IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ
IPL 2021 award winners Complete list: ಈ ಬಾರಿಯ ಫೈನಲ್ನಲ್ಲಿ ಹಾಗೂ ಈ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲ ಆಟಗಾರರು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಫೈನಲ್ನಲ್ಲಿ ಮಿಂಚಿದ್ದ ಫಾಫ್ ಡುಪ್ಲೆಸಿಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.
Updated on:Oct 16, 2021 | 3:02 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ನಲ್ಲಿ ಕೆಕೆಆರ್ ತಂಡವನ್ನು 27 ರನ್ಗಳಿಂದ ಮಣಿಸಿ ಸಿಎಸ್ಕೆ ನಾಲ್ಕನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಇನ್ನು ಈ ಬಾರಿಯ ಫೈನಲ್ನಲ್ಲಿ ಹಾಗೂ ಈ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲ ಆಟಗಾರರು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅದರಂತೆ ಫೈನಲ್ನಲ್ಲಿ ಮಿಂಚಿದ್ದ ಫಾಫ್ ಡುಪ್ಲೆಸಿಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಎಮರ್ಜಿಂಗ್ ಪ್ಲೇಯರ್ ಅವಾರ್ಡ್- ಸಿಎಸ್ಕೆ ತಂಡದ ರುತುರಾಜ್ ಗಾಯಕ್ವಾಡ್ ಅವರಿಗೆ ದಕ್ಕಿದೆ.

ಹಾಗೆಯೇ ಕ್ರೀಡಾಸ್ಪೂರ್ತಿಯಿಂದ ಆಡಿದ ತಂಡಕ್ಕೆ ನೀಡುವ ಫೇರ್ ಪ್ಲೇ ಅವಾರ್ಡ್- ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಲಭಿಸಿದೆ.

ಇಡೀ ಸೀಸನ್ನಲ್ಲಿ ಹಿಡಿದ ಅತ್ಯುತ್ತಮ ಕ್ಯಾಚ್ಗೆ ನೀಡಲಾಗುವ ಕ್ಯಾಚ್ ಆಫ್ ದಿ ಸೀಸನ್ ಅವಾರ್ಡ್- ಪಂಜಾಬ್ ಕಿಂಗ್ಸ್ ತಂಡದ ರವಿ ಬಿಷ್ಣೋಯ್ ಅವರು ಪಡೆದಿದ್ದಾರೆ.

ಹಾಗೆಯೇ ಪವರ್ಪ್ಲೇ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರನಿಗೆ ನೀಡಲಾಗುವ ಪವರ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್ ಪಡೆದಿದ್ದಾರೆ.

ಇನ್ನು ಇಡೀ ಸೀಸನ್ನಲ್ಲಿ ಹಲವು ಬಾರಿ ಪಂದ್ಯದ ಗತಿ ಬದಲಿಸಿದ ಆಟಗಾರನಿಗೆ ನೀಡಲಾಗುವ ಗೇಮ್ ಚೇಂಜರ್ ಆಫ್ ದಿ ಸೀಸನ್- ಆರ್ಸಿಬಿಯ ಹರ್ಷಲ್ ಪಟೇಲ್ ಅವರಿಗೆ ಸಿಕ್ಕಿದೆ.

ಹಾಗೆಯೇ ಆರೆಂಜ್ ಕ್ಯಾಪ್- 635 ರನ್ ಬಾರಿಸಿದ ರುತುರಾಜ್ ಗಾಯಕ್ವಾಡ್ ಪಾಲಾಗಿದೆ.

ಪರ್ಪಲ್ ಕ್ಯಾಪ್ ಅನ್ನು 32 ವಿಕೆಟ್ ಪಡೆದಿರುವ ಆರ್ಸಿಬಿ ವೇಗಿ ಹರ್ಷಲ್ ಪಟೇಲ್ ಪಡೆದಿದ್ದಾರೆ.

ಇನ್ನು ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿ, 30 ಸಿಕ್ಸ್ ಬಾರಿಸಿದ ಕೆಎಲ್ ರಾಹುಲ್ ಪಾಲಾಗಿದೆ.
Published On - 2:59 pm, Sat, 16 October 21



















