ಆಲಿಯಾ ಭಟ್​ vs ಆಲಿಯಾ ಭಟ್: ಬಾಕ್ಸ್​ ಆಫೀಸ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಮತ್ತು ಆರ್​ಆರ್​​ಆರ್​ ಮುಖಾಮುಖಿ

TV9 Digital Desk

| Edited By: Rajesh Duggumane

Updated on: Oct 02, 2021 | 11:51 PM

ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದಲ್ಲಿ ಆಲಿಯಾ ಭಟ್​ ನಟಿಸುತ್ತಿದ್ದಾರೆ. ಇದರ ಜತೆಗೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಒಂದು ದಿನದ ಅಂತರದಲ್ಲಿ ತೆರೆಗೆ ಬರುತ್ತಿದೆ.

ಆಲಿಯಾ ಭಟ್​ vs ಆಲಿಯಾ ಭಟ್: ಬಾಕ್ಸ್​ ಆಫೀಸ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಮತ್ತು ಆರ್​ಆರ್​​ಆರ್​ ಮುಖಾಮುಖಿ
ಆಲಿಯಾ ಭಟ್

ಕೊವಿಡ್​ ಎರಡನೇ ಅಲೆ ತಣ್ಣಗಾಗುತ್ತಿದ್ದಂತೆ ಸ್ಟಾರ್​ ಸಿನಿಮಾಗಳು ರಿಲೀಸ್​ ಡೇಟ್​ ಅನೌನ್ಸ್​ ಮಾಡುತ್ತಿವೆ. ಸಾಲುಸಾಲು ಸ್ಟಾರ್​ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್​ ಆಗುತ್ತಿರುವುದರಿಂದ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡುತ್ತಿದೆ. ಅಚ್ಚರಿ ಎಂದರೆ ನಟಿ ಆಲಿಯಾ ಭಟ್ ಅವರ ಎರಡು​  ಸಿನಿಮಾ ಈಗ ಮುಖಾಮುಖಿ​ ಆಗುತ್ತಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದಲ್ಲಿ ಆಲಿಯಾ ಭಟ್​ ನಟಿಸುತ್ತಿದ್ದಾರೆ. ಇದರ ಜತೆಗೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಒಂದು ದಿನದ ಅಂತರದಲ್ಲಿ ತೆರೆಗೆ ಬರುತ್ತಿದೆ. ಹೀಗಾಗಿ, ಎರಡೂ ಸಿನಿಮಾಗಳಿಗೆ ಒಟ್ಟಿಗೆ ಪ್ರಚಾರ ಮಾಡೋದು ಆಲಿಯಾಗೆ ಅನಿವಾರ್ಯವಾಗಿದೆ.

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಜನವರಿ 6ರಂದು ತೆರೆಗೆ ಬರುತ್ತಿದೆ. ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ಕಮಾಟಿಪುರದ ಡಾನ್​ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದ ಟೀಸರ್​ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಬನ್ಸಾಲಿ ಸಿನಿಮಾ ಕೆಲಸದ ಬಗ್ಗೆ ಗೊತ್ತಿದ್ದವರು ಖಂಡಿತವಾಗಿಯೂ ಸಿನಿಮಾ ನೋಡೋಕೆ ತೆರಳುತ್ತಾರೆ.

ಇನ್ನು, ‘ಆರ್​ಆರ್​ಆರ್​’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಆರ್​ಆರ್​ಆರ್​ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಅಜಯ್​ ದೇವ್​​ಗನ್​, ಆಲಿಯಾ ಭಟ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕೊಮರಮ್​ ಭೀಮ್​ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್​ ಚರಣ್​ ಬಣ್ಣ ಹಚ್ಚಿದ್ದಾರೆ. ಆಲಿಯಾ ಭಟ್​ಗೆ ಸೀತಾ ಹೆಸರಿನ ಪಾತ್ರ ನೀಡಲಾಗಿದೆ. ‘ಬಾಹುಬಲಿ 2’ ನಂತರ ತೆರೆಗೆ ಬರುತ್ತಿರುವ ರಾಜಮೌಳಿ ನಿರ್ದೇಶನದ ಸಿನಿಮಾ ಇದಾಗಿದೆ. ಈ ಕಾರಣಕ್ಕೆ ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಚಿತ್ರ ಆಗಿದ್ದು, ಹಿಂದಿಯಲ್ಲೂ ರಿಲೀಸ್​ ಆಗುತ್ತಿದೆ. ರಾಜಮೌಳಿ ಈಗಾಗಲೇ ‘ಬಾಹುಬಲಿ’ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ಆರ್​ಆರ್​ಆರ್​ ಸಿನಿಮಾಗೆ ಬಾಲಿವುಡ್​​ನಲ್ಲಿ ಬೇಡಿಕೆ ಇದೆ.

ಇದನ್ನೂ ಓದಿ: ಬಿಡುವಿಲ್ಲದೆ ದುಡಿಯುವ ಬಾಲಿವುಡ್ ತಾರೆಯರು ಸೆಟ್​ಗಳಲ್ಲಿ ಮೂರ್ಛೆ ಹೋದ ಪ್ರಸಂಗಳು ಒಂದೆರಡಲ್ಲ!

ಟಾಲಿವುಡ್​ಗೆ ನಡುಕ ಹುಟ್ಟಿಸಿದ ರಾಜಮೌಳಿ; ಬಿಗ್​ ಬಜೆಟ್​ ಚಿತ್ರಗಳ ಗತಿಯೇನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada