AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವವರ ಮೇಲೆ ದಯೆ ತೋರಬೇಡಿ’; ನಾಗ ಚೈತನ್ಯಗೆ ಕಂಗನಾ ಟಾಂಟ್​

ಇನ್​ಸ್ಟಾಗ್ರಾಮ್​ನಲ್ಲಿ ಎರಡು ಸ್ಟೋರಿಗಳನ್ನು ಕಂಗನಾ ಪೋಸ್ಟ್​ ಮಾಡಿದ್ದಾರೆ. ಒಂದು ಸ್ಟೋರಿಯಲ್ಲಿ ಪುರುಷರನ್ನು ಅವರು ದೂರಿದ್ದಾರೆ. ಮತ್ತೊಂದು ಪೋಸ್ಟ್​ನಲ್ಲಿ ನಾಗ ಚೈತನ್ಯ-ಸಮಂತಾ ದಂಪತಿ ಬೇರೆ ಆಗಲು ಆಮಿರ್​ ಖಾನ್​ ಕಾರಣ ಎಂದಿದ್ದಾರೆ.  

‘ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವವರ ಮೇಲೆ ದಯೆ ತೋರಬೇಡಿ’; ನಾಗ ಚೈತನ್ಯಗೆ ಕಂಗನಾ ಟಾಂಟ್​
ಕಂಗನಾ ಮತ್ತು ನಾಗ ಚೈತನ್ಯ-ಸಮಂತಾ
TV9 Web
| Edited By: |

Updated on:Oct 03, 2021 | 1:44 PM

Share

ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ  ಪಡೆದುಕೊಂಡ ಬೆನ್ನಲ್ಲೇ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಬ್ಬರಲ್ಲಿ ತಪ್ಪು ಯಾರದ್ದು? ವಿಚ್ಛೇದನ ಪಡೆದಿರುವುದು ಏಕೆ? ಎಂಬಿತ್ಯಾದಿ ವಿಚಾರ ಚರ್ಚೆ ಆಗುತ್ತಿದೆ. ಕೆಲವರು ಸಮಂತಾ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಈಗ ಈ ವಿಚಾರದಲ್ಲಿ ಕಂಗನಾ ಮಾತನಾಡಿದ್ದಾರೆ. ಪರೋಕ್ಷವಾಗಿ ನಾಗ ಚೈತನ್ಯ ಅವರ ವಿರುದ್ಧ ಕಿಡಿಕಾರಿದ್ದು ಕಂಡು ಬಂದಿದೆ.  

ಇನ್​ಸ್ಟಾಗ್ರಾಮ್​ನಲ್ಲಿ ಎರಡು ಸ್ಟೋರಿಗಳನ್ನು ಕಂಗನಾ ಪೋಸ್ಟ್​ ಮಾಡಿದ್ದಾರೆ. ಒಂದು ಸ್ಟೋರಿಯಲ್ಲಿ ಪುರುಷರನ್ನು ಅವರು ದೂರಿದ್ದಾರೆ. ಮತ್ತೊಂದು ಪೋಸ್ಟ್​ನಲ್ಲಿ ನಾಗ ಚೈತನ್ಯ-ಸಮಂತಾ ದಂಪತಿ ಬೇರೆ ಆಗಲು ಆಮಿರ್​ ಖಾನ್​ ಕಾರಣ ಎಂದಿದ್ದಾರೆ.

‘ವಿಚ್ಛೇದನದಲ್ಲಿ ತಪ್ಪು ಯಾವಾಗಲೂ ಪುರುಷನದ್ದೇ ಆಗಿರುತ್ತದೆ. ಇದು ವಿಚಿತ್ರ ಎನಿಸಬಹುದು. ಆದರೆ, ಇದು ದೇವರು ಪುರುಷ ಮತ್ತು ಮಹಿಳೆಯರನ್ನು ಸೃಷ್ಟಿಸಿದ ರೀತಿ. ಪುರುಷ ಬೇಟೆಗಾರ ಮತ್ತು ಅವಳು ಪೋಷಕಿ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವ ವ್ಯಕ್ತಿ ಮೇಲೆ ದಯೆ ತೋರಿಸುವುದನ್ನು ನಿಲ್ಲಿಸಿ. ನೂರರಲ್ಲಿ ಒಂದು ಮಹಿಳೆ ತಪ್ಪು ಮಾಡಬಹುದು ಅಷ್ಟೇ. ಮಾಧ್ಯಮಗಳು ಮತ್ತು ಅಭಿಮಾನಿಗಳಿಂದ ಪ್ರೋತ್ಸಾಹ ಪಡೆಯುವ ಇವರಿಗೆಲ್ಲ ನಾಚಿಕೆ ಆಗಬೇಕು’ ಎಂದಿದ್ದಾರೆ ಕಂಗನಾ. ಈ ಮೂಲಕ ನಾಗ ಚೈತನ್ಯ ಹಾಗೂ ಆಮಿರ್ ಖಾನ್​ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

‘ದಕ್ಷಿಣ ಭಾರತದ ಈ ನಟ ಪತ್ನಿಗೆ ಏಕಾಏಕಿ ವಿಚ್ಛೇದನ ನೀಡಿದ್ದಾರೆ. 10 ವರ್ಷ ಒಟ್ಟಿಗೆ ಇದ್ದ ಇವರು ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದರು. ಈ ನಟ ಇತ್ತೀಚೆಗೆ ಡಿವೋರ್ಸ್​ ಎಕ್ಸ್​ಪರ್ಟ್​, ಬಾಲಿವುಡ್​ ಸೂಪರ್​​ಸ್ಟಾರ್​ (ಆಮಿರ್​ ಖಾನ್​) ಭೇಟಿಯಾಗಿದ್ದರು. ಎಲ್ಲವೂ ಸರಿಯಾಗೇ ನಡೆಯುತ್ತಿತ್ತು. ಆದರೆ, ನಂತರ ಬದಲಾಯಿತು. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆ ಗೊತ್ತಾಗಿರುತ್ತದೆ’ ಎಂದಿದ್ದಾರೆ ಅವರು.

ಸಮಂತಾ ಮತ್ತು ನಾಗ ಚೈತನ್ಯ ಅಕ್ಟೋಬರ್​ 2ರಂದು ವಿಚ್ಛೇದನ ವಿಚಾರ ಅಧಿಕೃತ ಮಾಡಿದ್ದರು. ‘ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮಗೆ ಬೇಕಾಗಿರುವ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?

‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?

Published On - 1:42 pm, Sun, 3 October 21