ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮನವಿಗೂ ಬಗ್ಗದ ರಾಜಮೌಳಿ; ಬಿಗ್​ ಬಾಸ್​ ವೇದಿಕೆಯಲ್ಲಿ ಸತ್ಯ ಬಯಲು

‘ಆರ್​ಆರ್​ಆರ್​ ಚಿತ್ರ ಹೇಗೆ ಮೂಡಿಬರುತ್ತಿದೆ? ನೀವು ಈಗಾಗಲೇ ಸಿನಿಮಾವನ್ನು ನೋಡಿದ್ದೀರಾ’ ಎಂದು ನಾಗಾರ್ಜುನ ಪ್ರಶ್ನಿಸಿದ್ದಾರೆ. ಅದಕ್ಕೆ ರಾಮ್​ ಚರಣ್​ ಕಡೆಯಿಂದ ನಿರಾಸೆಯ ಉತ್ತರ ಬಂದಿದೆ.

ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮನವಿಗೂ ಬಗ್ಗದ ರಾಜಮೌಳಿ; ಬಿಗ್​ ಬಾಸ್​ ವೇದಿಕೆಯಲ್ಲಿ ಸತ್ಯ ಬಯಲು
ರಾಮ್​ ಚರಣ್​, ಜ್ಯೂ. ಎನ್​ಟಿಆರ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 20, 2021 | 8:50 AM

ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊರೊನಾ ವೈರಸ್​ ಕಾರಣದಿಂದಾಗಿ ಈ ಸಿನಿಮಾದ ಕೆಲಸಗಳು ತಡವಾಗಿವೆ. ಸದ್ಯ ಶೂಟಿಂಗ್​ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ನಿರ್ದೇಶಕ ರಾಜಮೌಳಿ ಅವರು ಈ ಸಿನಿಮಾದ ಬಗ್ಗೆ ಭಾರಿ ಸೀಕ್ರೆಟ್​ ಕಾಪಾಡಿಕೊಳ್ಳುತ್ತಿದ್ದಾರೆ. ಅದು ಎಷ್ಟರಮಟ್ಟಿಗೆಂದರೆ, ಈ ಚಿತ್ರದ ಹೀರೋಗಳಾದ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅವರಿಗೂ ಕೂಡ ಯಾವುದೇ ದೃಶ್ಯಗಳನ್ನು ರಾಜಮೌಳಿ ತೋರಿಸುತ್ತಿಲ್ಲ! ಹಾಗಂತ ಇದು ಗಾಸಿಪ್​ ಅಲ್ಲ, ಸ್ವತಃ ರಾಮ್​ ಚರಣ್​ ಅವರೇ ಈ ಬಗ್ಗೆ ಬಹಿರಂಗವಾಗಿ ಬಾಯಿ ಬಿಟ್ಟಿದ್ದಾರೆ.

ಇತ್ತೀಚೆಗೆ ರಾಮ್​ ಚರಣ್​ ಅವರು ‘ಬಿಗ್​ ಬಾಸ್​ ತೆಲುಗು ಸೀಸನ್​ 5’ ವೇದಿಕೆಗೆ ಆಗಮಿಸಿದ್ದರು. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಸಂಸ್ಥೆಯ ತೆಲುಗು ವಿಭಾಗಕ್ಕೆ ರಾಯಭಾರಿ ಆಗಿರುವ ಅವರು ಅದರ ಪ್ರಚಾರದ ಸಲುವಾಗಿ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ನಿರೂಪಕ ನಾಗಾರ್ಜುನ ಒಂದು ಪ್ರಶ್ನೆ ಕೇಳಿದರು. ‘ಆರ್​ಆರ್​ಆರ್​ ಚಿತ್ರ ಹೇಗೆ ಮೂಡಿಬರುತ್ತಿದೆ? ನೀವು ಈಗಾಗಲೇ ಸಿನಿಮಾವನ್ನು ನೋಡಿದ್ದೀರಾ’ ನಾಗಾರ್ಜುನ ಪ್ರಶ್ನಿಸಿದರು. ಅದಕ್ಕೆ ರಾಮ್​ ಚರಣ್​ ಕಡೆಯಿಂದ ನಿರಾಸೆಯ ಉತ್ತರ ಬಂತು.

‘ಇಲ್ಲ ಸರ್​. ಸಿನಿಮಾದ ಯಾವುದೇ ದೃಶ್ಯವನ್ನೂ ನಾನು ನೋಡಿಲ್ಲ. ಪ್ರತಿ ದಿನ ಡಬ್ಬಿಂಗ್ ಮಾಡುವಾಗ ಕೊನೇ ಪಕ್ಷ ಒಂದು ಹಾಡನ್ನಾದರೂ ತೋರಿಸಿ ಎಂದು ರಾಜಮೌಳಿ ಬಳಿ ಮನವಿ ಮಾಡಿಕೊಳ್ಳುತ್ತೇವೆ. ನಾನು ಮತ್ತು ಜ್ಯೂ. ಎನ್​ಟಿಆರ್​ ಒಂದೊಂದು ಹಾಡಿಗಾಗಿ 10-15 ದಿನ ಕೆಲಸ ಮಾಡಿದ್ದೇವೆ. ಅದು ಹೇಗೆ ಮೂಡಿಬಂದಿದೆ ನೋಡೋಣ ಎಂದರೂ ನಮಗೆ ಅವಕಾಶ ಕೊಡುತ್ತಿಲ್ಲ. ಅಷ್ಟರಮಟ್ಟಿಗೆ ರಾಜಮೌಳಿ ಗುಟ್ಟು ಮಾಡುತ್ತಿದ್ದಾರೆ’ ಎಂದು ರಾಮ್​ ಚರಣ್​ ಹೇಳಿದ್ದಾರೆ.

ರಾಮ್​ ಚರಣ್​ ಹೇಳಿದ ಈ ಮಾತು ಕೇಳಿ ಪ್ರೇಕ್ಷಕರಿಗೆ ಮಾತ್ರವಲ್ಲದೇ ನಾಗಾರ್ಜುನ ಅವರಿಗೂ ಅಚ್ಚರಿ ಆಯಿತು. ‘ರಾಜಮೌಳಿ ಅವರೇ.. ಇದು ಸರಿಯೇ? ರಾಮ್​ ಚರಣ್​ಗೆ ಅಲ್ಲದಿದ್ದರೆ, ಕೊನೆ ಪಕ್ಷ ನನಗಾದರೂ ತೋರಿಸಿ’ ಎಂದು ನಾಗಾರ್ಜುನ ತಮಾಷೆ ಮಾಡಿದರು. ರಾಜಮೌಳಿ ಸಿನಿಮಾದಲ್ಲಿ ಗ್ರಾಫಿಕ್ಸ್​ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಸಂಪೂರ್ಣವಾಗಿ ಆ ಕೆಲಸಗಳು ಮುಗಿದ ನಂತರವೇ ಅವರು ಕಲ್ಪಿಸಿಕೊಂಡ ದೃಶ್ಯಕ್ಕೆ ಅರ್ಥ ಬರುತ್ತದೆ. ಹಾಗಾಗಿ ಅರೆಬರೆ ಕೆಲಸ ಆಗಿರುವಾಗ ಆ ದೃಶ್ಯಗಳನ್ನು ತೋರಿಸುವುದು ಬೇಡ ಎಂಬುದು ಅವರ ಕಾಳಜಿ ಆಗಿರಬಹುದು.

ಆರ್​ಆರ್​ಆರ್​ ಸಿನಿಮಾದಲ್ಲಿ ಬಾಲಿವುಡ್​ ನಟಿ ಆಲಿಯಾ ಭಟ್​ ಅಭಿನಯಿಸಿದ್ದಾರೆ. ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅದೇ ರೀತಿ ಅಜಯ್​ ದೇವಗನ್​ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ:

ಮುಗಿಯಿತೇ ರಾಜಮೌಳಿಯ ಅಚ್ಛೇ ದಿನ್​? ಯಶಸ್ಸಿಗಾಗಿ ಕುಟುಂಬದವರು ಬೇರೆ ದಾರಿ ಹಿಡಿದಿರುವ ಶಂಕೆ

Junior NTR: ಅಬ್ಬಾ, RRR​ ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್