ಈ ಹಳೆಯ ಮನೆಗೆ ಹೃತಿಕ್​ ಕಟ್ಟುವ ಬಾಡಿಗೆ ಹಣದಲ್ಲಿ ಹೊಸ ಮನೆಯನ್ನೇ ಕೊಳ್ಳಬಹುದು

ಅಮ್ಮ ಪಿಂಕಿ ರೋಷನ್​ ಜತೆ ನಿಂತಿರುವ ಫೋಟೋವನ್ನು ಹೃತಿಕ್​ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಒಂದು ಸಣ್ಣ ಕ್ಯಾಪ್ಶನ್​ ಕೂಡ ನೀಡಿದ್ದಾರೆ. ಈ ಫೋಟೋದಲ್ಲಿ ಹೆಚ್ಚು ಹೈಲೈಟ್​ ಆಗಿದ್ದು ಅಲ್ಲಿರುವ ಗೋಡೆ.

ಈ ಹಳೆಯ ಮನೆಗೆ ಹೃತಿಕ್​  ಕಟ್ಟುವ ಬಾಡಿಗೆ ಹಣದಲ್ಲಿ ಹೊಸ ಮನೆಯನ್ನೇ ಕೊಳ್ಳಬಹುದು
ಈ ಹಳೆಯ ಮನೆಗೆ ಹೃತಿಕ್​ ಕಟ್ಟುವ ಬಾಡಿಗೆ ಹಣದಲ್ಲಿ ಹೊಸ ಮನೆಯನ್ನೇ ಕೊಳ್ಳಬಹುದು

ಬಾಲಿವುಡ್​ನಲ್ಲಿ ಗುರುತಿಸಿಕೊಂಡ ನಂತರದಲ್ಲಿ ಮುಂಬೈನಲ್ಲಿ ಒಂದು ಮನೆ ಖರೀದಿಸಿ ಸೆಟಲ್​ ಆಗೋಕೆ ನಟ-ನಟಿಯರು ಪ್ರಯತ್ನಿಸುತ್ತಾರೆ. ಈಗಾಗಲೇ ಬಾಲಿವುಡ್​ನ ಬಹುತೇಕ ಸ್ಟಾರ್​ ನಟನರು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಆದರೆ, ಖ್ಯಾತ ನಟ ಹೃತಿಕ್​ ರೋಷನ್​ ಬಾಡಿಗೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಅಚ್ಚರಿ ಎಂದರೆ, ಈ ಮನೆಯ ಗೋಡೆಯ ಚೆಕ್ಕೆ ಕಿತ್ತು ಬಂದಿದೆ. ಈ ಮನೆಗೆ ಹೃತಿಕ್​ ರೋಷನ್​​ ದೊಡ್ಡ ಮೊತ್ತದ ಬಾಡಿಗೆ ಕಟ್ಟುತ್ತಿದ್ದಾರೆ.

ಅಮ್ಮ ಪಿಂಕಿ ರೋಷನ್​ ಜತೆ ನಿಂತಿರುವ ಫೋಟೋವನ್ನು ಹೃತಿಕ್​ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಒಂದು ಸಣ್ಣ ಕ್ಯಾಪ್ಶನ್​ ಕೂಡ ನೀಡಿದ್ದಾರೆ. ಈ ಫೋಟೋದಲ್ಲಿ ಹೆಚ್ಚು ಹೈಲೈಟ್​ ಆಗಿದ್ದು ಅವರ ಮನೆಯ ಗೋಡೆ. ಆ ಗೋಡೆಯ ಪೇಂಟ್​ಗಳು ಕಿತ್ತು ಬಂದಿವೆ. ಆ ಗೋಡೆ ಶಿಥಿಲಾವಸ್ಥೆ ತಲುಪಿದಂತೆ ಕಂಡಿದೆ. ಅನೇಕರು ಈ ಬಗ್ಗೆ ಕಮೆಂಟ್​ ಮಾಡಿದ್ದಾರೆ. ಹೃತಿಕ್​ ಮನೆಯ ಗೋಡೆಗಳು ಚೆಕ್ಕೆ ಎತ್ತಿವೆ ಎಂದು ಕೆಲವರು ಕುಹಕವಾಡಿದ್ದಾರೆ. ಅಚ್ಚರಿ ಎಂದರೆ ಹೃತಿಕ್​ ಇದಕ್ಕೆ ಉತ್ತರಿಸಿದ್ದಾರೆ. ‘ನಾನು ಬಾಡಿಗೆ ಮನೆಯಲ್ಲಿದ್ದೇನೆ. ನನ್ನದೇ ಮನೆಯನ್ನು ಶೀಘ್ರವೇ ಕೊಂಡುಕೊಳ್ಳುತ್ತೇನೆ’ ಎಂದು ಹೃತಿಕ್​ ಹೇಳಿದ್ದಾರೆ.

ಹಾಗಾದರೆ ಹೃತಿಕ್​ ಈ ಮನೆಗೆ ಎಷ್ಟು ಬಾಡಿಗೆ ಪಾವತಿ ಮಾಡುತ್ತಿದ್ದಾರೆ. ಅದಕ್ಕೂ ಉತ್ತರವಿದೆ. ಹೃತಿಕ್​ ಈ ಮನೆಗೆ ಪ್ರತಿ ತಿಂಗಳು ಬರೋಬ್ಬರಿ 8.25 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದಾರೆ. ಅಂದರೆ ವರ್ಷಕ್ಕೆ ಅವರು ಬಾಡಿಗೆ ರೂಪದಲ್ಲಿ ಸುಮಾರು 1 ಕೋಟಿ ರೂಪಾಯಿ ಪಾವತಿಸುತ್ತಿದ್ದಾರೆ. ಹೃತಿಕ್​ ಅವರು ಮುಂಬೈನಲ್ಲಿ ಎರಡು ಫ್ಲ್ಯಾಟ್​ ಖರಿಸಿದ್ದಾರೆ ಎನ್ನಲಾಗಿದೆ. ಇದರ ಮೌಲ್ಯ ಬರೋಬ್ಬರಿ 97.5 ಕೋಟಿ ರೂಪಾಯಿ ಎನ್ನಲಾಗಿದೆ. ಈ ಬಗ್ಗೆ ಹೃತಿಕ್​ ಎಲ್ಲಿಯೂ ಹೇಳಿಕೊಂಡಿಲ್ಲ. ಶೀಘ್ರವೇ ಅವರು ಈ ಮನೆಗೆ ಶಿಫ್ಟ್​ ಆಗಲಿದ್ದಾರೆ ಎನ್ನಲಾಗುತ್ತಿದೆ.

ಹೃತಿಕ್ ಸದ್ಯಕ್ಕೆ​ ಅಧಿಕೃತವಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅವರ ನಟನೆಯ ‘ಕ್ರಿಶ್​ 4’ ಸೆಟ್ಟೇರೋಕೆ ಸಿದ್ಧತೆ ನಡೆದಿದೆ. ಇತ್ತೀಚೆಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಯಾವಾಗ ಅಧಿಕೃತ ಘೋಷಣೆ ಆಗುತ್ತದೆ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ.

ಇದನ್ನೂ ಓದಿ: Krrish 4: ‘ಕ್ರಿಶ್​ 4’ ಚಿತ್ರದ ಬಗ್ಗೆ ಅಪ್​ಡೇಟ್​ ನೀಡಿದ ಹೃತಿಕ್​ ರೋಷನ್​; ಅಚ್ಚರಿ ಮೂಡಿಸಿದ ಹೊಸ ಮಾಸ್ಕ್​

Krrish 4: ಮತ್ತೆ ಬರಲಿದೆ ‘ಕೋಯಿ ಮಿಲ್​ ಗಯಾ’ ಜಾದೂ? ಹೃತಿಕ್​ ‘ಕ್ರಿಶ್​ 4’ ಚಿತ್ರದಲ್ಲಿ ಟೈಮ್​ ಟ್ರಾವೆಲಿಂಗ್​ ಕಥೆ

Published On - 9:29 pm, Sun, 19 September 21

Click on your DTH Provider to Add TV9 Kannada