ಪೊಲೀಸ್ ಗೆಟಪ್ನಲ್ಲಿ ಬ್ಯಾಡ್ ಮ್ಯಾನರ್ಸ್ ತೋರಿಸಲು ಬಂದ ಅಭಿಷೇಕ್ ಅಂಬರೀಷ್; ಇಲ್ಲಿದೆ ಸ್ಯಾಂಪಲ್
‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ರಫ್ ಆ್ಯಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಅಭಿಷೇಕ್ ಅಂಬರೀಷ್ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಸಿನಿಮಾ ‘ಅಮರ್’ನಲ್ಲಿ ಲವರ್ಬಾಯ್ ಆಗಿದ್ದ ಅವರು ಈಗ ಖಾಕಿ ಧರಿಸಿದ್ದಾರೆ.
‘ರೆಬೆಲ್ ಸ್ಟಾರ್’ ಅಂಬರೀಷ್ ನಟಿಸುತ್ತಿರುವ ಎರಡನೇ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಬಗ್ಗೆ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ದುನಿಯಾ ಸೂರಿ ನಿರ್ದೇಶಿಸುತ್ತಿರುವ ಚಿತ್ರವಾದ್ದರಿಂದ ಕಾತರ ಮೂಡಿಸಿದೆ. ಇಂದು (ಅ.3) ಅಭಿಷೇಕ್ ಅಂಬರೀಷ್ ಜನ್ಮದಿನ. ಆ ಪ್ರಯುಕ್ತ ‘ಬ್ಯಾಡ್ ಮ್ಯಾನರ್ಸ್’ ತಂಡದಿಂದ ಒಂದು ಸ್ನೀಕ್ ಪೀಕ್ ವಿಡಿಯೋ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದರ ಝಲಕ್ ಅನ್ನು ಇದರಲ್ಲಿ ತೋರಿಸಲಾಗಿದೆ. ಆ ಮೂಲಕ ಅವರ ಅಭಿಮಾನಿಗಳಿಗೆ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡ ಉಡುಗೊರೆ ನೀಡಿದೆ.
ಈ ಮೊದಲು ಬಿಡುಗಡೆಯಾದ ಪೋಸ್ಟರ್ಗಳಲ್ಲಿ ಅಭಿಷೇಕ್ ರಗಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಟೀಸರ್ ಹೊರಬಂದಿದ್ದು, ಈ ಸಿನಿಮಾದಲ್ಲಿ ಅವರಿಗೆ ಪೊಲೀಸ್ ಗೆಟಪ್ ಇರುವುದು ಗೊತ್ತಾಗಿದೆ. ರಫ್ ಆ್ಯಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಮೊದಲ ಸಿನಿಮಾ ‘ಅಮರ್’ನಲ್ಲಿ ಲವರ್ಬಾಯ್ ಆಗಿದ್ದ ಅಭಿಷೇಕ್, ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಖಾಕಿ ಧರಿಸಿದ್ದಾರೆ.
ಪೊಲೀಸ್ ಕಥೆಗಳನ್ನು ಹೇಳುವಲ್ಲಿ ಸೂರಿ ಸಿದ್ಧಹಸ್ತರು. ಈ ಹಿಂದೆ ‘ಕೆಂಡಸಂಪಿಗೆ’ ಚಿತ್ರದಲ್ಲಿ ಅವರು ಮೋಡಿ ಮಾಡಿದ್ದರು. ಈಗ ‘ಬ್ಯಾಡ್ ಮ್ಯಾನರ್ಸ್’ ಮೂಲಕ ಮತ್ತೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಥೆಯನ್ನು ಅವರು ತೆರೆ ಮೇಲೆ ತರುತ್ತಿದ್ದಾರೆ. ಸೂರಿ ಮತ್ತು ಅಭಿಷೇಕ್ ಕಾಂಬಿನೇಷನ್ಗೆ ಒಳ್ಳೆಯ ತಾಂತ್ರಿಕವರ್ಗ ಸಾಥ್ ನೀಡಿದೆ. ‘ಟಗರು’ ಚಿತ್ರದಲ್ಲಿ ಸೂರಿ ಜೊತೆ ಭರ್ಜರಿಯಾಗಿ ಸೌಂಡು ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ ಅವರೇ ಈಗ ‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಟೀಸರ್ನಲ್ಲಿ ಹಿನ್ನೆಲೆ ಸಂಗೀತ ಕೇಳಿದ ಬಳಿಕ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.
(ಬ್ಯಾಡ್ ಮ್ಯಾನರ್ಸ್ ಚಿತ್ರದ ಸ್ನೀಕ್ ಪೀಕ್ ವಿಡಿಯೋ ಟೀಸರ್)
ಅಭಿಷೇಕ್ ಹುಟ್ಟುಹಬ್ಬದ ಪ್ರಯುಕ್ತ ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಡಿಪಿಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಅಭಿಷೇಕ್ಗೆ ಶುಭಾಶಯ ಕೋರುತ್ತಿದ್ದಾರೆ.
ಇದನ್ನೂ ಓದಿ:
ಮೊದಲ ಅವಾರ್ಡ್ ತಂದು ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್; ಸುಮಲತಾ ಮೊಗದಲ್ಲಿ ಸಂಭ್ರಮ
ಅಭಿಷೇಕ್ ಅಂಬರೀಷ್ ಮತ್ತು ರಚಿತಾ ರಾಮ್ ಜನ್ಮದಿನ; ಕಾಮನ್ ಡಿಪಿ ರಿಲೀಸ್ ಮಾಡಿದ ಸುಮಲತಾ