ಈ ಫೋಟೋದಲ್ಲಿರುವ ಖ್ಯಾತ ನಟಿ ಯಾರು ಎಂದು ಗುರುತಿಸ್ತೀರಾ?
ಸೆಲೆಬ್ರಿಟಿಗಳು ತಮ್ಮ ದಿನಚರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಾರೆ.
ಸೆಲೆಬ್ರಿಟಿಗಳು ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ತಮ್ಮ ದಿನಚರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು ಕುಟುಂಬದ ಜತೆಗೆ ಕಳೆದ ಫೋಟೋಗಳು ಹಾಗೂ ಚೈಲ್ಡ್ವುಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ಖ್ಯಾತ ನಟಿಯೊಬ್ಬರು ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ.
ಬಹುಭಾಷಾ ನಟಿ ತಾಪ್ಸೀ ಪನ್ನು ಶಾಲಾ ದಿನಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಪರ್ಧೆಯೊಂದರಲ್ಲಿ ತಾಪ್ಸಿ ಮೊದಲ ಸ್ಥಾನ ಗಳಿಸಿದ್ದರು. ಅವರ ಕ್ಲಾಸ್ಮೇಟ್ಸ್ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ತಾಪ್ಸೀ ನೀವು ಆಗಲೂ ಕ್ಯೂಟ್ ಆಗಿದ್ದಿರಿ ಎಂದು ಹೇಳಿದ್ದಾರೆ.
View this post on Instagram
ಮದುವೆ ನಂತರದಲ್ಲಿ ಹೆಂಡತಿ ಜತೆ ಪತಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ರೇಪ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಿಲಾಸ್ಪುರ್ (ಛತ್ತೀಸ್‌ಗಡ್) ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ಬಗ್ಗೆ ಎಲ್ಲ ಕಡೆಗಳಲ್ಲೂ ಚರ್ಚೆ ಆಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ತಾಪ್ಸೀ ಪನ್ನು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಈ ಪ್ರಕರಣದ ಬಗ್ಗೆ ಮಾಡಲಾದ ಟ್ವೀಟ್ಅನ್ನು ರೀ ಟ್ವೀಟ್ ಮಾಡಿಕೊಂಡಿರುವ ತಾಪ್ಸೀ, ‘ಇದೊಂದು ಕೇಳುವುದು ಬಾಕಿ ಇತ್ತು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೋರ್ಟ್ ಆದೇಶದ ಬಗ್ಗೆ ತೀವ್ರ ಖಾರವಾಗಿ ಪ್ರತಿಕ್ರಿಯಿಸಿದ್ದರು.
‘ಅನ್ನಾಬೆಲ್ಲೆ ಸೇತುಪತಿ’ ಸಿನಿಮಾದಲ್ಲಿ ತಾಪ್ಸೀ ಪನ್ನು ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಾಪ್ಸಿ ನಟನೆ ಬಗ್ಗೆ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ತಾಪ್ಸಿ ಕೈಯಲ್ಲಿ ಬರೋಬ್ಬರಿ 9 ಸಿನಿಮಾಗಳಿವೆ. ಈ ವರ್ಷ ಕೆಲವು ತೆರೆಕಾಣೋಕೆ ರೆಡಿ ಇದ್ದರೆ ಇನ್ನೂ ಕೆಲವು ಮುಂದಿನ ವರ್ಷಕ್ಕೆ ತೆರೆಗೆ ಬರಲಿದೆ.
ಇದನ್ನೂ ಓದಿ: ನಟಿ ತಾಪ್ಸೀ ಪನ್ನು ಡೇಟ್ ಮಾಡುವ ಹುಡುಗನಿಗೆ ಈ ಗುಣ ಇರಲೇಬೇಕು