ಮುಗಿಯಿತೇ ರಾಜಮೌಳಿಯ ಅಚ್ಛೇ ದಿನ್​? ಯಶಸ್ಸಿಗಾಗಿ ಕುಟುಂಬದವರು ಬೇರೆ ದಾರಿ ಹಿಡಿದಿರುವ ಶಂಕೆ

2001ರಿಂದಲೂ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ರಾಜಮೌಳಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಆದರೆ ಅವರಿಗೆ ಇನ್ನುಂದೆ ಬ್ಯಾಡ್​ಟೈಮ್​ ಶುರುವಾಗಲಿದೆ ಎನ್ನುವ ಸೂಚನೆ ಅವರ ಕುಟುಂಬದವರಿಗೆ ಸಿಕ್ಕಿದೆ ಎನ್ನಲಾಗಿದೆ.

ಮುಗಿಯಿತೇ ರಾಜಮೌಳಿಯ ಅಚ್ಛೇ ದಿನ್​? ಯಶಸ್ಸಿಗಾಗಿ ಕುಟುಂಬದವರು ಬೇರೆ ದಾರಿ ಹಿಡಿದಿರುವ ಶಂಕೆ
ಎಸ್​ಎಸ್​ ರಾಜಮೌಳಿ

ಟಾಲಿವುಡ್​ನಲ್ಲಿ ‘ಬಾಹುಬಲಿ’ ಸರಣಿ ಸಿನಿಮಾಗಳನ್ನು ಮಾಡಿ ವಿಶ್ವಾದ್ಯಂತ ಖ್ಯಾತಿ ಪಡೆದುಕೊಂಡವರು ನಿರ್ದೇಶಕ ರಾಜಮೌಳಿ. ಅವರು ಮುಟ್ಟಿದೆಲ್ಲವೂ ಚಿನ್ನ ಆಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರು ಈ ಹಿಂದೆ ಮಾಡಿರುವ ಸಿನಿಮಾಗಳೇ ಈ ಮಾತಿಗೆ ಸಾಕ್ಷಿ. ಪ್ರಸ್ತುತ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಆರ್​ಆರ್​ಆರ್​’ ಸಿನಿಮಾದ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಅವರ ಕುಟುಂಬದವರು ಸಿಕ್ಕಾಪಟ್ಟೆ ಪೂಜೆ ಪುನಸ್ಕಾರಗಳನ್ನು ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ ಎಂಬ ಗುಸುಗುಸು ಈಗ ಕೇಳಿಬರುತ್ತಿದೆ.

2001ರಿಂದಲೂ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ರಾಜಮೌಳಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಇದೆಲ್ಲವೂ ಆಗಿದ್ದು ಅವರ ಪರಿಶ್ರಮ ಮತ್ತು ಪ್ರತಿಭೆಯ ಕಾರಣದಿಂದ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅದರ ಜೊತೆಗೆ ಅವರಿಗೆ ಅದೃಷ್ಟ ಕೂಡ ಕೈ ಹಿಡಿದಿತ್ತು ಎಂಬುದು ಅನೇಕರ ನಂಬಿಕೆ. ಮೂಲಗಳ ಪ್ರಕಾರ ಅವರ ಅದೃಷ್ಟದ ಬಲ ಈಗ ಇಳಿಮುಖ ಆಗುತ್ತಿದೆ ಎಂದು ಕುಟುಂಬದವರಿಗೆ ಅನಿಸಿದೆ. ಅವರಿಗೆ ಇನ್ನುಂದೆ ಬ್ಯಾಡ್​ಟೈಮ್​ ಶುರುವಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ ಎನ್ನಲಾಗಿದೆ.

ಈ ಎಲ್ಲ ಕಾರಣದಿಂದಾಗಿ ರಾಜಮೌಳಿ ಕುಟುಂಬದವರು ಬ್ಯಾಕ್​ ಟು ಬ್ಯಾಕ್​ ಪೂಜಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ವದಂತಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಅದಕ್ಕೆ ಸಾಕ್ಷಿ ಒದಗಿಸುವಂತಹ ಯಾವುದೇ ಫೋಟೋ ಅಥವಾ ವಿಡಿಯೋಗಳು ಇನ್ನೂ ಲಭ್ಯವಾಗಿಲ್ಲ. ಈ ವಿಚಾರಗಳ ಬಗ್ಗೆ ರಾಜಮೌಳಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಅವರ ಗಮನವೆಲ್ಲ ‘ಆರ್​ಆರ್​ಆರ್​’ ಸಿನಿಮಾದ ಕೊನೇ ಹಂತದ ಕೆಲಸಗಳ ಮೇಲಿದೆ.

ಈ ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಗಿದಿದೆ. ಕೆಲವು ಪ್ಯಾಚ್​ ವರ್ಕ್​ ದೃಶ್ಯಗಳನ್ನು ಮಾತ್ರ ಸೆರೆ ಹಿಡಿಯಲಾಗುತ್ತಿದೆ. ಅದು ಕೂಡ ಇನ್ನೆರಡು ದಿನಗಳಲ್ಲಿ ಮುಕ್ತಾಯ ಆಗಲಿದೆ. ‘ಆರ್​ಆರ್​ಆರ್​’ ಸಿನಿಮಾ ಮೂಲಕ ಬಾಲಿವುಡ್​ ನಟಿ ಆಲಿಯಾ ಭಟ್​ ಅವರು ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷ. ಬಾಲಿವುಡ್​ ನಟ ಅಜಯ್​ ದೇವಗನ್​ ಅವರಿಗೂ ಈ ಸಿನಿಮಾದಲ್ಲೊಂದು ಮುಖ್ಯಪಾತ್ರ ನೀಡಲಾಗಿದೆ. ಎಂ.ಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ದೋಸ್ತಿ’ ಹಾಡು ಅಭಿಮಾನಿಗಳಿಗೆ ಇಷ್ಟವಾಗಿದೆ.

ಇದನ್ನೂ ಓದಿ:

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?

ರಾಜಮೌಳಿ ಸಹವಾಸ ಮಾಡಿದವರಿಗೆ ಸೋಲು ಖಚಿತ; ಟಾಲಿವುಡ್​ನಲ್ಲಿದೆ ದೊಡ್ಡ ಮೂಢನಂಬಿಕೆ

Click on your DTH Provider to Add TV9 Kannada