AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್​ ಅಂಬರೀಷ್​​ ಮತ್ತು ರಚಿತಾ ರಾಮ್ ಜನ್ಮದಿನ; ಕಾಮನ್​ ಡಿಪಿ ರಿಲೀಸ್​ ಮಾಡಿದ ಸುಮಲತಾ

ಕೊವಿಡ್​ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಆದಾಗ್ಯೂ ಅಭಿಷೇಕ್​ ದೊಡ್ಡ ಮಟ್ಟದಲ್ಲಿ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಅವರು ಅಭಿಮಾನಿಗಳನ್ನು ಇಂದು ಭೇಟಿ ಮಾಡುವ ಸಾಧ್ಯತೆ ಇದೆ.

ಅಭಿಷೇಕ್​ ಅಂಬರೀಷ್​​ ಮತ್ತು ರಚಿತಾ ರಾಮ್ ಜನ್ಮದಿನ; ಕಾಮನ್​ ಡಿಪಿ ರಿಲೀಸ್​ ಮಾಡಿದ ಸುಮಲತಾ
ಅಭಿಷೇಕ್​ ಅಂಬರೀಶ್​-ರಚಿತಾ ರಾಮ್​
TV9 Web
| Edited By: |

Updated on: Oct 03, 2021 | 7:27 AM

Share

ರೆಬೆಲ್​ ಸ್ಟಾರ್​ ಅಂಬರೀಷ್​ ಪುತ್ರ ಅಭಿಷೇಕ್​ ಅಂಬರೀಷ್​ ಹಾಗೂ ನಟಿ ರಚಿತಾ ರಾಮ್​ಗೆ ಇಂದು (ಅಕ್ಟೋಬರ್​ 3) ಜನ್ಮದಿನದ ಸಂಭ್ರಮ. ಈ ವಿಶೇಷ ದಿನದ ಪ್ರಯುಕ್ತ ಇವರ ನಟನೆಯ ಸಿನಿಮಾ ತಂಡಗಳಿಂದ ಪೋಸ್ಟರ್​ ಹಾಗೂ ಟೀಸರ್​ಗಳು ಗಿಫ್ಟ್​ ಆಗಿ ಸಿಗುತ್ತಿವೆ.

ಅಭಿಷೇಕ್​ ಅಂಬರೀಷ್​ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಇದಕ್ಕೆ ಕಾರಣ ರೆಬೆಲ್​ ಸ್ಟಾರ್​ ಕುಟುಂಬ. ಅಂಬರೀಷ್​ ಹಾಗೂ ಸುಮಲತಾ ಪುತ್ರ ಎನ್ನುವುದು ಒಂದು ಕಾರಣವಾದರೆ,  ಅಭಿಷೇಕ್​ ತಮ್ಮ ನಟನೆ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಕಾಮನ್​ ಡಿಪಿ ಅನಾವರಣ ಮಾಡಲಾಗಿದೆ. ನಟಿ, ಸಂಸದೆ ಸುಮಲತಾ ಅಂಬರೀಷ್​ ಕಾಮನ್​ ಡಿಪಿ ಅನಾವರಣ ಮಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಡಿಪಿಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಅಭಿಷೇಕ್​ಗೆ ಶುಭಾಶಯ ಕೋರುತ್ತಿದ್ದಾರೆ.

ಅಭಿಷೇಕ್​ ‘ಬ್ಯಾಡ್​ ಮ್ಯಾನರ್ಸ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಸಣ್ಣ ವಿಡಿಯೋ ತುಣುಕು ಇಂದು ರಿಲೀಸ್​ ಆಗಲಿದೆ. ದುನಿಯಾ ಸೂರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರಚಿತಾ ರಾಮ್​ ನಾಯಕಿ. ಈ ವಿಶೇಷ ವಿಡಿಯೋದಲ್ಲಿ ರಚಿತಾ ರಾಮ್​ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೊವಿಡ್​ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಆದಾಗ್ಯೂ ಅಭಿಷೇಕ್​ ದೊಡ್ಡ ಮಟ್ಟದಲ್ಲಿ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಅವರು ಅಭಿಮಾನಿಗಳನ್ನು ಇಂದು ಭೇಟಿ ಮಾಡುವ ಸಾಧ್ಯತೆ ಇದೆ.

ರಚಿತಾ ರಾಮ್​ ಜನ್ಮದಿನಕ್ಕೂ ಎಲ್ಲ ಕಡೆಗಳಿಂದ ಶುಭಾಶಯ ಹರಿದು ಬರುತ್ತಿದೆ. ರಚಿತಾ ರಾಮ್​ ಡಿಂಪಲ್​ ಕ್ವೀನ್​ ಎಂದೇ ಖ್ಯಾತಿ ಪಡೆದವರು. ಅವರ ಜನ್ಮದಿನಕ್ಕೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ರಚಿತಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಪೋಸ್ಟರ್​ ಅಥವಾ ಟೀಸರ್​ಗಳು ಇಂದು ರಿಲೀಸ್ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸುಮಲತಾ ಅಂಬರೀಶ್​ ಮನೆಯಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ; ಸಾತ್​ ನೀಡಿದ ಅಭಿಷೇಕ್​

ಮೊದಲ ಅವಾರ್ಡ್​​ ತಂದು ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್​ ಅಂಬರೀಷ್​; ಸುಮಲತಾ ಮೊಗದಲ್ಲಿ ಸಂಭ್ರಮ

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ