‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು..’; ಸೈಮಾ ಡಬಲ್​ ಸಂಭ್ರಮದ ಬಗ್ಗೆ ರಶ್ಮಿಕಾ ಮನದ ಮಾತು​

ಕನ್ನಡದಲ್ಲಿ ನಟಿಸಿದ ‘ಯಜಮಾನ’ ಹಾಗೂ ತೆಲುಗಿನಲ್ಲಿ ನಟಿಸಿದ ‘ಡಿಯರ್​ ಕಾಮ್ರೇಡ್​’ ಚಿತ್ರಗಳಿಗೆ ರಶ್ಮಿಕಾ ಮಂದಣ್ಣ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಅವಾರ್ಡ್​ ಅವರಿಗೆ ಸಿಕ್ಕಿದೆ.

‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು..’; ಸೈಮಾ ಡಬಲ್​ ಸಂಭ್ರಮದ ಬಗ್ಗೆ ರಶ್ಮಿಕಾ ಮನದ ಮಾತು​
ರಶ್ಮಿಕಾ ಮಂದಣ್ಣ
TV9kannada Web Team

| Edited By: Madan Kumar

Sep 20, 2021 | 9:34 AM

ನಟಿ ರಶ್ಮಿಕಾ ಮಂದಣ್ಣ ಈಗ ಖುಷಿಯ ಕಡಲಲ್ಲಿ ತೇಲುತ್ತಿದ್ದಾರೆ. ಎಲ್ಲ ಭಾಷೆಗಳಿಂದಲೂ ಅವರಿಗೆ ಆಫರ್​ ಬರುತ್ತಿವೆ. ಅಲ್ಲದೇ, ಈಗಾಗಲೇ ನಟಿಸಿದ ಸಿನಿಮಾಗಳಿಗೆ ಪ್ರಶಸ್ತಿಗಳು ಸಿಕ್ಕಿವೆ. ಬಣ್ಣದ ಲೋಕದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಅವರು ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಿರಿಮಿರಿ ಮಿಂಚಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರಿಗೆ 2 ಪ್ರಶಸ್ತಿಗಳು ಸಿಕ್ಕಿರುವುದು ವಿಶೇಷ. ಆ ಖುಷಿಯ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. 2019ರಲ್ಲಿ ತೆರೆಕಂಡ ಸಿನಿಮಾಗಳು ಈ ಪ್ರಶಸ್ತಿ ಕಣದಲ್ಲಿ ಸ್ಪರ್ಧಿಸಿದ್ದವು.

ಕನ್ನಡದಲ್ಲಿ ನಟಿಸಿದ ‘ಯಜಮಾನ’ ಹಾಗೂ ತೆಲುಗಿನಲ್ಲಿ ನಟಿಸಿದ ‘ಡಿಯರ್​ ಕಾಮ್ರೇಡ್​’ ಚಿತ್ರಗಳಿಗೆ ರಶ್ಮಿಕಾ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಅವಾರ್ಡ್​ ಅವರಿಗೆ ಸಿಕ್ಕಿದೆ. ಇದು ಅವರ ಅಭಿಮಾನಿಗಳಿಗೂ ಹೆಮ್ಮೆ ತಂದಿದೆ. ಕೆಂಪು ಬಣ್ಣದ ಗೌನ್​ ಧರಿಸಿ, ಎರಡು ಟ್ರೋಫಿಗಳನ್ನು ಕೈಯಲ್ಲಿ ಹಿಡಿದು ರಶ್ಮಿಕಾ ಪೋಸ್​ ನೀಡಿದ್ದಾರೆ. ಈ ಫೋಟೋಗಳು ಅವರ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್​ ಆಗುತ್ತಿವೆ.

‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು. ಯಜಮಾನ ಮತ್ತು ಡಿಯರ್​ ಕಾಮ್ರೇಡ್​ ಚಿತ್ರಗಳಿಗಾಗಿ ಕನ್ನಡ ಹಾಗೂ ತೆಲುಗಿನಲ್ಲಿ ಪ್ರಶಸ್ತಿ ಪಡೆದಿದ್ದೇನೆ. ಮುಂದೊಂದು ದಿನ ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿಯೂ ಪಡೆಯುತ್ತೇನೆ. ಥ್ಯಾಂಕ್ಯೂ ಸೈಮಾ. ನನ್ನನ್ನು ನಟಿಯಾಗಿಸಿದ ಪ್ರೀತಿಪಾತ್ರರಿಗೆಲ್ಲ ಧನ್ಯವಾದಗಳು’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿಯೂ ಭವಿಷ್ಯದಲ್ಲಿ ಪ್ರಶಸ್ತಿ ಪಡೆಯುವುದಾಗಿ ಅವರು ಹೇಳಿರುವ ಆತ್ಮವಿಶ್ವಾಸದ ಮಾತಿಗೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.

ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಮಹೇಶ್​ ಬಾಬು, ರಕ್ಷಿತ್​ ಶೆಟ್ಟಿ, ನಾನಿ, ರಚಿತಾ ರಾಮ್​, ಶ್ರುತಿ ಹಾಸನ್​, ಶಾನ್ವಿ ಶ್ರೀವತ್ಸ, ಕಾರುಣ್ಯ ರಾಮ್​, ಪನ್ನಗ ಭರಣ, ಧನಂಜಯ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ರಶ್ಮಿಕಾ ಮಂದಣ್ಣ ಈಗ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ. ಬಾಲಿವುಡ್​ನಲ್ಲೂ ಅವರು ಬ್ಯುಸಿ ಆಗಿದ್ದಾರೆ. ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:

SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ

SIIMA Awards 2021 Winners list: ಸೈಮಾ ವೇದಿಕೆಯಲ್ಲಿ ಮಿಂಚಿದ ತಾರೆಯರು; ಇಲ್ಲಿದೆ ಪ್ರಶಸ್ತಿ ಪಡೆದವರ ಲಿಸ್ಟ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada