‘ಸಲಗ’ ಮತ್ತು ‘ಕೋಟಿಗೊಬ್ಬ 3’ಗೆ ಕಾಡಿದ ಪೈರಸಿ ಕಾಟ; ರಿಲೀಸ್​ ಆದ ದಿನವೇ ಅಪ್ಲೋಡ್​ ಆಯ್ತು ಸಿನಿಮಾ ಕಾಪಿ

ಅಕ್ಟೋಬರ್​ 14ರಂದು ರಿಲೀಸ್​ ಆದ ‘ಸಲಗ’ ಮತ್ತು ಇಂದು (ಅಕ್ಟೋಬರ್ 15) ರಿಲೀಸ್ ಆದ ‘ಕೋಟಿಗೊಬ್ಬ 3’ಗೆ ಭಾರೀ ಹೊಡೆತ ಕೊಟ್ಟಿದೆ.

‘ಸಲಗ’ ಮತ್ತು ‘ಕೋಟಿಗೊಬ್ಬ 3’ಗೆ ಕಾಡಿದ ಪೈರಸಿ ಕಾಟ; ರಿಲೀಸ್​ ಆದ ದಿನವೇ ಅಪ್ಲೋಡ್​ ಆಯ್ತು ಸಿನಿಮಾ ಕಾಪಿ
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್, ‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 15, 2021 | 10:25 PM

ಸ್ಟಾರ್​ ನಟರ ಸಿನಿಮಾಗಳಿಗೆ ಪೈರಸಿ ಸಮಸ್ಯೆ ಬಹಳ ಗಂಭೀರವಾಗಿ ಕಾಡುತ್ತಿದೆ. ಸಿನಿಮಾ ರಿಲೀಸ್ ಆದ ದಿನವೇ ಪೈರಸಿ ಕಾಪಿ ಬಿಡುಗಡೆ ಆಗುತ್ತಿದೆ. ಈಗ ಬಿಡುಗಡೆಯಾದ ದುನಿಯಾ ವಿಜಯ್​ ನಟನೆಯ ‘ಸಲಗ’ ಮತ್ತು ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾಗೂ ಪೈರಸಿ ಕಾಟ ತಟ್ಟಿದೆ.

ಅಕ್ಟೋಬರ್​ 14ರಂದು ರಿಲೀಸ್​ ಆದ ‘ಸಲಗ’ ಮತ್ತು ಇಂದು (ಅಕ್ಟೋಬರ್ 15) ರಿಲೀಸ್ ಆದ ‘ಕೋಟಿಗೊಬ್ಬ 3’ಗೆ ಭಾರೀ ಹೊಡೆತ ಕೊಟ್ಟಿದೆ. ಕನ್ನಡ ರಾಕರ್ಸ್ ಹೆಸರಲ್ಲಿ ಕನ್ನಡದ ಹೊಚ್ಚಹೊಸ ಚಿತ್ರಗಳು ಪೈರಸಿ ಆಗಿದೆ. ಎರಡೂ ಚಿತ್ರಗಳನ್ನು ಪೈರಸಿ ಮಾಡಿ ಟೆಲಿಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಯಾವ ರೀತಿಯ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಬಗ್ಗೆ ಸಂದೇಶವೊಂದು ಟೆಲಿಗ್ರಾಮ್​ನಲ್ಲಿ ಹರಿದಾಡಿತ್ತು. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್​ಲೋಡ್​ ಮಾಡಲು ನಮ್ಮ ಚಾನೆಲ್​ಗೆ ಜಾಯಿನ್​ ಆಗಿ’ ಎಂಬಿತ್ಯಾದಿ ಸಂದೇಶ ವೈರಲ್​ ಆಗಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿತ್ತು.

ಪೈರಸಿ ತಡೆಯುವ ಉದ್ದೇಶದಿಂದ ‘ಸಲಗ’ ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ‘ಭಜರಂಗಿ-2’ ಸಿನಿಮಾ ನಿರ್ಮಾಪಕ ಜಯಣ್ಣ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್, ಗಣೇಶ್​ ಅವರು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್​ಗೆ ಮನವಿ ಸಲ್ಲಿಕೆ ಮಾಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಇತ್ತೀಚೆಗೆ ಪೈರಸಿ ಬಗ್ಗೆ ಮಾತನಾಡಿದ್ದರು. ‘ಅವರ ಬಗ್ಗೆ ಏನು ಮಾತಾಡೋಣ? ಕೋವಿಡ್​ಗೆ ಭಯ ಬೀಳದೇ ಬದುಕಿ ಬಂದಿದ್ದೇನೆ. ಇದ್ಯಾವುದು ಕಿತ್ತೋಗಿರೋ ಪೈರಸಿಗೆ ಏಕೆ ಭಯ ಬೀಳಲಿ? ಪೈರಸಿ ಮಾಡಲಿ ಬಿಡಿ. ಅದಕ್ಕೆಲ್ಲ ನಾನು ಹೆದರಲ್ಲ. ಮನೆಯವರೇ ಕಳ್ಳರನ್ನು ಒಳಗೆ ಬಿಟ್ಟಾಗ ನಾವು ಕಳ್ಳರಿಗೆ ಬಯ್ಯೋದು ತಪ್ಪಾಗುತ್ತದೆ’ ಎಂದು ಮಾರ್ಮಿಕವಾಗಿ ಮಾತನಾಡಿದ್ದರು.

ಇದನ್ನೂ ಓದಿ: ಪೈರಸಿ ಮಾಡಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ; ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ ಪೊಲೀಸ್​ ತಂಡ

‘ಕೊವಿಡ್​ಗೆ ಹೆದರಲಿಲ್ಲ, ಕಿತ್ತೋಗಿರೋ ಪೈರಸಿಗೆ ಏಕೆ ಹೆದರಲಿ?’ ಸುದೀಪ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ