ಈ ಅವತಾರದಲ್ಲಿ ಬಂದು ಅಭಿಮಾನಿಗಳಿಗೆ ರಶ್ಮಿಕಾ ಹೇಳಿದ್ದೇನು; ಹೊಸ ಫೋಟೋ ವೈರಲ್​

ಈ ಅವತಾರದಲ್ಲಿ ಬಂದು ಅಭಿಮಾನಿಗಳಿಗೆ ರಶ್ಮಿಕಾ ಹೇಳಿದ್ದೇನು; ಹೊಸ ಫೋಟೋ ವೈರಲ್​
ರಶ್ಮಿಕಾ ಮಂದಣ್ಣ

Rashmika Mandanna: ವಿಜಯ ದಶಮಿ ಹಬ್ಬದ ಪ್ರಯುಕ್ತ ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡ ಈ ಫೋಟೋಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಕೆಲವೇ ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

TV9kannada Web Team

| Edited By: Madan Kumar

Oct 16, 2021 | 8:40 AM

ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಅವರು ಸಮಯ ಮೀಸಲಿಡುತ್ತಾರೆ. ಆಗಾಗ ತಮ್ಮ ದಿನಚರಿ ಬಗ್ಗೆ ಅಪ್​ಡೇಟ್​ ನೀಡುತ್ತಾರೆ. ಈಗ ಅವರು ತಮ್ಮೆಲ್ಲ ಅಭಿಮಾನಿಗಳಿಗಾಗಿ ವಿಜಯ ದಶಮಿ ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಸ್ವಲ್ಪ ತಡವಾಗಿ ವಿಶ್​ ಮಾಡಿದ್ದಾರೆ. ಅದರ ಜೊತೆಗೆ ಅವರು ಹಂಚಿಕೊಂಡಿರುವ ಫೋಟೋ ಗಮನ ಸೆಳೆಯುತ್ತಿದೆ.

‘ನಾನು ತಡ ಮಾಡಿದ್ದೇನೆ ಎಂಬುದು ಗೊತ್ತು. ಆದರೂ.. ದಸರಾ ಹಬ್ಬದ ಶುಭಾಶಯಗಳು. ಹಬ್ಬ ಎಂದರೆ ನಗು ಮತ್ತು ಸಂಭ್ರಮ. ಹಬ್ಬದಲ್ಲಿ ಮಾತ್ರವಲ್ಲದೇ ಸದಾ ಕಾಲ ಖುಷಿ ನೀಡಲು ಬಯಸುತ್ತೇನೆ. ನನ್ನನ್ನು ಅಥವಾ ನನ್ನ ಕೆಲಸವನ್ನು ನೋಡಿದಾಗ ನಿಮ್ಮ ಮುಖದಲ್ಲಿ ಖುಷಿ ಮೂಡಿಸಲು ನಾನು ಬಯಸುತ್ತೇನೆ. ಇದನ್ನು ಹೇಳಬೇಕು ಎನಿಸಿತು. ನೀವೆಲ್ಲರೂ ನನ್ನ ಪಾಲಿನ ಬೆಸ್ಟ್​ ವ್ಯಕ್ತಿಗಳು’ ಎಂದು ಅಭಿಮಾನಿಗಳಿಗೆ ರಶ್ಮಿಕಾ ವಿಶ್ ಮಾಡಿದ್ದಾರೆ.

ರಶ್ಮಿಕಾ ಅವರ ಫೋಟೋಗಳನ್ನು ಇಟ್ಟುಕೊಂಡು ಟ್ರೋಲ್​ ಮಾಡುವವರ ಸಂಖ್ಯೆ ದೊಡ್ಡದಿದೆ. ಹಾಗಂತ ಅವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವವರಲ್ಲ. ತಮಗೆ ಇಷ್ಟ ಬಂದ ರೀತಿಯಲ್ಲೇ ಅವರು ಫೋಟೋಗಳನ್ನು ಪೋಸ್ಟ್​ ಮಾಡುತ್ತಾರೆ. ಈಗ ಅವರು ಹಂಚಿಕೊಂಡಿರುವ ಫೋಟೋ ಕೂಡ ಕೊಂಚ ವಿಲಕ್ಷಣವಾಗಿದೆ. ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ. ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಫೋಟೋಗೆ 20 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅಲ್ಲು ಅರ್ಜುನ್​ ಜೊತೆ ನಟಿಸಿರುವ ‘ಪುಷ್ಪ’ ಚಿತ್ರ ಡಿಸೆಂಬರ್​ 17ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಶ್ರೀವಲ್ಲಿ ಎಂಬ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಶ್ರೀವಲ್ಲಿ ಪಾತ್ರದ ಪೋಸ್ಟರ್​ ಮತ್ತು ಸಾಂಗ್​ ಬಿಡುಗಡೆ ಆಗಿತ್ತು. ‘ಪುಷ್ಪ’ ಚಿತ್ರದಿಂದ ರಶ್ಮಿಕಾ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಅತ್ತ ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಪೊಗರು’ ನಂತರ ಅವರು ಯಾವುದೇ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ:

ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ; ಎಲ್ಲಿಂದ ಬರುತ್ತಿದೆ ಇಷ್ಟೊಂದು ದುಡ್ಡು?

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

Follow us on

Related Stories

Most Read Stories

Click on your DTH Provider to Add TV9 Kannada