‘ನಾನೀಗ ಅನಾಥೆ, ನನಗೆ ಯಾರೂ ಇಲ್ಲ’; ತಾಯಿ ಕಳೆದುಕೊಂಡ ನಟಿ ವಿಜಯಲಕ್ಷ್ಮಿ ಭಾವುಕ ಮಾತು

ವಿಜಯಲಕ್ಷ್ಮಿ ಅವರು ಚಿತ್ರರಂಗದಲ್ಲಿ ಆ್ಯಕ್ಟಿವ್​ ಆಗಿಲ್ಲ. ಆದರೆ, ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ. ಅವರ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

‘ನಾನೀಗ ಅನಾಥೆ, ನನಗೆ ಯಾರೂ ಇಲ್ಲ’; ತಾಯಿ ಕಳೆದುಕೊಂಡ ನಟಿ ವಿಜಯಲಕ್ಷ್ಮಿ ಭಾವುಕ ಮಾತು
ವಿಜಯಲಕ್ಷ್ಮಿ


‘ತಾಯಿಯನ್ನು ಕಳೆದುಕೊಂಡ ನಂತರ ನನಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಆಗ ಖ್ಯಾತ ನಿರ್ಮಾಪಕ ಬಾ.ಮಾ. ಹರೀಶ್​ ಅವರು ನನ್ನ ಸಹಾಯಕ್ಕೆ ಬಂದರು’ ಎಂದು ನಾಗಮಂಡಲ ನಟಿ ವಿಜಯಲಕ್ಷ್ಮಿ ಹೇಳಿದ್ದಾರೆ

ವಿಜಯಲಕ್ಷ್ಮಿ ಅವರು ಚಿತ್ರರಂಗದಲ್ಲಿ ಆ್ಯಕ್ಟಿವ್​ ಆಗಿಲ್ಲ. ಆದರೆ, ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ. ಅವರ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ವಿಜಯಲಕ್ಷ್ಮಿಗೆ ಕೊವಿಡ್​ ಅಂಟಿತ್ತು. ಇದರಿಂದ ಅವರ ಆರೋಗ್ಯ ಗಂಭೀರವಾಗಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿದ್ದಂತೆ ಅವರು ತಾಯಿಯನ್ನು ಕಳೆದುಕೊಂಡಿದ್ದರು.

ಈ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ವಿಜಯಲಕ್ಷ್ಮಿ, ‘ನಂಗೆ ಯಾರೂ ಇಲ್ಲ. ನಾನೀಗ ಅನಾಥೆ. ನನಗೆ ಚಿತ್ರರಂಗವೇ ಕುಟುಂಬ. ನನ್ನ ಅಮ್ಮ ಸತ್ತ ನಂತರ ಪ್ರೇಮಕ್ಕನಿಗೆ ಕರೆ ಮಾಡಿ ಹೇಳಿದೆ. ಅವರು ಬಾ.ಮಾ. ಹರೀಶ್​ ನಂಬರ್ ಕೊಟ್ರು. ಕರೆ ಮಾಡಿದ ತಕ್ಷಣ ಹರೀಶಣ್ಣ ಸಹಾಯಕ್ಕೆ ಬಂದ್ರು. ನಾನು ಆಗ ಹೆಣದ ಮುಂದೆ ಕೂತು ಅಳ್ತಾ ಇದ್ದೆ. ಅಮ್ಮನ ಶವವನ್ನು ಸುಟ್ಟು, ಶ್ರೀರಂಗಪಟ್ಟಣದಲ್ಲಿ ಬೂದಿ ಬಿಟ್ಟು ಬಂದಿದ್ದೇವೆ. ಇದೆಲ್ಲದಕ್ಕೂ ಬಾ.ಮಾ. ಹರೀಶ್​ ಸಹಾಯ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧನ್ಯವಾದ’ ಎಂದರು.


‘​ಶಿವಣ್ಣ, ಪುನೀತ್​ ರಾಜ್​ಕುಮಾರ್​, ಹುಚ್ಚಾ ವೆಂಕಟ್​ ಎಲ್ಲರೂ ಮಾತನಾಡಿದ್ದಾರೆ. ನನಗೆ ಆನೇಕಲ್ಲಲ್ಲಿ ಫ್ರೀ ಆಗಿ ಮನೆ ಕೊಡೋಕೆ ಒಬ್ಬರು ಮುಂದೆ ಬಂದಿದ್ದಾರೆ. ಆದ್ರೆ ಅಲ್ಲಿಗೆ ನಾನು ಹೋಗಲ್ಲ. ಸಿನಿಮಾ ಕೆಲಸ ಇರೋದು ಬೆಂಗಳೂರಿನಲ್ಲಿ. ಅಲ್ಲಿಗೆ ಹೋಗಿ ನಾನೇನು ಮಾಡಲಿ? ಎಂದು ಪ್ರಶ್ನೆ ಮಾಡಿದ್ದಾರೆ ಅವರು.

ಇದನ್ನೂ ಓದಿ: ‘ನಾನು ಉಳಿಯುವ ರೀತಿ ಕಾಣುತ್ತಿಲ್ಲ’; ಹೊಸ ವಿಡಿಯೋ ಮಾಡಿ ಹರಿಬಿಟ್ಟ ನಟಿ ವಿಜಯಲಕ್ಷ್ಮಿ

‘ನಾಗಮಂಡಲ’ ವಿಜಯಲಕ್ಷ್ಮಿಗೆ ಮುಗಿಯದ ಸಂಕಷ್ಟ; ತಾಯಿಯನ್ನು ಕಳೆದುಕೊಂಡ ನಟಿ

Read Full Article

Click on your DTH Provider to Add TV9 Kannada