‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?

‘ಕಂಗನಾ ರಣಾವತ್​ ಅವರು ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ನನಗೆ ಹೇಳಿದ್ದಾರೆ. ಅವರ ಎಲ್ಲ ಎಸ್​ಎಂಎಸ್​ಗಳು ನನ್ನ ಬಳಿ ಸಾಕ್ಷಿಗೆ ಇವೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?
ಕಂಗನಾ ರಣಾವತ್​, ಕಮಾಲ್​ ಆರ್​. ಖಾನ್​, ಕರಣ್​ ಜೋಹರ್​

ನಟ/ನಿರ್ದೇಶಕ ಕಮಾಲ್​ ಆರ್​. ಖಾನ್​ ಪ್ರತಿದಿನ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಬಾಲಿವುಡ್​ನ ಅನೇಕರ ಬಗ್ಗೆ ಅವರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಕೆಲವು ದಿನಗಳಿಂದ ನಟಿ ಕಂಗನಾ ರಣಾವತ್​ ಬಗ್ಗೆ ಕಮಾಲ್​ ಆರ್​. ಖಾನ್​ ಅನೇಕ ಶಾಕಿಂಗ್​ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ಇನ್ನೊಂದು ಬಾಂಬ್​ ಹಾಕಿದ್ದಾರೆ. ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ತಮಗೆ ಕಂಗನಾ ಸೂಚನೆ ನೀಡಿದ್ದಾರೆ ಎಂದು ಕಮಾಲ್​ ಆರ್​. ಖಾನ್​ ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಕೂಡ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಕಮಾಲ್​ ಖಾನ್​ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುತ್ತಾರೆ. ಇತ್ತೀಚೆಗೆ ಟ್ವೀಟ್​ ಮಾಡಿರುವ ಅವರು ಕಂಗನಾ ಮೇಲೆ ಆರೋಪ ಹೊರಿಸಿದ್ದಾರೆ. ‘ಇಷ್ಟು ದಿನಗಳವರೆಗೆ ಚಿತ್ರರಂಗದ ಯಾರೊಬ್ಬರೂ ಕೂಡ ಇನ್ನೊಬ್ಬ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡು ಎಂದು ನನಗೆ ಹೇಳಿರಲಿಲ್ಲ. ಆದರೆ ಕಂಗನಾ ರಣಾವತ್​ ಅವರು ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ನನಗೆ ಹೇಳಿದ್ದಾರೆ. ಅವರ ಎಲ್ಲ ಎಸ್​ಎಂಎಸ್​ಗಳು ನನ್ನ ಬಳಿ ಸಾಕ್ಷಿಗೆ ಇವೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಇಷ್ಟೆಲ್ಲ ಆರೋಪ ಮಾಡಿರುವ ಕಮಾಲ್​ ಖಾನ್​ ಆ ಎಸ್​ಎಂಎಸ್​ಗಳನ್ನು ತೋರಿಸಲು ಸಿದ್ಧರಿಲ್ಲ. ‘ಕಂಗನಾ ಮಾಡಿದ ಮೆಸೇಜ್​ಗಳನ್ನು ನಾನು ಬಹಿರಂಗಪಡಿಸುವುದಿಲ್ಲ. ಈವರೆಗೆ ನಾನು ಯಾರ ಮೆಸೇಜ್​ಗಳನ್ನೂ ಬಹಿರಂಗ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ಅವರು ಟ್ವೀಟ್​ ಮಾಡಿದ್ದಾರೆ. ಹಾಗಾಗಿ ಅವರ ಮಾತು ನಿಜವೋ ಸುಳ್ಳೋ ಎಂಬ ಬಗ್ಗೆ ಅನುಮಾನ ಮೂಡಿದೆ.

ಇತ್ತೀಚೆಗೆ ಬಾಲಿವುಡ್ ನಟಿ ಮೌನಿ ರಾಯ್​ ಬಗ್ಗೆಯೂ ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದರು. ಮೌನಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನೇಕರಿಗೆ ಅನುಮಾನ ಇದೆ. ಆದರೆ ಆ ಬಗ್ಗೆ ಅವರು ಎಂದೂ ಬಾಯಿ ಬಿಟ್ಟಿಲ್ಲ. ಮೌನಿ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಅವರ ಹಲವು ಫೋಟೋಗಳನ್ನು ಕಮಾಲ್ ಖಾನ್​ ಶೇರ್​ ಮಾಡಿಕೊಂಡಿದ್ದರು. ಆ ಫೋಟೋಗಳಲ್ಲಿನ ವ್ಯತ್ಯಾಸವನ್ನು ಗಮನಿಸುವಂತೆ ನೆಟ್ಟಿಗರಿಗೆ ಅವರು ಸೂಚಿಸಿದ್ದರೆ. ‘ಹಣದಿಂದ ಸೌಂದರ್ಯವನ್ನು ಬದಲಾಯಿಸಬಹುದು. ಮೌನಿ ರಾಯ್ ಆಗಾಗ ಬದಲಾಗುತ್ತಲೇ ಇದ್ದಾರೆ’ ಎಂದು ಆ ಫೋಟೋಗೆ ಕಮಾಲ್​ ಖಾನ್​ ಕ್ಯಾಪ್ಷನ್​ ನೀಡಿದ್ದರು.

ಇದನ್ನೂ ಓದಿ:

ಮತ್ತೆ ಜಯಲಲಿತಾ ಅವತಾರದಲ್ಲಿ ಕಂಗನಾ ರಣಾವತ್​; ಹೊಸ ಸಿನಿಮಾಗಾಗಿ ನಡೆದಿದೆ ಸಿದ್ಧತೆ

ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ?

Read Full Article

Click on your DTH Provider to Add TV9 Kannada