ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ
ಅನುಪಮ್​ ಖೇರ್​​

Anupam Kher: ತಮ್ಮ ಗೌರವ ಡಾಕ್ಟರೇಟ್​ ಸ್ವೀಕಾರ ಸಮಾರಂಭದ ಕ್ಷಣವನ್ನು ಇನ್​ಸ್ಟಾದಲ್ಲಿ ಶೇರ್​ ಮಾಡಿಕೊಂಡಿರುವ ಅನುಪಮ್ ಖೇರ್, ಇದು ಜೀವನದ ಅಮೂಲ್ಯ ಸಂದರ್ಭ ಎಂದಿದ್ದಾರೆ.

TV9kannada Web Team

| Edited By: Lakshmi Hegde

Sep 20, 2021 | 10:07 AM

ಖ್ಯಾತ ನಟ ಅನುಪಮ್​ ಖೇರ್ (Anupam Kher)​ ಅವರಿಗೆ ಅಮೆರಿಕದ ಫ್ಲೋರಿಡಾದಲ್ಲಿರುವ ಹಿಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate​​) ನೀಡಲಾಗಿದೆ. ಅನುಪಮ್​ ಖೇರ್​ ಹಿಂದು ಧರ್ಮದ ಬಗ್ಗೆ ನಡೆಸಿದ ಅಧ್ಯಯನಕ್ಕೆ ಈ ಗೌರವ ಡಾಕ್ಟರೇಟ್​​ನ್ನು ನೀಡಲಾಗಿದ್ದು, ಶನಿವಾರ ನಡೆದ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನುಪಮ್​ ಖೇರ್, ನಾನು ತುಂಬ ಹೆಮ್ಮೆ ಮತ್ತು ವಿನಮ್ರವಾಗಿ ಗೌರವ ಪದವಿಯನ್ನು ಸ್ವೀಕರಿಸಿದ್ದೇನೆ. ಪ್ರಸ್ತುತ ಸಂದರ್ಭ ನನ್ನ ಜೀವನದಲ್ಲಿ ಅತ್ಯಂತ ಮುಖ್ಯ ಮತ್ತು ಗೌರವ ತಂದುಕೊಟ್ಟ ಕ್ಷಣ. ವಿಶ್ವದ ಅತ್ಯಂತ ಹಳೇ ಸಂಸ್ಕೃತಿಯಾದ ಹಿಂದೂ ಧರ್ಮದ ತತ್ವಶಾಸ್ತ್ರದ ಬಗ್ಗೆ ಮಾತನಾಡಲು ನನಗೊಂದು ವೇದಿಕೆ ಸಿಕ್ಕಂತಾಯ್ತು ಎಂದು ಹೇಳಿದ್ದಾರೆ.  

ಅನುಪಮ್​ ಖೇರ್​ (66) ಅವರಿಗೆ ಈ ಗೌರವ ನೀಡಲು ಅಮೆರಿಕದ ಹಿಂದು ವಿಶ್ವವಿದ್ಯಾಲಯ ಅವರನ್ನು ಸಂಪರ್ಕಿಸಿತ್ತು. ಕೂಡಲೇ ಅವರು ಸಂತೋಷದಿಂದ ಒಪ್ಪಿಕೊಂಡರು ಎಂದು ಹೇಳಲಾಗಿದೆ. ಹಾಗೇ, ಹಿಂದು ಧರ್ಮದಲ್ಲಿ ಬಲವಾಗಿ ನಂಬಿಕೆ ಇಟ್ಟು, ಅದರೊಂದಿಗೆ ಬೆಳೆದ ನನಗೆ ಈ ಗೌರವ ಸ್ವೀಕರಿಸಲು ತುಂಬ ಖುಷಿಯಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಇನ್ನು ತಮ್ಮ ಹೊಸ ಶೋ ಜಿಂದಗಿ ಕಾ ಸಫರ್​  ನಿಮಿತ್ತ ಯುಎಸ್​ನ ಹಲವು ನಗರಗಳಿಗೆ ಖೇರ್​ ಪ್ರಯಾಣ ಮಾಡಿದ್ದಾರೆ. ಅದರ ವೀಕ್ಷಕರೊಂದಿಗೆ ಸಂವನಹ ಕೂಡ ನಡೆಸಿದ್ದಾರೆ. ಹಾಗೇ, ತಮ್ಮ ಗೌರವ ಡಾಕ್ಟರೇಟ್​ ಸ್ವೀಕಾರ ಸಮಾರಂಭದ ಕ್ಷಣವನ್ನು ಇನ್​ಸ್ಟಾದಲ್ಲಿ ಶೇರ್​ ಮಾಡಿಕೊಂಡಿರುವ ಅನುಪಮ್ ಖೇರ್​, ಜೀವನದಲ್ಲಿ ಹಲವು ಉತ್ತಮ, ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದ್ದೇನೆ. ಆದರೆ ಇದು ತುಂಬ ವಿಶೇಷವಾದ ಸಂದರ್ಭ ಎಂದು ಹೇಳಿಕೊಂಡಿದ್ದಾರೆ.

View this post on Instagram

A post shared by Anupam Kher (@anupampkher)

ಇದನ್ನೂ ಓದಿ:  ಅನುಷ್ಕಾ ಶೆಟ್ಟಿ ಪಾಲಿಗೆ ಮತ್ತೆ ನಾಗವಲ್ಲಿ ಪಾತ್ರ? ಫ್ಯಾನ್ಸ್ ಕಿವಿ ಚುರುಕಾಗಿಸಿದೆ ಈ ಸುದ್ದಿ

‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು..’; ಸೈಮಾ ಡಬಲ್​ ಸಂಭ್ರಮದ ಬಗ್ಗೆ ರಶ್ಮಿಕಾ ಮನದ ಮಾತು​

(Anupam Kher conferred with honorary doctorate by America University)

Follow us on

Most Read Stories

Click on your DTH Provider to Add TV9 Kannada