‘ಶಿಲ್ಪಾ, ಶಮಿತಾ ನಿಮ್ಮ ಸಹೋದರಿಯರೇ?’ ಎಂದು ತಾಯಿ ಸುನಂದಾ ಶೆಟ್ಟಿಯನ್ನು ಪ್ರಶ್ನಿಸಿದ ಅಭಿಮಾನಿ; ಕಾರಣವೇನು?

Shilpa Shetty and Shamitha Shetty: ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುನಂದಾ ಶೆಟ್ಟಿಯವರಿಗೆ ಶಿಲ್ಪಾ ಹಾಗೂ ಶಮಿತಾ ನಿಮ್ಮ ಸಹೋದರಿಯರೇ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಸುನಂದಾ ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ.

‘ಶಿಲ್ಪಾ, ಶಮಿತಾ ನಿಮ್ಮ ಸಹೋದರಿಯರೇ?’ ಎಂದು ತಾಯಿ ಸುನಂದಾ ಶೆಟ್ಟಿಯನ್ನು ಪ್ರಶ್ನಿಸಿದ ಅಭಿಮಾನಿ; ಕಾರಣವೇನು?
ತಮ್ಮ ಪುತ್ರಿಯರೊಂದಿಗೆ ಸುನಂದಾ ಶೆಟ್ಟಿ

ಬಾಲಿವುಡ್ ತಾರೆಯರಂತೆಯೇ ಅವರ ಪೋಷಕರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾರೆ. ಬಿಗ್​ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡಿರುವ ಶಮಿತಾ ಶೆಟ್ಟಿ ಅವರನ್ನು ಭೇಟಿಯಾಗಲು ಇತ್ತೀಚೆಗೆ ಅವರ ತಾಯಿ ಸುನಂದಾ ಶೆಟ್ಟಿ ತೆರಳಿದ್ದರು. ಈ ಸಂದರ್ಭದ ಫೋಟೋವೊಂದನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬ ‘ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಈರ್ವರೂ ನಿಮ್ಮ ಸಹೋದರಿಯರೇ?’’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸುನಂದಾ ಶೆಟ್ಟಿ ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದೆ.

ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸಿರುವ ಸುನಂದಾ ಶೆಟ್ಟಿ, ‘ಧನ್ಯವಾದಗಳು. ಅವರೀರ್ವರೂ ನನ್ನ ಮುದ್ದು ಮಕ್ಕಳು’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಉತ್ತರ ಸದ್ಯ ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಬಿಗ್​ಬಾಸ್ ಒಟಿಟಿ ಒಳಗೆ ಶಮಿತಾ ಶೆಟ್ಟಿಯವರನ್ನು ಭೇಟಿಯಾಗಲು ಸುನಂದಾ ತೆರಳಿದ್ದರು. ಆಗಿನ ಚಿತ್ರವನ್ನು ಅವರು ಹಂಚಿಕೊಂಡಾಗ ನಟಿ ಶಿಲ್ಪಾ ಶೆಟ್ಟಿ ಕಾಮೆಂಟ್ ಮಾಡಿ ತಾಯಿಯ ಸೌಂದರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇದೀಗ ಅಭಿಮಾನಿಯೊಬ್ಬ ನೀವು ಶಿಲ್ಪಾ, ಶಮಿತಾರ ಸಹೋದರಿಯರಂತೆ ಕಾಣುತ್ತೀರಿ ಎಂದು ಹೊಗಳಿ ಮೆಚ್ಚುಗೆ ಸೂಚಿಸಿದ್ದಾನೆ. ಇದನ್ನು ಸುನಂದಾ ಧನಾತ್ಮಕವಾಗಿ ಸ್ವೀಕರಿಸಿದ್ದಾರೆ.

Sunanda Shetty

ಅಭಿಮಾನಿಯೊಬ್ಬನಿಗೆ ಸುನಂದಾ ಶೆಟ್ಟಿ ಪ್ರತಿಕ್ರಿಯೆ

ಆ ಸಂದರ್ಭದಲ್ಲಿ ಶಮಿತಾ ಅಕ್ಕ ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ಅವರ ಬಗ್ಗೆ ವಿಚಾರಿಸಿದ್ದರು. ಆಗ ಸುನಂದಾ, ಹೊರಗೆಲ್ಲವೂ ಚೆನ್ನಾಗಿದೆ ಎಂದಿದ್ದರು. ಹಾಗೆಯೇ ಶಮಿತಾ ಅವರಿಗೆ ಆಪ್ತರಾಗಿರುವ ರಾಕೇಶ್ ಬಾಪಟ್ ಕುರಿತು ಸುನಂದಾ ಒಳ್ಳೆಯ ಮಾತನಾಡಿದ್ದು, ವೀಕ್ಷಕರ ಗಮನ ಸೆಳೆದಿತ್ತು. ‘ಆತ ಒಳ್ಳೆಯ ವ್ಯಕ್ತಿ’ ಎಂದು ಸುನಂದಾ ಹೊಗಳಿದ್ದರು.

 

View this post on Instagram

 

A post shared by Shetty Sunanda (@sunandashetty10)

ಆದರೆ ಬಿಗ್​ಬಾಸ್​ ಒಟಿಟಿಯಲ್ಲಿ ಶಮಿತಾ ಶೆಟ್ಟಿಗೆ ಗೆಲುವು ಲಭ್ಯವಾಗಿಲ್ಲ. ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇತ್ತ ಶಿಲ್ಪಾ ಶೆಟ್ಟಿ ಕೂಡ ಹೊಸ ಜೀವನ, ಹೊಸ ಆರಂಭ ಮೊದಲಾದ ವಿಚಾರಗಳ ಕುರಿತಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದು ಶಿಲ್ಪಾ ಮತ್ತು ರಾಜ್ ಕುಂದ್ರಾ ಸಂಬಂಧದ ಕುರಿತು ಎಂದು ಹಲವರು ಮಾತನಾಡಿಕೊಂಡಿದ್ದರು. ಈ ಎಲ್ಲವುದರ ನಡುವೆಯೂ ತಮ್ಮ ಮಕ್ಕಳನ್ನು ಸುನಂದಾ ಗಟ್ಟಿಗೊಳಿಸುತ್ತಾ, ಪೊರೆಯುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:

SIIMA Awards 2021: ಸೈಮಾ ಅವಾರ್ಡ್ಸ್​​ ವೇದಿಕೆಯ ಕಲರ್​ಫುಲ್​ ಫೋಟೋಗಳು

ವಿಷ್ಣು ಆ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಬೇಕಿತ್ತು. ಆದರೆ..; ನಾಗತಿಹಳ್ಳಿ ಹಂಚಿಕೊಂಡ್ರು ಮಾಹಿತಿ

(Sunanda Shetty replies to a fan who asks Shilpa Shetty and Shamitha Shetty are her sisters)

Read Full Article

Click on your DTH Provider to Add TV9 Kannada