SIIMA Awards 2021 Winners list: ಸೈಮಾ ವೇದಿಕೆಯಲ್ಲಿ ಮಿಂಚಿದ ತಾರೆಯರು; ಇಲ್ಲಿದೆ ಪ್ರಶಸ್ತಿ ಪಡೆದವರ ಲಿಸ್ಟ್​

ವೈಭವದಿಂದ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದವರ ಮುಖ ಸಂತಸದಿಂದ ಅರಳಿತು. ಯಾರಿಗೆ ಯಾವ ಪ್ರಶಸ್ತಿ ಬಂದಿದೆ ಎಂಬುದರ ಪಟ್ಟಿ ಇಲ್ಲಿದೆ.

SIIMA Awards 2021 Winners list: ಸೈಮಾ ವೇದಿಕೆಯಲ್ಲಿ ಮಿಂಚಿದ ತಾರೆಯರು; ಇಲ್ಲಿದೆ ಪ್ರಶಸ್ತಿ ಪಡೆದವರ ಲಿಸ್ಟ್​
ಸೈಮಾ ವೇದಿಕೆಯಲ್ಲಿ ಮಿಂಚಿದ ತಾರೆಯರು
Follow us
TV9 Web
| Updated By: ಮದನ್​ ಕುಮಾರ್​

Updated on:Sep 19, 2021 | 10:23 AM

ಪ್ರತಿಷ್ಠಿತ ಸೈಮಾ ಅವಾರ್ಡ್ಸ್​ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆದಿದೆ. 2019ರಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ರಶ್ಮಿಕಾ ಮಂದಣ್ಣ, ಮಹೇಶ್​ ಬಾಬು, ರಕ್ಷಿತ್​ ಶೆಟ್ಟಿ, ನಾನಿ, ರಚಿತಾ ರಾಮ್​, ಶ್ರುತಿ ಹಾಸನ್​, ಶಾನ್ವಿ ಶ್ರೀವತ್ಸ ಮುಂತಾದ ತಾರೆಯರು ಭಾಗವಹಿಸಿದ್ದರು. ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸೆಲೆಬ್ರಿಟಿಗಳು ಈ ಸಮಾರಂಭಕ್ಕೆ ಹಾಜರಿ ಹಾಕಿದ್ದರು.

ಪ್ರಶಸ್ತಿ ಸಮಾರಂಭಕ್ಕೂ ಮುನ್ನ ರೆಡ್​ ಕಾರ್ಪೆಟ್​ನಲ್ಲಿ ತಾರೆಯರು ಮಿಂಚಿದರು. ನಟಿಯರು ಕಲರ್​​ಫುಲ್​ ಬಟ್ಟೆ ಧರಿಸಿ ಕ್ಯಾಮೆರಾಗಳಿಗೆ ಪೋಸ್​ ನೀಡಿದರು. ವೈಭವದಿಂದ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದವರ ಮುಖ ಸಂತಸದಿಂದ ಅರಳಿತು. ಯಾರಿಗೆ ಯಾವ ಪ್ರಶಸ್ತಿ ಬಂದಿದೆ ಎಂಬುದರ ಪಟ್ಟಿ ಇಲ್ಲಿದೆ.

ಕನ್ನಡ:

ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್​: ರಕ್ಷಿತ್​ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ನಟಿ: ರಚಿತಾ ರಾಮ್​ (ಆಯುಷ್ಮಾನ್​ ಭವ)

ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​: ರಶ್ಮಿಕಾ ಮಂದಣ್ಣ (ಯಜಮಾನ)

ಅತ್ಯುತ್ತಮ ಹೊಸ ನಟ ಅಭಿಷೇಕ್​ ಅಂಬರೀಷ್​ (ಅಮರ್​)

ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್​ (ಮನೆ ಮಾರಾಟಕ್ಕಿದೆ)

ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮಯೂರ ರಾಘವೇಂದ್ರ (ಕನ್ನಡ್​ ಗೊತ್ತಿಲ್ಲ)

ಅತ್ಯುತ್ತಮ ಹಾಸ್ಯ ಕಲಾವಿದ: ಸಾಧು ಕೋಕಿಲ (ಯಜಮಾನ)

ಅತ್ಯುತ್ತಮ ನಿರ್ದೇಶನ: ಹರಿಕೃಷ್ಣ, ಪೋನ್​ ಕುಮಾರ್​ (ಯಜಮಾನ)

ಅತ್ಯುತ್ತಮ ಖಳನಟ: ಸಾಯಿ ಕುಮಾರ್​ (ಭರಾಟೆ)

ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)

ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್​ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್​ (ಗೀತಾ- ಕೇಳದೇ ಕೇಳದೇ)

ಅತ್ಯುತ್ತಮ ಸಾಹಿತ್ಯ: ಪವನ್​ ಒಡೆಯರ್​ (ನಟಸಾರ್ವಭೌಮ)

ಅತ್ಯುತ್ತಮ ನಟ: ದರ್ಶನ್​ (ಯಜಮಾನ)

ತೆಲುಗು:

ಅತ್ಯುತ್ತಮ ನಟ: ಮಹೇಶ್​ ಬಾಬು (ಮಹರ್ಷಿ)

ಅತ್ಯುತ್ತಮ ನಿರ್ದೇಶಕ: ವಂಶಿ (ಮಹರ್ಷಿ)

ಎಂಟರ್​ಟೇನರ್​ ಆಫ್​ ದಿ ಇಯರ್​: ನಾನಿ (ಜರ್ನಿ ಮತ್ತು ಗ್ಯಾಂಗ್​ ಲೀಡರ್)

ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​: ರಶ್ಮಿಕಾ ಮಂದಣ್ಣ (ಡಿಯರ್ ಕಾಮ್ರೇಡ್​)

ಅತ್ಯುತ್ತಮ ಪೋಷಕ ನಟ: ಅಲ್ಲರಿ ನರೇಶ್​ (ಮಹರ್ಷಿ)

ಅತ್ಯುತ್ತಮ ಹಿನ್ನಲೆ ಗಾಯಕಿ: ಚಿನ್ಮಯಿ ಶ್ರೀಪಾದ್​

ಅತ್ಯುತ್ತಮ ಚೊಚ್ಚಲ ನಿರ್ದೇಶನ: ಸ್ವರೂಪ್​ ಆರ್​ಎಸ್​ಜೆ

ಅತ್ಯುತ್ತಮ ಹೊಸ ನಟ: ಶ್ರೀ ಸಿಂಹ

ಅತ್ಯುತ್ತಮ ಹೊಸ ನಟಿ: ಶಿವಾತ್ಮಿಕಾ ರಾಜಶೇಖರ್​ (ದೊರಸಾನಿ)

ಇದನ್ನೂ ಓದಿ:

SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ

ರಶ್ಮಿಕಾ ಮಂದಣ್ಣ ಹಿಂದಿಕ್ಕಿದ ಪೂಜಾ ಹೆಗ್ಡೆ; ಕೊಡಗಿನ ಬೆಡಗಿಗೆ ಕಡಿಮೆ ಆಯ್ತಾ ಬೇಡಿಕೆ?

Published On - 9:58 am, Sun, 19 September 21

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ