AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Deol: ‘ಗದರ್​ 2’ ಚಿತ್ರ ಘೋಷಿಸಿದ ಸನ್ನಿ ಡಿಯೋಲ್​: ಮೋಷನ್​ ಪೋಸ್ಟರ್​ ಜತೆ ರಿಲೀಸ್​ ಬಗ್ಗೆಯೂ ಸಿಕ್ತು ಮಾಹಿತಿ

Gadar 2: ‘ಗದರ್​’ ಚಿತ್ರಕ್ಕೆ ಅನಿಲ್​ ಶರ್ಮಾ ನಿರ್ದೇಶನ ಮಾಡಿದ್ದರು. ಈಗ ಎರಡನೇ ಪಾರ್ಟ್​ ಕೂಡ ಅವರ ನಿರ್ದೇಶನದಲ್ಲೇ ಮೂಡಿಬರಲಿದೆ. ‘ಗದರ್​’ನಲ್ಲಿ ನಾಯಕಿ ಆಗಿದ್ದ ಅಮೀಷಾ ಪಟೇಲ್​ ಅವರೇ ಮತ್ತೆ ಸನ್ನಿ ಡಿಯೋಲ್​ಗೆ ಜೋಡಿ ಆಗುತ್ತಿದ್ದಾರೆ.

Sunny Deol: ‘ಗದರ್​ 2’ ಚಿತ್ರ ಘೋಷಿಸಿದ ಸನ್ನಿ ಡಿಯೋಲ್​: ಮೋಷನ್​ ಪೋಸ್ಟರ್​ ಜತೆ ರಿಲೀಸ್​ ಬಗ್ಗೆಯೂ ಸಿಕ್ತು ಮಾಹಿತಿ
‘ಗದರ್​ 2’
TV9 Web
| Edited By: |

Updated on: Oct 16, 2021 | 9:58 AM

Share

2001ರಲ್ಲಿ ತೆರೆಕಂಡ ‘ಗದರ್​: ಏಕ್​ ಪ್ರೇಮ್​ ಕಥಾ’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾದಲ್ಲಿ ನಟ ಸನ್ನಿ ಡಿಯೋಲ್​ ಅವರು ಮಿಂಚಿದ್ದರು. ಅದಾಗಿ 20 ವರ್ಷಗಳ ಕಳೆದಿವೆ. ಈಗ ‘ಗದರ್​: ಏಕ್​ ಪ್ರೇಮ್​ ಕಥಾ’ ಸಿನಿಮಾದ ಸೀಕ್ವೆಲ್​ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಸನ್ನಿ ಡಿಯೋಲ್​ ಅವರು ‘ಗದರ್​ 2’ ಚಿತ್ರ ಅನೌನ್ಸ್​ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಸನ್ನಿ ಡಿಯೋಲ್​ ಅವರಿಗೆ ಈಗ 64 ವರ್ಷ ವಯಸ್ಸು. ಇತ್ತೀಚಿನ ವರ್ಷಗಳಲ್ಲಿ ಅವರು ನಟನೆಯಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರಷ್ಟೇ. ಈ ನಡುವೆ ಅವರು ‘ಗದರ್​ 2’ ಘೋಷಣೆ ಮಾಡಿರುವುದು ಸಿನಿಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಈ ಚಿತ್ರ 2022ಕ್ಕೆ ಬಿಡುಗಡೆ ಆಗಲಿದೆ ಎಂಬುದನ್ನೂ ಸನ್ನಿ ಡಿಯೋಲ್​ ತಿಳಿಸಿದ್ದಾರೆ.

‘ಗದರ್​ 2’ ಕುರಿತು ಈ ಸಿಹಿ ಸುದ್ದಿಯನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಎರಡು ದಶಕಗಳ ಬಳಿಕ ಕಾಯುವಿಕೆಗೆ ಕೊನೆಗೂ ಅಂತ್ಯ ಸಿಕ್ಕಿದೆ. ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ‘ಗದರ್​ 2’ ಚಿತ್ರದ ಮೋಷನ್​ ಪೋಸ್ಟರ್​ ಪ್ರಸ್ತುತ ಪಡಿಸುತ್ತಿದ್ದೇನೆ’ ಎಂದು ಅವರು ಟ್ವಿಟರ್​, ಇನ್​ಸ್ಟಾಗ್ರಾಮ್​ ಮುಂತಾದ ಖಾತೆಗಳಲ್ಲಿ ಪೋಸ್ಟ್​ ಮಾಡಿದ್ದಾರೆ.

‘ಗದರ್​’ ಚಿತ್ರಕ್ಕೆ ಅನಿಲ್​ ಶರ್ಮಾ ನಿರ್ದೇಶನ ಮಾಡಿದ್ದರು. ಈಗ ಎರಡನೇ ಪಾರ್ಟ್​ ಕೂಡ ಅವರ ನಿರ್ದೇಶನದಲ್ಲೇ ಮೂಡಿಬರಲಿದೆ. ‘ಗದರ್​’ನಲ್ಲಿ ನಾಯಕಿ ಆಗಿದ್ದ ಅಮೀಷಾ ಪಟೇಲ್​ ಅವರೇ ಮತ್ತೆ ಸನ್ನಿ ಡಿಯೋಲ್​ಗೆ ಜೋಡಿ ಆಗುತ್ತಿದ್ದಾರೆ. ದೇಶ ವಿಭಜನೆಯ ಹಿನ್ನೆಲೆಯಲ್ಲಿ ‘ಗದರ್​’ ಕಥೆ ಮೂಡಿಬಂದಿತ್ತು. ಈಗ ಅದರ ಸೀಕ್ವೆಲ್​ಗೆ ನಿರ್ದೇಶಕರು ಯಾವ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಕೌತುಕ ಮನೆ ಮಾಡಿದೆ. ‘ಕಥೆ ಮುಂದುವರಿಯುತ್ತದೆ’ ಎಂದು ಮಾತಿನ ಮೂಲಕ ಸನ್ನಿ ಡಿಯೋಲ್​ ಇನ್ನಷ್ಟು ನಿರೀಕ್ಷೆ ಮೂಡಿಸಿದ್ದಾರೆ.

ಇದನ್ನೂ ಓದಿ:

ಶಾರುಖ್​ ಮಗನನ್ನು ಅರೆಸ್ಟ್​ ಮಾಡಿದ ಎನ್​ಸಿಬಿ ಅಧಿಕಾರಿಗೆ ಈಗ ಹೊಸ ತಲೆನೋವು; ಇದು ಯಾರ ಸಂಚು?

‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ