ಅಪರೂಪದ ಕಾರಿನ ಜೊತೆ ನಟ ಜಗ್ಗೇಶ್​; ಅಪ್ಪನ ನೆನಪು ತರಿಸಿತು ಈ ವಾಹನ

ಹಳೇ ಕಾಲದ ಕಾರುಗಳನ್ನು ನೋಡುವುದೇ ಚಂದ. ಅವುಗಳ ವಿನ್ಯಾಸವಂತೂ ಎಲ್ಲರ ಗಮನ ಸೆಳೆಯುತ್ತವೆ. ರೆಟ್ರೋ ಕಾಲದ ಕಾರುಗಳು ನೋಡಲು ಸಿಗುವುದು ಕೂಡ ಅಪರೂಪ.

ಅಪರೂಪದ ಕಾರಿನ ಜೊತೆ ನಟ ಜಗ್ಗೇಶ್​; ಅಪ್ಪನ ನೆನಪು ತರಿಸಿತು ಈ ವಾಹನ
ಆಸ್ಟಿನ್​ ಆಫ್​ ಇಂಗ್ಲೆಂಡ್​ ಕಾರಿನ ಜೊತೆ ಜಗ್ಗೇಶ್​

ಸ್ಯಾಂಡಲ್​ವುಡ್​ ನಟ ಜಗ್ಗೇಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಆಗಾಗ ಏನಾದರೊಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಈಗ ಅವರೊಂದು ವಿಶೇಷ ಕಾರಿನ ಬಗ್ಗೆ ಬರೆದುಕೊಂಡಿದ್ದಾರೆ. ಆ ಕಾರನ್ನು ನೋಡಿದ ಕೂಡಲೇ ಅವರಿಗೆ ತಮ್ಮ ತಂದೆಯ ನೆನಪಾಗಿದೆ. ಅದನ್ನು ಅವರು ಟ್ವಿಟರ್​ ಮೂಲಕ ಅಭಿಮಾನಿಗಳಿಗೂ ತಿಳಿಸಿದ್ದಾರೆ. ಅಂದಹಾಗೆ, ಅವರು ಬರೆದುಕೊಂಡಿರುವುದು ‘ಆಸ್ಟಿನ್ ಆಫ್​ ಇಂಗ್ಲೆಂಡ್​’ ಕಾರಿನ ಕುರಿತು.

ಹಳೇ ಕಾಲದ ಕಾರುಗಳನ್ನು ನೋಡುವುದೇ ಚಂದ. ಅವುಗಳ ವಿನ್ಯಾಸವಂತೂ ಎಲ್ಲರ ಗಮನ ಸೆಳೆಯುತ್ತವೆ. ರೆಟ್ರೋ ಕಾಲದ ಕಾರುಗಳು ನೋಡಲು ಸಿಗುವುದು ಕೂಡ ಅಪರೂಪ. ಪಿತೃಪಕ್ಷ ಪೂಜೆಗೆಂದು ಹೋಗುವಾಗ ಜಗ್ಗೇಶ್​ ಕಣ್ಣಿಗೆ ಆಸ್ಟಿನ್ ಆಫ್​ ಇಂಗ್ಲೆಂಡ್​ ಕಾರು ಕಾಣಿಸಿದೆ. ಅದಕ್ಕೆ ಅವರು ಸಖತ್ ಖುಷಿ ಪಟ್ಟಿದ್ದಾರೆ.

‘1930 ಆಸ್ಟಿನ್​ ಇಂಗ್ಲೆಂಡ್​ ಕಾರು. ಇದು ಅಪ್ಪ ಹುಟ್ಟಿದ ವರ್ಷದ ಕಾರು. ಇಂದು ನಮ್ಮ ಅಪ್ಪನಿಗೆ ಪಿತೃಪಕ್ಷ ಪೂಜೆ ಮಾಡಲು ಮಾಯಸಂದ್ರಕ್ಕೆ ತೆರಳುವಾಗ ಸಿಕ್ಕಿತು. ಅಪ್ಪನ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೇ ಸಂತೋಷವಾಯಿತು.. ಲವ್​ ಯೂ ಅಪ್ಪ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ. ಅವರ ಅಭಿಮಾನಿಗಳು ಅದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ವಾರ ಜಗ್ಗೇಶ್​ ಪುತ್ರ ಗುರುರಾಜ್ ನಟಿಸಿರುವ ‘ಕಾಗೆ ಮೊಟ್ಟೆ’ ಸಿನಿಮಾ ಬಿಡುಗಡೆ ಆಗಿದೆ. ಅ.1ರಂದು ತೆರೆಕಂಡಿರುವ ಈ ಚಿತ್ರಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿಗೆ ಜಗ್ಗೇಶ್​ ಧನ್ಯವಾದ ಅರ್ಪಿಸುತ್ತಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್​ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಮಗನ ಸಿನಿಮಾಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿರುವುದು ಕಂಡ ಜಗ್ಗೇಶ್​ ಫುಲ್​ ಖುಷ್​ ಆಗಿದ್ದಾರೆ.

‘ಚಪ್ಪಾಳೆಯ ಹರ್ಷೋದ್ಗಾರ. ನನ್ನ ಕುಟುಂಬದ ಮೇಲೆ ಕನ್ನಡಿಗರ ಪ್ರೀತಿ ನೋಡಿ ಗುರುರಾಜನ ಅಪ್ಪನಾಗಿ ಕಣ್ಣು ಒದ್ದೆಯಾಯಿತು. ‘ಭಂಡ ನನ್ನ ಗಂಡ’ ದಿನಗಳಲ್ಲಿ ಕಂಡ ಆನಂದ ನೆನಪಾಯಿತು. ಕೋಟಿ ವಂದನೆಗಳು ಆತ್ಮೀಯ ಹೃದಯಗಳಿಗೆ. ಕೊರೊನಾ ಸಂಕಷ್ಟದಿಂದ ಸಿನಿಮಾರಂಗ ಹೊರಬಂದು ಮತ್ತೆ ಎದ್ದುನಿಲ್ಲಲಿ’ ಎಂದು ಟ್ವೀಟ್​ ಮಾಡಿರುವ ಜಗ್ಗೇಶ್​ ಅವರು, ‘ಕೋಟಿಗೊಬ್ಬ 3’, ‘ಸಲಗ’ ಹಾಗೂ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಚಿತ್ರಗಳಿಗೂ ಶುಭ ಕೋರಿದ್ದಾರೆ.

ಇದನ್ನೂ ಓದಿ:

Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’​ಗೆ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?

ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ನೀಡಿದ ಜಗ್ಗೇಶ್​

Read Full Article

Click on your DTH Provider to Add TV9 Kannada