ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು. ಇದರ ಜತೆಗೆ ಸಮಂತಾ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?
ನಾಗ ಚೈತನ್ಯ-ಸಮಂತಾ

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ವಿಚ್ಛೇದನ ವಿಚಾರ ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ತರಿಸಿದೆ. ಇದನ್ನು ಹೇಗೆ ಸ್ವೀಕರಿಸಬೇಕು ಎಂಬುದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲ. ಅನೇಕರು ಸಮಂತಾ ಅವರದ್ದೇ ತಪ್ಪು ಎಂದು ದೂರೋಕೆ ಪ್ರಾರಂಭಿಸಿದ್ದಾರೆ. ಸಮಂತಾ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ವಿಚ್ಛೇದನ ವಿಚಾರ ಹುಟ್ಟಿಕೊಂಡಿತು ಎಂದು ದೂರುತ್ತಿದ್ದಾರೆ.

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು. ಇದರ ಜತೆಗೆ ಸಮಂತಾ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇವೆಲ್ಲದರ ಜತೆಗೆ ಸಮಂತಾ ಅವರ ಬೋಲ್ಡ್​ ದೃಶ್ಯಗಳು ಎಲ್ಲರ ಕಣ್ಣು ಕುಕ್ಕಿದ್ದವು. ಸಮಂತಾ ಈ ವೆಬ್​ ಸೀರಿಸ್​ನಲ್ಲಿ ಅನೇಕ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ದೃಶ್ಯಗಳು ಎಷ್ಟು ಮಾದಕವಾಗಿದ್ದವೆಂದರೆ ಸ್ವತಃ ನಿರ್ದೇಶಕರು ಈ ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಮದುವೆ ಆದ ನಂತರದಲ್ಲಿ ಹೀರೋಯಿನ್​ಗಳು ಬೋಲ್ಡ್​ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ, ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ  ‘ದಿ ಫ್ಯಾಮಿಲಿ ಮ್ಯಾನ್​ 2’ ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ವೆಬ್​ ಸೀರಿಸ್​ ಒಪ್ಪಿಕೊಂಡಿದ್ದರು. ಇದಕ್ಕೆ ಕುಟುಂಬದವರ ವಿರೋಧವಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್​ವರೆಗೆ ತಂದು ನಿಲ್ಲಿಸಿತು ಎನ್ನುತ್ತಿವೆ ಮೂಲಗಳು.

ನಾಗ ಚೈತನ್ಯ ಕೂಡ ಚಿತ್ರರಂಗದಲ್ಲೇ ಇರುವವರು. ನಾಗ ಚೈತನ್ಯ ಹಾಗೂ ಸಮಂತಾದು ಪ್ರೇಮ ವಿವಾಹ. ಆದರೆ, ಈ ರೀತಿಯ ಪಾತ್ರಗಳನ್ನು ಮಾಡೋಕೆ ಸಮಂತಾಗೆ ನಾಗ ಚೈತನ್ಯ ಕಡೆಯಿಂದ ಸರಿಯಾದ ಬೆಂಬಲ ಸಿಕ್ಕಿಲ್ಲ. ಈ ಕಾರಣಕ್ಕೆ ಸಮಂತಾ ವೃತ್ತಿ ಜೀವನವನ್ನು ಏಕಾಂಗಿಯಾಗಿ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ದಂಪತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ‘ನೀವು ಸಾಯಿ ಪಲ್ಲವಿಯನ್ನು ಮದುವೆಯಾಗಿ, ಅವರೇ ಸರಿಯಾದ ಜೋಡಿ’; ವಿಚ್ಛೇದನದ ದಿನವೇ ನಾಗ ಚೈತನ್ಯಗೆ ಹೊಸ ಸಲಹೆ 

Samantha Naga Chaitanya Divorce: ಸಮಂತಾ-ನಾಗ ಚೈತನ್ಯ ಡಿವೋರ್ಸ್​; ಸ್ಟಾರ್​ ಜೋಡಿಯ ದಾಂಪತ್ಯ ಅಂತ್ಯ

Read Full Article

Click on your DTH Provider to Add TV9 Kannada