‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

ಅ.8ರಂದು ತೆರೆ ಕಾಣಲಿರುವ ‘ನಿನ್ನ ಸನಿಹಕೆ’ ಚಿತ್ರಕ್ಕೆ ಸೂರಜ್​ ಗೌಡ ನಿರ್ದೇಶನ ಮಾಡಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ಅವರಿಗೆ ಧನ್ಯಾ ರಾಮ್​ಕುಮಾರ್​ ಜೋಡಿ ಆಗಿದ್ದಾರೆ. ಈಗಾಗಲೇ ಹಾಡುಗಳನ್ನು ನೋಡಿ ರಜನಿಕಾಂತ್​ ಇಷ್ಟಪಟ್ಟಿದ್ದಾರೆ.

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ
ರಜನಿಕಾಂತ್, ಧನ್ಯಾ ರಾಮ್​ಕುಮಾರ್, ಸೂರಜ್​ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Oct 02, 2021 | 12:59 PM

ಸೂಪರ್​ ಸ್ಟಾರ್​ ರಜನಿಕಾಂತ್ ಅವರಿಗೆ ಕನ್ನಡ ಚಿತ್ರರಂಗದ ಜೊತೆ ಒಳ್ಳೆಯ ನಂಟು ಇದೆ. ಡಾ. ರಾಜ್​ಕುಮಾರ್​ ಫ್ಯಾಮಿಲಿ ಜೊತೆ ಅವರು ಮೊದಲಿನಿಂದಲೂ ಒಡನಾಟ ಹೊಂದಿದ್ದಾರೆ. ಈಗ ಅಣ್ಣಾವ್ರ ಕುಟುಂಬದ ಮೊದಲ ಹೀರೋಯಿನ್​ ಧನ್ಯಾ ರಾಮ್​ಕುಮಾರ್​ ನಟಿಸಿರುವ ‘ನಿನ್ನ ಸನಿಹಕೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅ.8ರಂದು ತೆರೆ ಕಾಣಲಿರುವ ಈ ಚಿತ್ರಕ್ಕೆ ಸೂರಜ್​ ಗೌಡ ನಿರ್ದೇಶನ ಮಾಡಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ಈ ಸಿನಿಮಾ ನೋಡಲು ರಜನಿಕಾಂತ್​ ಆಸಕ್ತಿ ತೋರಿಸಿದ್ದಾರೆ ಎಂಬುದು ಖುಷಿಯ ವಿಚಾರ. ಇದು ಇಡೀ ಚಿತ್ರತಂಡಕ್ಕೆ ದೊಡ್ಡ ಬಲ ನೀಡಿದೆ.

‘ಧನ್ಯಾ ಫ್ಯಾಮಿಲಿ ಮತ್ತು ರಜನಿಕಾಂತ್​ ಫ್ಯಾಮಿಲಿ ನಡುವೆ ಸ್ನೇಹ ಇದೆ. ಧನ್ಯಾ ಅವರನ್ನು ಚಿಕ್ಕ ವಯಸ್ಸಿನಲ್ಲಿ ನೋಡಿದ್ದಾಗಲೇ ಅವರು ನಟಿ ಆಗುತ್ತಾರೆ ಅಂತ ರಜನಿಕಾಂತ್​ ಹೇಳಿದ್ದರಂತೆ. ಅದು ನಿಜವಾಗಿದೆ. ಈಗಾಗಲೇ ಅವರು ನಮ್ಮ ಸಿನಿಮಾದ ಹಾಡುಗಳನ್ನು ನೋಡಿದ್ದಾರೆ. ಅವರಿಗೆ ಇಷ್ಟ ಆಗಿದೆ. ಸಿನಿಮಾ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಚಿತ್ರ ರಿಲೀಸ್​ ಆದ ಬಳಿಕ ಚೆನ್ನೈನಲ್ಲಿ ರಜನಿಕಾಂತ್​ ಅವರಿಗೋಸ್ಕರ ನಾವು ಒಂದು ಪ್ರದರ್ಶನ ಏರ್ಪಡಿಸಬೇಕು’ ಎಂದು ನಿರ್ದೇಶಕ ಕಮ್​ ನಾಯಕ ನಟ ಸೂರಜ್​ ಗೌಡ ಹೇಳಿದ್ದಾರೆ.

ಇಂಥ ಅವಕಾಶ ಎಲ್ಲರಿಗೂ ಸಿಗುವಂಥದ್ದಲ್ಲ. ಕಹಿ, ಸಿಲಿಕಾನ್​ ಸಿಟಿ, ಮದುವೆಯ ಮಮತೆಯ ಕರೆಯೋಲೆ ಸಿನಿಮಾಗಳಲ್ಲಿ ನಟಿಸಿದ ಸೂರಜ್​ ಗೌಡ ಅವರು ‘ನಿನ್ನ ಸನಿಹಕೆ’ ಮೂಲಕ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ತಾವು ಆ್ಯಕ್ಷನ್​-ಕಟ್​ ಹೇಳಿದ ಮೊದಲ ಚಿತ್ರವನ್ನೇ ರಜನಿಕಾಂತ್​ ಅವರಿಗೆ ತೋರಿಸುವ ಅವಕಾಶ ಅವರಿಗೆ ಒದಗಿಬರುತ್ತಿದೆ.

(‘ನಿನ್ನ ಸನಿಹಕೆ’ ಟ್ರೇಲರ್​)

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ‘ನಿನ್ನ ಸನಿಹಕೆ’ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ಲಾಕ್​ಡೌನ್​ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಿಕೆ ಆಗುತ್ತಲೇ ಇತ್ತು. ಅಂತೂ ಈಗ ಅ.8ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅಕ್ಷಯ್​ ರಾಜಶೇಖರ್​, ರಂಗನಾಥ್​ ಕೂಡ್ಲಿ ನಿರ್ಮಾಣ ಮಾಡಿದ್ದಾರೆ. ರಘು ದೀಕ್ಷಿತ್​ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ವಾಸುಕಿ ವೈಭವ್​ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ:

‘ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್​ ಬಗ್ಗೆ ಡಾ. ರಾಜ್​ ಮೊಮ್ಮಗಳ ಮನದ ಮಾತು

ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ