ಸವಿ ಮಾದಪ್ಪ ಬಾಯಫ್ರೆಂಡ್​ ವಿವೇಕ್​ ವಿರುದ್ಧ ತಂದೆಯಿಂದ ಶಾಕಿಂಗ್​ ಹೇಳಿಕೆ

ತಮ್ಮ ಮಗಳು ಒಬ್ಬಳೇ ಇದ್ದಳು ಎಂದು ಸವಿ ಪೋಷಕರು ಹೇಳುತ್ತಿದ್ದಾರೆ. ಈಗ ಸವಿ ಅಂತ್ಯಸಂಸ್ಕಾರ ನೆರವೇರಿದೆ. ಇದರ ನಂತರದಲ್ಲಿ ವಿವೇಕ್​ ವಿರುದ್ಧ ಸವಿ ತಂದೆ ಪ್ರಭು ಆಕ್ರೋಶ ಹೊರ ಹಾಕಿದ್ದಾರೆ.

ಸವಿ ಮಾದಪ್ಪ ಬಾಯಫ್ರೆಂಡ್​ ವಿವೇಕ್​ ವಿರುದ್ಧ ತಂದೆಯಿಂದ ಶಾಕಿಂಗ್​ ಹೇಳಿಕೆ
ಸವಿ ಮಾದಪ್ಪ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 01, 2021 | 7:24 PM

ಸ್ಯಾಂಡಲ್​ವುಡ್​ನಲ್ಲಿ ನಟಿಸಿದ್ದ ಸವಿ ಮಾದಪ್ಪ ಅವರು ಗುರುವಾರ (ಸೆ.30) ಸಾವನ್ನಪಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನ ಅಪಾರ್ಟ್​​ಮೆಂಟ್​ನಲ್ಲಿ ಬಾಯ್​ಫ್ರೆಂಡ್​ ವಿವೇಕ್​ ಜೊತೆ ಅವರು ವಾಸವಾಗಿದ್ದರು ಎನ್ನಲಾಗುತ್ತಿದೆ. ಆದರೆ ತಮ್ಮ ಮಗಳು ಒಬ್ಬಳೇ ಇದ್ದಳು ಎಂದು ಸವಿ ಪೋಷಕರು ಹೇಳುತ್ತಿದ್ದಾರೆ. ಈಗ ಸವಿ ಅಂತ್ಯಸಂಸ್ಕಾರ ನೆರವೇರಿದೆ. ಇದರ ನಂತರದಲ್ಲಿ ವಿವೇಕ್​ ವಿರುದ್ಧ ಸವಿ ತಂದೆ ಪ್ರಭು ಆಕ್ರೋಶ ಹೊರ ಹಾಕಿದ್ದಾರೆ.

‘ನನ್ನ ಪುತ್ರಿ ವಿವಾಹವಾಗುವುದಾಗಿ ವಿವೇಕ್​ ಒತ್ತಡ ಹಾಕುತ್ತಿದ್ದ. ನನ್ನ ಮಗಳ ಸ್ನೇಹ ಬೆಳಸುವುದಕ್ಕೆ ವಿವೇಕ್​ ಯಾರು? ನನ್ನ ಮಗಳನ್ನ ವಿವಾಹವಾಗಲು ಬ್ಯಾಕ್​​ಗ್ರೌಂಡ್ ಏನು? ವಿವೇಕ್​​ ನನ್ನ ಮಗಳ‌ ಬ್ರೈನ್ ವಾಶ್ ಮಾಡಿದ್ದಾನೆ. ದೊಡ್ಡ ಮಗಳ‌ ಮದುವೆಯಾಗಿ ಒಂದು‌ ತಿಂಗಳಾಗಿದೆ. ಹೀಗಿರುವಾಗ ಮತ್ತೊಂದು ಮದುವೆ ಹೇಗೆ ಸಾಧ್ಯ? ಮಗಳ ಬಳಿ ಇದ್ದ ಹಣ ಎಲ್ಲೋ ಹೂಡಿಕೆ ಮಾಡಿದ್ದಾರೆ. 5 ಲಕ್ಷ ಹಣವನ್ನು ಅವರು ಎಲ್ಲಿಯೋ ಹೂಡಿಕೆ ಮಾಡಿದ್ದಾರೆ. ನನ್ನ ಮಗಳ ಸಾವಿನ ಬಗ್ಗೆ ತನಿಖೆ ಆಗಲಿ’ ಎಂದು ಪ್ರಭು ಆಗ್ರಹಿಸಿದ್ದಾರೆ.

ಹುಟ್ಟೂರಲ್ಲಿ ಅಂತ್ಯಸಂಸ್ಕಾರ

ಸ್ವಗ್ರಾಮ ಅಂದಗೋವೆಯಲ್ಲಿ ಸವಿ ಅಂತಿಮ ವಿಧಿವಿಧಾನ ನಡೆದಿದೆ. ಸವಿಗೆ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಸಂಪ್ರದಾಯದ ಪ್ರಕಾರ ಸವಿಗೆ ಮದುವೆ ಶಾಸ್ತ್ರ ಮಾಡಲಾಗಿದೆ. ಬಾಳೆಯ ದಿಂಡನ್ನು ಮಧುಮಗನಂತೆ ಅಲಂಕರಿಸಲಾಗಿತ್ತು. ಸವಿ ಪಾರ್ಥಿವ ಶರೀರಕ್ಕೂ ವಧುವಿನಂತೆ ಶೃಂಗಾರ ಮಾಡಲಾಗಿತ್ತು. ನಂತರ ಮಗಳ ಪಾರ್ಥಿವ ಶರೀರಕ್ಕೆ ತಾಯಿ ತಾಳಿ ಕಟ್ಟಿದ್ದಾರೆ. ಸವಿ ಮಾದಪ್ಪ ಆತ್ಮಕ್ಕೆ ಮೋಕ್ಷ ಸಿಗಲು ವಿವಾಹ ಶಾಸ್ತ್ರ ನೆರವೇರಿಸಲಾಗಿದೆ. ವಿವಾಹ ಶಾಸ್ತ್ರದ ಸಂದರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಏನು?

ಅಂತಿಮ‌ಸಂಸ್ಕಾರದ ವೇಳೆ ಸವಿ ಮಾದಪ್ಪಗೆ ಮದುವೆ ಶಾಸ್ತ್ರ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್