ಪೈರಸಿ ಮಾಡಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ; ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ ಪೊಲೀಸ್​ ತಂಡ

ಅಕ್ಟೋಬರ್​ 14ರಂದು ದಿನಿಯಾ ವಿಜಯ್​ ನಟನೆಯ ‘ಸಲಗ’ ಮತ್ತು ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ತೆರೆಗೆ ಬರುತ್ತಿದೆ. ಅಕ್ಟೋಬರ್​ 29ರಂದು ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ರಿಲೀಸ್​ ಆಗುತ್ತಿದೆ.

ಪೈರಸಿ ಮಾಡಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ; ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ ಪೊಲೀಸ್​ ತಂಡ
ಸಲಗ-ಭಜರಂಗಿ 2, ಕೋಟಿಗೊಬ್ಬ 3 ಪೋಸ್ಟರ್​

ಕರ್ನಾಟಕ ಕೊವಿಡ್​ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸ್ಟಾರ್​ ಸಿನಿಮಾಗಳು ರಿಲೀಸ್​ ಡೇಟ್​ ಘೋಷಣೆ ಮಾಡಿದೆ. ಇದರ ಜತೆಗೆ ಸಿನಿಮಾ ತಂಡಕ್ಕೆ ಪೈರಸಿಯ ಕಾಟದ ಭಯ ಕಾಡುತ್ತಿದೆ. ಸಿನಿಮಾಗಳು ರಿಲೀಸ್​ ಆದ ಕೂಡಲೇ ಥಿಯೇಟರ್​ ಪ್ರಿಂಟ್​ಅನ್ನು ಆನ್​ಲೈನ್​ನಲ್ಲಿ ಬಿಡೋಕೆ ಕೆಲ ಕಿಡಿಗೇಡಿಗಳು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಪೈರಸಿ ತಡೆಗೆ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಅದು ಸಾಲುತ್ತಿಲ್ಲ. ಈ ಕಾರಣಕ್ಕೆ ಪೈರಸಿ ತಡೆಗೆ ಈ ಬಾರಿ ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ.

ಅಕ್ಟೋಬರ್​ 14ರಂದು ದುನಿಯಾ ವಿಜಯ್​ ನಟನೆಯ ‘ಸಲಗ’ ಮತ್ತು ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ತೆರೆಗೆ ಬರುತ್ತಿದೆ. ಅಕ್ಟೋಬರ್​ 29ರಂದು ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ರಿಲೀಸ್​ ಆಗುತ್ತಿದೆ. ಈ ಎಲ್ಲಾ ಸಿನಿಮಾಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿವೆ. ಈ ಸಿನಿಮಾಗಳನ್ನು ನೋಡೋಕೆ ಅಭಿಮಾನಿಗಳು ರೆಡಿ ಆಗುತ್ತಿದ್ದಾರೆ. ಚಿತ್ರಮಂದಿರಗಳು ಕೂಡ ಈಗಾಗಲೇ ಸಜ್ಜುಗೊಂಡಿವೆ. ಈ ಮಧ್ಯೆ ಚಿತ್ರತಂಡಕ್ಕೆ ಪೈರಸಿ ಕಾಟದ ಭಯ ಕಾಡುತ್ತಿದೆ.

‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಬಗ್ಗೆ ಸಂದೇಶವೊಂದು ಟೆಲಿಗ್ರಾಮ್​ನಲ್ಲಿ ಹರಿದಾಡುತ್ತಿದೆ. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್​ಲೋಡ್​ ಮಾಡಲು ನಮ್ಮ ಚಾನೆಲ್​ಗೆ ಜಾಯಿನ್​ ಆಗಿ’ ಎಂಬಿತ್ಯಾದಿ ಸಂದೇಶ ವೈರಲ್​ ಆಗಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಇಂದು (ಅಕ್ಟೋಬರ್​ 1) ‘ಸಲಗ’ ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ‘ಭಜರಂಗಿ-2’ ಸಿನಿಮಾ ನಿರ್ಮಾಪಕ ಜಯಣ್ಣ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್, ಗಣೇಶ್​ ಅವರು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್​ಗೆ ಮನವಿ ಸಲ್ಲಿಕೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ.ಮಂಜು, ‘ಕಮೀಷನರ್ ಕಚೇರಿಯಲ್ಲಿಯೇ ಸ್ಕ್ವಾಡ್ ಮಾಡಲಾಗಿದೆ. ಆ ತಂಡ ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ’ ಎಂದಿದ್ದಾರೆ. ಈ ಮೂಲಕ ಪೈರಸಿಗೆ ಬ್ರೇಕ್​ ಹಾಕಲು ಹೊಸ ಪ್ಲ್ಯಾನ್​ ರೂಪಿಸಲಾಗಿದೆ.

ಇದನ್ನೂ ಓದಿ: ‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಮಾಡಲು ಕಿಡಿಗೇಡಿಗಳ ಪ್ಲ್ಯಾನ್​; ಇಲ್ಲಿದೆ ಸಾಕ್ಷಿ

ಕೋಟಿಗೊಬ್ಬ 3 ಚಿತ್ರತಂಡಕ್ಕೆ ಅಭಯ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

Read Full Article

Click on your DTH Provider to Add TV9 Kannada