ಟಾಲಿವುಡ್​ಗೆ ನಡುಕ ಹುಟ್ಟಿಸಿದ ರಾಜಮೌಳಿ; ಬಿಗ್​ ಬಜೆಟ್​ ಚಿತ್ರಗಳ ಗತಿಯೇನು?

ಈ ಮೂರು ಸಿನಿಮಾಗಳು ಬಿಗ್​ ಬಜೆಟ್​ ಚಿತ್ರಗಳು. ಈ ಮೂರು ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಚಿತ್ರಮಂದಿರಗಳ ಸಮಸ್ಯೆ ಎದುರಾಗುವ ಸಾದ್ಯತೆ ದಟ್ಟವಾಗಿದೆ. ಹೀಗಿರುವಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ‘ಆರ್​ಆರ್​ಆರ್​’ ರಿಲೀಸ್​ ಡೇಟ್​ ಘೋಷಣೆ ಮಾಡಿದೆ.

ಟಾಲಿವುಡ್​ಗೆ ನಡುಕ ಹುಟ್ಟಿಸಿದ ರಾಜಮೌಳಿ; ಬಿಗ್​ ಬಜೆಟ್​ ಚಿತ್ರಗಳ ಗತಿಯೇನು?
ರಾಜಮೌಳಿ

ಎಸ್​.ಎಸ್​. ರಾಜಮೌಳಿ ನಿರ್ದೇಶನದ ಸಿನಿಮಾ ತೆರೆಗೆ ಬರುತ್ತದೆ ಎಂದರೆ ಅದರ ಸಮೀಪ ಯಾವುದೇ ಸಿನಿಮಾಗಳು ರಿಲೀಸ್​ ಆಗುವುದಿಲ್ಲ. ರಾಜಮೌಳಿ ಸಿನಿಮಾಗಳ ಅದ್ದೂರಿತನ, ಅವರು ಸಿನಿಮಾ ಕಟ್ಟಿಕೊಡುವ ರೀತಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ. ಹೀಗಾಗಿ ಆ ಸಂದರ್ಭದಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಕೈಸುಟ್ಟಿಕೊಳ್ಳುವುದು ಪಕ್ಕಾ ಅನ್ನೋದು ಬಹುತೇಕರಿಗೆ ಅರಿವಾಗಿದೆ. ಆದರೆ, ಈಗ ರಾಜಮೌಳಿ ಆರ್​ಆರ್​ಆರ್​ ಸಿನಿಮಾ ರಿಲೀಸ್​ ಡೇಟ್​ ಘೋಷಣೆ ಮಾಡಿ ಎಲ್ಲರಿಗೂ ಶಾಕ್​ ನೀಡಿದ್ದಾರೆ.

ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ರಿಲೀಸ್​ ಡೇಟ್​ ಈಗಾಗಲೇ ಘೋಷಣೆ ಆಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ಜನವರಿ 13ರಂದು ತೆರೆಗೆ ಬರುತ್ತಿದೆ. ಬಿಗ್​ ಬಜೆಟ್​ ಸಿನಿಮಾ ಇದಾಗಿದ್ದು, ಈ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಂದರೆ ಜನವರಿ 14ರಂದು ‘ರಾಧೆ ಶ್ಯಾಮ್​’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಪ್ರಭಾಸ್​ ನಟನೆಯ ಈ ಸಿನಿಮಾ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.  ಪವನ್​ ಕಲ್ಯಾಣ್​ ಹಾಗೂ ರಾಣಾ ದಗ್ಗುಬಾಟಿ ಅಭಿನಯದ ‘ಭೀಮ್ಲಾ ನಾಯಕ್​’ ಸಿನಿಮಾ ಜನವರಿ 12ರಂದು ರಿಲೀಸ್​ ಆಗುತ್ತಿದೆ.

ಈ ಮೂರು ಸಿನಿಮಾಗಳು ಬಿಗ್​ ಬಜೆಟ್​ ಚಿತ್ರಗಳು. ಈ ಮೂರು ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಚಿತ್ರಮಂದಿರಗಳ ಸಮಸ್ಯೆ ಎದುರಾಗುವ ಸಾದ್ಯತೆ ದಟ್ಟವಾಗಿದೆ. ಹೀಗಿರುವಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ‘ಆರ್​ಆರ್​ಆರ್​’ ರಿಲೀಸ್​ ಡೇಟ್​ ಘೋಷಣೆ ಮಾಡಿದೆ. ಆರ್​ಆರ್​ಆರ್​ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದರಿಂದ ಅತಿ ದೊಡ್ಡ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಆಗಲಿದೆ.

ಆರ್​ಆರ್​ಆರ್​ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಅಜಯ್​ ದೇವ್​​ಗನ್​, ಆಲಿಯಾ ಭಟ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕೊಮರಮ್​ ಭೀಮ್​ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್​ ಚರಣ್​ ಬಣ್ಣ ಹಚ್ಚಿದ್ದಾರೆ. ಆಲಿಯಾ ಭಟ್​ಗೆ ಸೀತಾ ಎಂಬ ಪಾತ್ರ ನೀಡಲಾಗಿದೆ. ‘ಬಾಹುಬಲಿ 2’ ನಂತರ ತೆರೆಗೆ ಬರುತ್ತಿರುವ ರಾಜಮೌಳಿ ನಿರ್ದೇಶನದ ಸಿನಿಮಾ ಇದಾಗಿದೆ.

ಇದನ್ನೂ ಓದಿ: ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮನವಿಗೂ ಬಗ್ಗದ ರಾಜಮೌಳಿ; ಬಿಗ್​ ಬಾಸ್​ ವೇದಿಕೆಯಲ್ಲಿ ಸತ್ಯ ಬಯಲು

Read Full Article

Click on your DTH Provider to Add TV9 Kannada