Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ

Mr. Bean: ಮಿಸ್ಟರ್ ಬೀನ್ ಅವತಾರದಲ್ಲಿ ಬೀನ್​ನ ಮೆಚ್ಚಿನ ಟೆಡ್ಡಿ ಜೊತೆಗೆ ನಿಂತು ಅವರು ಫೋಟೊ ಕೂಡ ಹಂಚಿಕೊಂಡಿದ್ದಾರೆ. ಆ ಬಳಿಕ ಈ ವಿಡಿಯೋ, ಫೋಟೊಗೆ ತುಂಬಾ ಪ್ರತಿಕ್ರಿಯೆಗಳು ಬಂದಿವೆ.

Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ
ಮಿಸ್ಟರ್ ಬೀನ್!
Follow us
TV9 Web
| Updated By: ganapathi bhat

Updated on:Oct 15, 2021 | 6:27 PM

ನೀವು 90ರ ದಶಕದ ಮಕ್ಕಳಾದರೆ ನಿಮ್ಮ ಬಾಲ್ಯದಲ್ಲಿ ನೀವು ಅತಿ ಹೆಚ್ಚು ಇಷ್ಟಪಟ್ಟ ವ್ಯಕ್ತಿಗಳಲ್ಲಿ ಮಿಸ್ಟರ್ ಬೀನ್ ಕೂಡಾ ಒಬ್ಬರಾಗಿರುತ್ತಾರೆ ಎಂಬುದರಲ್ಲಿ ಸಂಶಯ ಇಲ್ಲ. ಮಿಸ್ಟರ್ ಬೀನ್ ಹಾಗೂ ಟಾಮ್ ಅಂಡ್ ಜರಿ ಎಂಬ ಎರಡು ಶೋಗಳು ಮಕ್ಕಳು, ಯುವಕರು, ವೃದ್ಧರು ಎನ್ನದೆ ಎಲ್ಲರ ಮನಗೆದ್ದ ಟಿವಿ ಪ್ರದರ್ಶನಗಳು. ಅದರಲ್ಲೂ ಮಿಸ್ಟರ್ ಬೀನ್ ಕಾರ್ಟೂನ್ ಅಲ್ಲ. ಅದೊಬ್ಬ ನಟನ ಅದ್ಭುತ ನಟನೆಯಿಂದ ಮನಸೆಳೆದ ಶೋ. ಬಹಳಷ್ಟು ಜನರಿಗೆ ಮಿಸ್ಟರ್ ಬೀನ್ ಎಂದೇ ಗೊತ್ತಿರುವ ಆ ಅದ್ಭುತ ನಟನ ಹೆಸರು ರೋವನ್ ಸೆಬಾಸ್ಟಿಯನ್ ಆಟ್ಕಿನ್​ಸನ್ ಎಂದು. ಚಾರ್ಲಿ ಚಾಪ್ಲಿನ್ ಬಳಿಕ ತುಂಬಾ ಜನರ ಮೆಚ್ಚುಗೆ ಪಡೆದ ಅಂತಹುದೇ ಶೋ ಇದು. ಮಿಸ್ಟರ್ ಬೀನ್ ಕಾರ್ಟೂನ್ ವರ್ಷನ್ ಕೂಡ ನೀವು ನೋಡಿರುತ್ತೀರಿ. ಎಲ್ಲರೂ ಆ ಪಾತ್ರವನ್ನು ಅಷ್ಟೊಂದು ಇಷ್ಟಪಡುತ್ತಿದ್ದರು.

ಈ ಶೋ ತುಂಬಾ ವರ್ಷಗಳ ಮೊದಲೇ ಅಂತ್ಯ ಕಂಡಿದೆ. ಆದರೂ ರೋವನ್ ಆಟ್ಕಿನ್​ಸನ್ ಎಂಬ ನಟ ಇನ್ನೂ ಕೂಡ ಮಿಸ್ಟರ್ ಬೀನ್ ಆಗಿಯೇ ಎಲ್ಲರ ಮನದೊಳಗೆ ಇದ್ದೇ ಇದ್ದಾರೆ. ಈ ನಡುವೆ ಇಲ್ಲೊಂದು ವಿಶೇಷ ಸುದ್ದಿ ಇದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಇಟಲಿಯ ವ್ಯಕ್ತಿ ಮಿಸ್ಟರ್ ಬೀನ್​ನಂತೆ ಕಂಡಿದ್ದಾರೆ. ಬೀನ್ ಹಾಗೂ ಬೀನ್​ನ ಪ್ರೀತಿಯ ಬೊಂಬೆ ಹಿಡಿದು ಅವರು ಕಾಣಿಸಿಕೊಂಡಿದ್ದಾರೆ.

ಟಿಕ್​ಟಾಕ್ ಸ್ಟಾರ್​ಗಳಾದ ಫಬಿಯೋಲಾ ಬಗ್ಲೇರಿ ಮತ್ತು ಅರನಾಲ್ಡೊ ಮಂಗಿನಿ ಹೀಗೆ ಅಭಿಮಾನಿಗಳಿಗೆ ಕಾಣಿಸಿಕೊಂಡು ಮಿಂಚಿದ್ದಾರೆ. ಅವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ, ಟಿಕ್​ಟಾಕ್​ನಲ್ಲಿ ಆಕ್ಟೀವ್ ಸ್ಟಾರ್​ಗಳು ಎಂದು ಸಾಮಾಜಿಕ ಜಾಲತಾಣ ಹಿಂಬಾಲಿಕರಿಗೆ ಗೊತ್ತೇ ಇರುತ್ತದೆ. ಇದೀಗ, ವೈರಲ್ ಆಗಿರುವ ವಿಡಿಯೋದಲ್ಲಿ ಅವರು ಮಿಸ್ಟರ್ ಬೀನ್ ಕಾಪಿಯಂತೆ ಕಂಡಿದ್ದಾರೆ. ಈ ಇಬ್ಬರು ಕೂಡ ನಿಜವಾಗಿ ತಂದೆ ಮಗಳು ಅಲ್ಲ. ಅವರಿಬ್ಬರೂ ಬೇರೆ ಬೇರೆ ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದಾರೆ. ಆದರೆ, ಇಲ್ಲಿ ಅವರು ಮಿಸ್ಟರ್ ಬೀನ್ ಹಾಗೂ ಮಗಳಂತೆ ಕಾಣಿಸಿಕೊಂಡಿದ್ದಾರೆ.

View this post on Instagram

A post shared by ??? (@fabiola.baglieri)

View this post on Instagram

A post shared by ??? (@fabiola.baglieri)

ಟಿಕ್​ಟಾಕ್ ಸೆಲೆಬ್ರಿಟಿಗಳಾಗಿರುವ ಅವರು ಇಬ್ಬರೂ ಇನ್​ಸ್ಟಾಗ್ರಾಂನಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಅವರು ಆಗಾಗ ಅಪ್ಡೇಟ್​ಗಳನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಕೂಡ ಹಂಚಿಕೊಳ್ಳುತ್ತಿರುತ್ತಾರೆ. ರೀಲ್ಸ್ ಮಾಡುತ್ತಿರುತ್ತಾರೆ. ಮಿಸ್ಟರ್ ಬೀನ್ ಅವತಾರದಲ್ಲಿ ಬೀನ್​ನ ಮೆಚ್ಚಿನ ಟೆಡ್ಡಿ ಜೊತೆಗೆ ನಿಂತು ಅವರು ಫೋಟೊ ಕೂಡ ಹಂಚಿಕೊಂಡಿದ್ದಾರೆ. ಆ ಬಳಿಕ ಈ ವಿಡಿಯೋ, ಫೋಟೊಗೆ ತುಂಬಾ ಪ್ರತಿಕ್ರಿಯೆಗಳು ಬಂದಿವೆ. ಇಬ್ಬರು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ವಿಡಿಯೋ, ಫೋಟೊ, ರೀಲ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಿಸ್ಟರ್ ಬೀನ್ ಅವತಾರ ಮಾತ್ರ ಎಲ್ಲರ ಮನಗೆದ್ದಿದೆ.

ಇದನ್ನೂ ಓದಿ: Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​

ಇದನ್ನೂ ಓದಿ: Viral Video: ಆನೆ ತನ್ನ ಸ್ನೇಹಿತನೊಂದಿಗೆ ಬ್ಯಾಸ್ಕೆಟ್​ಬಾಲ್ ಆಡುತ್ತಿದೆ! ವಿಡಿಯೋ ಮಜವಾಗಿದೆ ನೋಡಿ

Published On - 6:24 pm, Fri, 15 October 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್