ಜನಪ್ರಿಯ ಒಟಿಟಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ರಾಮ್​ ಚರಣ್; ಇದಕ್ಕೆ ಅವರು ಪಡೆಯೋ ಹಣ ಇಷ್ಟೊಂದಾ?

TV9 Digital Desk

| Edited By: shivaprasad.hs

Updated on: Sep 19, 2021 | 9:49 AM

ಜನಪ್ರಿಯ ಒಟಿಟಿ ಸಂಸ್ಥೆಗಳಲ್ಲೊಂದಾದ ಡಿಸ್ನೆ+ಹಾಟ್​ಸ್ಟಾರ್​ನ ತೆಲುಗು ಬ್ರಾಂಡ್​ ಅಂಬಾಸಿಡರ್ ಆಗಿ ರಾಮ್ ಚರಣ್ ಆಯ್ಕೆಯಾಗಿದ್ದಾರೆ. ಇದಕ್ಕೆ ಅವರು ವಾರ್ಷಿಕ ಪಡೆಯುತ್ತಿರುವ ಹಣ ಎಲ್ಲರ ಹುಬ್ಬೇರಿಸಿದೆ.

ಜನಪ್ರಿಯ ಒಟಿಟಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ರಾಮ್​ ಚರಣ್; ಇದಕ್ಕೆ ಅವರು ಪಡೆಯೋ ಹಣ ಇಷ್ಟೊಂದಾ?
ನಟ ರಾಮ್ ಚರಣ್

Follow us on

ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಿನಿಮಾ ನೋಡುವ ಶೈಲಿಯೂ ಬದಲಾಗಿದೆ. ಅದಕ್ಕೆ ಪೂರಕವಾಗಿ OTT ಸೇವೆಗಳು ತುಂಬಾ ಸುಲಭವಾಗಿ ಲಭ್ಯವಿದೆ. ಪ್ರಾದೇಶಿಕ ಭಾಷೆಗಳಲ್ಲಿ ಇವುಗಳ ಜನಪ್ರಿಯತೆಯು ಹೆಚ್ಚಾಗುತ್ತಿದ್ದಂತೆ, ಎಲ್ಲಾ ಕಂಪನಿಗಳು ಆ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿವೆ. ಇದರ ಭಾಗವಾಗಿ, ಡಿಸ್ನಿ+ ಹಾಟ್​ಸ್ಟಾರ್ ಪ್ರಾದೇಶಿಕ ಭಾಷೆಗಳೆಡೆ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ ಇಟ್ಟಿರುವ ಡಿಸ್ನೆ+ ಹಾಟ್​ಸ್ಟಾರ್ ಟಾಲಿವುಡ್​ನ ಜನಪ್ರಿಯ ನಟ ರಾಮ್​ ಚರಣ್ ಅವರನ್ನು ತೆಲುಗಿಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.

ಇಂದಿನಿಂದ, ರಾಮ್ ಚರಣ್ ತೆಲುಗಿನಲ್ಲಿ ಡಿಸ್ನಿ+ ಹಾಟ್ ಸ್ಟಾರ್​ ಒಟಿಟಿಯ ಪ್ರಚಾರಕರಾಗಿದ್ದಾರೆ. ಡಿಸ್ನಿ ಹಾಟ್​ಸ್ಟಾರ್ ಬಗ್ಗೆ ಮಾತನಾಡಿರುವ ರಾಮ್ ಚರಣ್, “ಡಿಸ್ನಿ+ಹಾಟ್​ಸ್ಟಾರ್ ಭಾರತದಲ್ಲಿ ಅತ್ಯುತ್ತಮ ಜಾಗತಿಕ ಚಿತ್ರಗಳನ್ನು ಮತ್ತು ಭಾರತೀಯ ಭಾಷೆಗಳ ಚಲನಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಚಲನಚಿತ್ರಗಳಲ್ಲದೆ ವಿವಿಧ ಭಾಷೆಗಳಲ್ಲಿ ವೆಬ್ ಸರಣಿಗಳನ್ನು ಕೂಡ ತಯಾರಿಸುತ್ತಿದ್ದಾರೆ. ತೆಲುಗು ಮನರಂಜನಾ ಮಾರುಕಟ್ಟೆಗೆ ಡಿಸ್ನಿ+ಹಾಟ್​ಸ್ಟಾರ್ ಪ್ರವೇಶದೊಂದಿಗೆ, ಟಾಲಿವುಡ್‌ನಲ್ಲಿ ತಯಾರಕರು ಮತ್ತು ನಟರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಇದು ತೆಲುಗು ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲಿದೆ ಎಂದು ನಂಬುತ್ತೇನೆ’’ ಎಂದಿದ್ದಾರೆ.

ಆದರೆ ಪ್ರಸ್ತುತ ಹೆಚ್ಚು ಚರ್ಚೆಯಾಗುತ್ತಿರುವುದು ರಾಮ್​ಚರಣ್ ಡಿಸ್ನೆ+ಹಾಟ್​ಸ್ಟಾರ್​ನ ಬ್ರಾಂಡ್ ಅಂಬಾಸಿಡರ್ ಆಗಲು ಎಷ್ಟು ಹಣ ಪಡೆದಿದ್ದಾರೆ ಎಂಬುದು. ಒಂದು ಮೂಲಗಳ  ಪ್ರಕಾರ ಅವರು ಬೃಹತ್ ಸಂಭಾವನೆಯನ್ನೇ ಪಡೆದಿದ್ದಾರೆ. ಹೌದು. ಡಿಸ್ನೆ+ಹಾಟ್​​ಸ್ಟಾರ್ ಒಟಿಟಿಗೆ ಪ್ರಚಾರಕರಾಗಲು ರಾಮ್​ಚರಣ್, ಬರೋಬ್ಬರಿ ₹ 6 ಕೋಟಿ ವಾರ್ಷಿಕವಾಗಿ ಪಡೆಯಲಿದ್ದಾರಂತೆ. ಈ ಸುದ್ದಿ ಕೇಳಿದ ಸಿನಿ ಪ್ರೇಮಿಗಳಿಗೆ ಒಟಿಟಿಯು ಇಷ್ಟೊಂದು ಖರ್ಚು ಮಾಡಿ ರಾಮ್​ಚರಣ್ ಅವರನ್ನು ಪ್ರಚಾರಕ್ಕೆ ನೇಮಿಸಿರುವಾಗ, ಇನ್ನು ಮುಂದೆ ಅತ್ಯುತ್ತಮ ಸಿನಿಮಾಗಳೂ ಅಲ್ಲಿಂದ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ತೆಲುಗಿನಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಲು ಹಾಟ್​ಸ್ಟಾರ್ ವಿವಿಧ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಭಾಗವಾಗಿ, ನಿತಿನ್ ಹೀರೋ ಆಗಿ ನಟಿಸಿರುವ ‘ಮೇಸ್ಟ್ರೋ’ ಈಗಾಗಲೇ ಸದ್ದು ಮಾಡುತ್ತಿದೆ. ತಾಪ್ಸೀ, ವಿಜಯ್ ಸೇತುಪತಿ ನಟನೆಯ ಚಿತ್ರಗಳೂ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡುತ್ತಿವೆ. ಇವುಗಳಲ್ಲದೆ ವಿವೋ ಐಪಿಎಲ್ 2021, ಐಸಿಸಿ ಟಿ 20 ವಿಶ್ವಕಪ್ 2021, ಬಿಗ್ ಬಾಸ್ ರಿಯಾಲಿಟಿಗಳಿಗೂ ಹಾಟ್​ಸ್ಟಾರ್ ವೇದಿಕೆಯಾಗಲಿದೆ. ಆದ್ದರಿಂದಲೇ ರಾಮ್​ಚರಣ್ ನೇಮಕ, ಹಾಟ್​ಸ್ಟಾರ್​ನ ತೆಲುಗಿನ ಮಾರುಕಟ್ಟೆ ವಿಸ್ತರಿಸಲು ಸಹಾಯ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:

SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ

ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

(Ram Charan becomes brand ambassador for Disney+Hotstar telugu)

ತಾಜಾ ಸುದ್ದಿ

Related Stories

Click on your DTH Provider to Add TV9 Kannada