AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ನಾಟಕ ಬಿಟ್ಟು ಹೋಗುತ್ತೇನೆ, ಯಾರ ಕಣ್ಣಿಗೂ ಕಾಣಿಸಲ್ಲ’; ನಟಿ ವಿಜಯಲಕ್ಷ್ಮೀ ಬಹಿರಂಗ ಹೇಳಿಕೆ

‘ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಈ ವಿಡಿಯೋ ಮೂಲಕ ನಾನು ಆಣೆ ಮಾಡಿ ಹೇಳುತ್ತೇನೆ. ಯೋಗೇಶ್​ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

‘ಕರ್ನಾಟಕ ಬಿಟ್ಟು ಹೋಗುತ್ತೇನೆ, ಯಾರ ಕಣ್ಣಿಗೂ ಕಾಣಿಸಲ್ಲ’; ನಟಿ ವಿಜಯಲಕ್ಷ್ಮೀ ಬಹಿರಂಗ ಹೇಳಿಕೆ
ವಿಜಯಲಕ್ಷ್ಮೀ
TV9 Web
| Edited By: |

Updated on: Oct 03, 2021 | 1:24 PM

Share

ನಟಿ ವಿಜಯಲಕ್ಷ್ಮೀ ಹೊಸ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶ ರವಾನಿಸಿದ್ದಾರೆ. ಕೆಲವೇ ದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಅವರು ಈಗ ಕರ್ನಾಟಕ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಇನ್ಮುಂದೆ ಯಾರ ಕಣ್ಣಿಗೂ ಕಾಣಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ‘ನನಗಾಗಿ ಯೋಗೇಶ್​ ಎಂಬುವವರ ಖಾತೆಗೆ ಜನರು ಹಾಕಿರುವ 3 ಲಕ್ಷ ರೂ. ಹಣ ನನಗೆ ಬೇಡ. ಅಕ್ಕನನ್ನು ಕರೆದುಕೊಂದು ದೂರ ಹೋಗುತ್ತೇನೆ’ ಎಂದು ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ.

‘ಜನರ ಎದುರಿನಲ್ಲಿ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ಮೊನ್ನೆ ವಾಣಿಜ್ಯ ಮಂಡಳಿಗೆ ನನ್ನನ್ನು ಕರೆದಿದ್ದು. ಯೋಗೇಶ್​ ಅಕೌಂಟ್​ನಲ್ಲಿ ಇರುವ ಹಣವನ್ನು ಕೊಡುತ್ತೇವೆ ಅಂತ ಹೇಳಿದ್ದರು. ಇವತ್ತಿನವರೆಗೂ ನನಗೆ ಆ ಹಣ ಸಿಕ್ಕಿಲ್ಲ. ನಿನ್ನೆ ಯಾರೋ ಲಯನ್​ ಜಯರಾಜ್​ ಎಂಬುವವರು ವಿಡಿಯೋದಲ್ಲಿ ನನಗೆ ಬೈಯ್ಯುತ್ತಿದ್ದರು. ಇನ್ನೊಂದು ವಿಡಿಯೋದಲ್ಲಿ ಯಾರೋ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದರು’ ಎಂದು ವಿಜಯಲಕ್ಷ್ಮೀ ಬೇಸರ ತೋಡಿಕೊಂಡಿದ್ದಾರೆ.

‘ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಈ ವಿಡಿಯೋ ಮೂಲಕ ನಾನು ಆಣೆ ಮಾಡಿ ಹೇಳುತ್ತೇನೆ. ಯೋಗೇಶ್​ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ. ಅದನ್ನು ನಾನು ತೆಗೆದುಕೊಳ್ಳುವುದೂ ಇಲ್ಲ. ದುಡ್ಡಿಗಾಗಿಯೇ ಯೋಗೇಶ್​ ನನಗೆ ಕಿರುಕುಳು ನೀಡುತ್ತಿದ್ದಾನೆ ಎಂಬುದು ನಿಮಗೆ ಗೊತ್ತಾಗುತ್ತಿದೆ ಅಲ್ಲವೇ? ನನ್ನ ಹೆಸರು ಹೇಳಿಕೊಂಡು ಜನರಿಂದ ಅವರು ಸಂಗ್ರಹಿಸಿದ ಹಣ ನನಗೆ ಬೇಕಿಲ್ಲ. ನನ್ನ ಖಾತೆಗೆ ಎಷ್ಟೋ ದುಡ್ಡು ಬಂದಿದೆ. ಅದು ಸಾಕು. ನನಗೆ ನೆಮ್ಮದಿ ಬೇಕು. ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

‘ಏಪ್ರಿಲ್​ನಿಂದ ಇಲ್ಲಿಯವರೆಗೆ ಕಷ್ಟಪಡುತ್ತಿದ್ದೇನೆ. ನನಗೆ ಬಹಳ ನೋವಾಗಿದೆ. ಕರ್ನಾಟಕ ಬಿಟ್ಟು ಹೋಗುತ್ತೇನೆ. ಯಾರ ಕಣ್ಣಿಗೂ ಸಿಗುವುದಿಲ್ಲ. ಯೋಗೇಶ್​ ಎಂಬುವವರು ಯಾರು ಅಂತಲೇ ಗೊತ್ತಿಲ್ಲ. ವಾಣಿಜ್ಯ ಮಂಡಳಿ ಕಡೆಯಿಂದ ಆತನ ವಿಷಯ ಬಂದಿದ್ದು. ಶುಕ್ರವಾರ (ಸೆ.1) ನಾನು ವಾಣಿಜ್ಯ ಮಂಡಳಿಗೆ ಹೋಗಿದ್ದೆ. ದುಡ್ಡು ಕೊಡುವುದಾದರೆ ಅಂದೇ ಕೊಡಬಹುದಿತ್ತು. ಯಾಕೆ ಇನ್ನೂ ಕೊಟ್ಟಿಲ್ಲ? ಚೆನ್ನಾಗಿ ತಿಳಿದುಕೊಳ್ಳಿ. ಆ ದುಡ್ಡಿಗೋಸ್ಕರವೇ ನನಗೆ ಟಾರ್ಚರ್​ ಮಾಡುತ್ತಿದ್ದಾರೆ. ನನಗೆ ಏನೂ ಬೇಕಾಗಿಲ್ಲ. ಜನರಿಗೆ ನಾನು ನಿಯತ್ತಾಗಿರುತ್ತೇನೆ’ ಎಂದು ಹೇಳಿರುವ ವಿಡಿಯೋವನ್ನು ವಿಜಯಲಕ್ಷ್ಮೀ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಕರ್ನಾಟಕದಲ್ಲಿ ನಾನು ಭಿಕ್ಷುಕಿ, ನಿತ್ಯ ಎಲ್ಲದಕ್ಕೂ ಭಿಕ್ಷೆ ಎತ್ತುತ್ತಲೇ ಇರಬೇಕು; ನಟಿ ವಿಜಯಲಕ್ಷ್ಮಿ

‘ನೀವು ಇಲ್ಲದೆ ಇದ್ದರೆ ನಾನು ಅನಾಥೆ’; ಜನರಿಗೆ, ವಿನೋದ್​ ರಾಜ್​ಗೆ ಧನ್ಯವಾದ ಹೇಳಿದ ನಟಿ ವಿಜಯಲಕ್ಷ್ಮೀ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು