂತರ ಅದನ್ನು ತಿನ್ನುವ ರೀತಿ.. ಈ ಎಲ್ಲವನ್ನೂ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡೋದು ಪಕ್ಕಾ.

ಟ್ವಿಟರ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬಹಳ ವೈರಲ್ ಆಗಿದೆ. ‘ಹ್ಯೂಮರ್ ಆಂಡ್ ಎನಿಮಲ್ಸ್’ ಎಂಬ ಟ್ವಿಟರ್ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ಆ ವಿಡಿಯೋ ಇಲ್ಲಿದೆ.

ಅಡುಗೆ ಮನೆಯಿಂದ ವಸ್ತು ಕದಿಯಲು ಯತ್ನಿಸಿದ ಶ್ವಾನ: ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ ಶ್ವಾನವೊಂದು ಅಡುಗೆ ಮನೆಯಲ್ಲಿ ತನಗೆ ಬೇಕಾದ ಡಬ್ಬವೊಂದನ್ನು ಕದಿಯಲು ಯತ್ನಿಸಿದೆ. ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ಮನೆಯ ಮಾಲಕಿ ಅದನ್ನು ನೋಡಿದ್ದು ಶ್ವಾನಕ್ಕೆ ಫಜೀತಿ ತಂದೊಡ್ಡಿದೆ. ತಮಾಷೆಯ ಆದರೆ, ನಾಯಿಯ ಬುದ್ಧಿವಂತಿಕೆಯನ್ನು ತೋರಿಸುವ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ರೆಬೆಕಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇಲ್ಲಿದೆ.

ಅಂತರ್ಜಾಲದಲ್ಲಿ ಈ ವಿಡಿಯೋಗಳಿಗೆ ಬಹಳ ಅದ್ಭುತವಾದ ಪ್ರತಿಕ್ರಿಯೆ ಬರುತ್ತಿದೆ. ಹಲವರು ನಾಯಿಯ ಬುದ್ಧಿವಂತಿಕೆಯನ್ನು ಹೊಗಳಿದ್ದರೆ, ಮತ್ತೆ ಹಲವರು ಆ ನಾಯಿಗಳ ಸೌಂದರ್ಯವನ್ನು, ತುಂಟತನವನ್ನು ಹೊಗಳಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

Viral Video: ಆನೆ ತನ್ನ ಸ್ನೇಹಿತನೊಂದಿಗೆ ಬ್ಯಾಸ್ಕೆಟ್​ಬಾಲ್ ಆಡುತ್ತಿದೆ! ವಿಡಿಯೋ ಮಜವಾಗಿದೆ ನೋಡಿ

IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ

Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ

Published On - 3:22 pm, Sat, 16 October 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್